ಬಹುತೇಕ ಕತೆಗಳು ಈ ಮೊದಲೇ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಲೇಖಕರ ಸುತ್ತಲಿನ ಪರಿಸರ, ಜೀವನದ ಗಾಢ ಅನುಭವದ ನೆರಳು ಇರುವಂತೆ ನಾಗರಾಜ ಅವರ ೨೦ ಕತೆಗಳಲ್ಲಿಇದೆ. ಹಳ್ಳಿಗಳಲ್ಲಿನ ಅಸ್ಪೃಶ್ಯತೆ ಜಾತಿ, ಮೇಲು-ಕೀಳು, ದೇವರು, ಧರ್ಮದ ಹೆಸರಿನಲ್ಲಿ ನಡೆಯುವ ಶೋಷಣೆ, ದಲಿತರಲ್ಲಿರುವ ಮೌಢ್ಯವನ್ನು ಅವರು ಅತ್ಯಂತ ಸೂಕ್ಷ್ಮವಾಗಿ ಇಲ್ಲಿನ ಕತೆಗಳಲ್ಲಿ ಚಿತ್ರಿಸಿದ್ದಾರೆ. ಕತೆ ನಿರೂಪಣೆ ಶೈಲಿ ಸೊಗಸಾಗಿದೆ. ಎಲ್ಲ ಕತೆಗಳು ಸರಳವಾಗಿ ಓದಿಸಿಕೊಂಡು ಹೋಗುತ್ತವೆ. ಎಲ್ಲಿಯೂ ಗೊಂದಲ-ಗೋಜಲುಗಳಿಗೆ ಆಸ್ಪದವಿಲ್ಲದೆಯೇ ಎಲ್ಲ ಕತೆಗಳು ವಿಸ್ತಾರಗೊಳ್ಳುತ್ತ ಸಾಗುತ್ತವೆ.
ಹೂವಿನಹಳ್ಳಿ ನಾಗರಾಜ ಅವರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿದಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ, ಪ್ರೌಢ ಶಾಲಾ ಶಿಕ್ಷಣವನ್ನು ಬಂದರವಾಡ ಗ್ರಾಮದಲ್ಲಿ, ಪಿಯುಸಿ ಶಿಕ್ಷಣವನ್ನು ಕಲಬುರಗಿಯಲ್ಲಿ ಪೂರೈಸಿ ಮೈಸೂರು ಮುಕ್ಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದು ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದರು. ಹಲಿಗೆ ದ್ಯಾವಪ್ಪ ಮತ್ತು ಇತರ ಕಥೆಗಳು’ ‘ಬಿರುಕು’ಎಂಬ ಎರಡು ಕಥಾಸಂಕಲನಗಳನ್ನು ಹೊರತಂದಿದ್ದಾರೆ. ಕರ್ನಾಟಕ ಸಂಧ್ಯಾಕಾಲ ಹಾಗೂ ಸಂಜೆವಾಣಿ ಸಂಜೆ ದಿನಪತ್ರಿಕೆಗಳಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ. ಸುಧಾ, ಕರ್ಮವೀರ, ಅಗ್ನಿ, ಸುದ್ದಿಮೂಲ, ಜನವಾಣಿ, ಸಂಜೆವಾಣಿ ಸೇರಿದಂತೆ ನಾಡಿನ ಅನೇಕ ಪತ್ರಿಕೆಗಳಲ್ಲಿ ಅವರ ಕಥೆ, ಕವಿತೆ ...
READ MORE