ಹದಿಹರೆಯದ ಎಡವಟ್ಟು

Author : ಸಾರಾ ಅಬೂಬಕ್ಕರ್

Pages 142

₹ 140.00

Buy Now


Year of Publication: 2017
Published by: ಚಂದ್ರಗಿರಿ ಪ್ರಕಾಶನ

Synopsys

ಮಹಿಳೆಯರ ಸ್ಥಿತಿಗತಿಯ ಕುರಿತಂತೆ ಅಪಾರ ಲೇಖನಗಳನ್ನು ಮತ್ತು ಕತೆಗಳನ್ನು ಬರೆದ ಹೆಗ್ಗಳಿಕೆ ಡಾ. ಸಾರಾ ಅಬೂಬಕ್ಕರ್ ಅವರದ್ದು. ಇದೀಗ ಬಂದಿರುವ ಅವರ 'ಹದಿಹರೆಯದ ಎಡವಟ್ಟು' ನೀಳತೆಗಳ ಸಂಕಲನ ಮತ್ತೆ ಮಹಿಳೆಯರ ಮೇಲೆ ನಡೆಯುವ ಶೋಷಣೆಗಳನ್ನು ಕೇಂದ್ರವಾಗಿಟ್ಟು ಅವರು ಬರೆದಿದ್ದಾರೆ. ಇಲ್ಲಿರುವ ಕತೆಗಳು ಕೆಲವು ಕಾರಣಗಳಿಗಾಗಿ ಕೇವಲ ಕತೆಗಳು ಎನ್ನುವಂತಿಲ್ಲ. ಯಾಕೆಂದರೆ ಇದು ಟಿವಿಯಲ್ಲಿ ಸರಿಯಾಗಿ ಹೊರಬರುತ್ತಿದ್ದ 'ಸಾವಧಾನ ಇಂಡಿಯಾ' ಸರಣಿಯಿಂದ ಸ್ಫೂರ್ತಿಯನ್ನು ಪಡೆದಿದೆ. ಸಾಕ್ಷಚಿತ್ರದ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಈ ಸರಣಿ ಹೆಣ್ಣಿನ ಮೇಲೆ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತಿರುವ ದೌರ್ಜನ್ಯ ಶೋಷಣೆಗಳ ಮೇಲೆ ಬೆಳಕು ಚೆಲ್ಲಿದೆ. ನಡೆದ ಘಟನೆಗಳನ್ನು ಇಟ್ಟುಕೊಂಡು ಕಿರು ಚಿತ್ರ ರೂಪದಲ್ಲಿ ಟಿವಿಗಳಲ್ಲಿ ಪ್ರದರ್ಶನಗೊಳ್ಳುತ್ತವೆ. ಶೋಷಣೆಯೆನ್ನುವುದು ಕೇವಲ ಹಳ್ಳಿಗಳಲ್ಲಿ ಮಾತ್ರ ನಡೆಯುವುದಲ್ಲ, ನಗರಗಳಲ್ಲೂ ನಡೆಯುತ್ತವೆ ಅದರಲ್ಲೂ ವಿದ್ಯಾವಂತರೊಳಗೂ ಶೋಷಣೆಗಳಿವೆ ಎನ್ನುವ ಕಟು ಸತ್ಯಗಳನ್ನು ಈ ಟಿವಿ ಸರಣಿಗಳು ಹೊರಚೆಲ್ಲಿವೆ. ಮಾರುಕಟ್ಟೆಗಳಲ್ಲಿ ಹೇಗೆ ಹೆಣ್ಣು ಸರಕಾಗಿ ಬಿಂಬಿತವಾಗುತ್ತಿದ್ದಾಳೆ ಎನ್ನುವುದನ್ನೂ ಈ ಸರಣಿಗಳು ಹೇಳುತ್ತಾ ಬಂದಿವೆ.

About the Author

ಸಾರಾ ಅಬೂಬಕ್ಕರ್
(30 June 1936)

ಕನ್ನಡದ ಪ್ರಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು 1936ರ ಜೂನ್ 30ರಂದು  ಕಾಸರಗೋಡಿನ ಚಂದ್ರಗಿರಿ ತೀರದ  ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಅವರು ಮತ್ತು  ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಿನಲ್ಲೇ ನೆರವೇರಿತು.  ಮುಂದೆ ಅವರು ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಎಂಜನಿಯರ್ ಆಗಿದ್ದ ಅಬೂಬಕ್ಕರ್‌ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ  ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ...

READ MORE

Related Books