ಭಿನ್ನರೇಖೆಗಳು

Author : ಧರ್ಮಾನಂದ ಶಿರ್ವ

Pages 214

₹ 210.00




Year of Publication: 2022
Published by: ವರ್ಣ ಪಬ್ಲಿಕೇಷನ್ಸ್
Address: ನಂ.254, ಬ್ಲಾಕ್ 175, ಕೆ.ಹೆಚ್.ಬಿ ಅಪಾರ್ಟ್ ಮೆಂಟ್, ಕೆ.ಎಸ್.ಟೌನ್, ಬೆಂಗಳೂರು 560 060

Synopsys

‘ಭಿನ್ನರೇಖೆಗಳು’ ಕೃತಿಯು ಧರ್ಮಾನಂದ ಶಿರ್ವ ಅವರ ಕಥಾಸಂಕಲನವಾಗಿದೆ.ಇಪ್ಪತ್ತೊಂದು ಕತೆಗಳಿರುವ ಈ ಸಂಕಲನವು ನಮ್ಮ ಸುತ್ತಮುತ್ತಲೂ ನಡೆಯುವ ಘಟನೆಗಳಂತೆ ಕಾಣುವ ಹಲವು ವಿಚಾರಗಳನ್ನು ದಾಖಲಿಸುತ್ತವೆ. ರೇಖೆಗಳು ಭಿನ್ನವಾಗಿರುವಂತೆ ಇಲ್ಲಿಯ ಕಥೆಗಳೂ ಒಂದಕ್ಕಿಂತ ಒಂದು ಭಿನ್ನವಾಗಿವೆ. ಕೆಲವೊಂದು ಗಂಭೀರ ಚಿಂತನೆಗೊಳಪಡಿಸುವ ಕಥೆಗಳಾದರೆ ಇನ್ನು ಕೆಲವು ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ಕಥೆಗಳೂ ಇವೆ. ಇನ್ನು ಕೆಲವು ಕಥೆಗಳು ಒಂದು ಚೌಕಟ್ಟಿನೊಳಗೆ ಹಿಡಿದಿಟ್ಟ ಗಹನವಾದ ಕಥಾವಸ್ತುವನ್ನು ಅವರ ಹೊಂದಿರುವಂತಹವುಗಳು. ಹಾಗಾಗಿ ಧರ್ಮಾನಂದ ಶಿರ್ವ ಕಥೆಗಳನ್ನು ಓದುತ್ತಲೇ ಸಮಾಜ, ಅಲ್ಲಿನ ಪರಿಸರ, ಪರಿಸರದ ಜೊತೆಗೆ ಹೊಂದಿಕೊಂಡಂತಿರುವ ಪಾತ್ರಗಳು, ಪಾತ್ರಗಳ ಸ್ವವಿಮರ್ಶೆ, ಅಂತರಂಗದ ತುಮುಲಗಳು, ಬಹಿರಂಗ ಚರ್ಚೆಗಳನ್ನು ಓದುಗನಿಗಾಗಿ ಮುಕ್ತವಾಗಿ ತೆರೆದಿಡುತ್ತವೆ. ಕೆಲವೊಂದು ಕಥೆಗಳು ಓದುಗನಿಗೆ ನೇರವಾಗಿ ಪಾತ್ರಗಳ ಜೊತೆಗೆ ಸಂವಾದ ನಡೆಸುವಲ್ಲಿ, ಚಿಂತನೆ ನಡೆಸುವಲ್ಲಿಯೂ ಸಫಲವಾಗಿವೆ.

About the Author

ಧರ್ಮಾನಂದ ಶಿರ್ವ

ಧರ್ಮಾನಂದ ಶಿರ್ವ ಅವರು ಉಡುಪಿ ಜಿಲ್ಲೆ ಕಾಪು ತಾಲೂಕಿನ ಶಿರ್ವ ಗ್ರಾಮದ ಕಲ್ಲಬೆಟ್ಟುವಿನವರು. ಅಕ್ಟೋಬರ್ 11, 1957ರಲ್ಲಿ ಜನನ. ಪಿಯುಸಿವರೆಗಿನ ಶಿಕ್ಷಣವನ್ನು ಶಿರ್ವದ ಹಿಂದೂ ಜ್ಯೂನಿಯರ್ ಕಾಲೇಜಿನಲ್ಲಿ ಮುಗಿಸಿ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣವನ್ನು ಪಡೆದಿರುತ್ತಾರೆ. ಆರಂಭದಲ್ಲಿ ಭಾರತೀಯ ಅಂಚೆ ಇಲಾಖೆಯಲ್ಲಿ ಕೆಲ ತಿಂಗಳು ಕಾರ್ಯನಿರ್ವಹಿಸಿ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ ಬ್ಯಾಂಕಿನಲ್ಲಿಯೂ ಸೇವೆಯನ್ನು ನೀಡಿದ್ದು, ಬರವಣಿಗೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡರು ಅವರ ಮೊದಲ ಕಥೆ 'ಬದುಕು-ಬಯಕೆ', ಪ್ರಜಾವಾಣಿಯ ರವಿವಾರದ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿತ್ತು. ಸಾಕಷ್ಟು ಕಥೆಗಳು ಸುಧಾ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಮಂಗಳ, ನವಭಾರತ ಮುಂತಾದವುಗಳಲ್ಲಿಯೂ ಪ್ರಕಟಗೊಂಡಿರುತ್ತದೆ. ಕೃತಿಗಳು: ಭಿನ್ನರೇಖೆಗಳು ...

READ MORE

Related Books