ಊರ ಒಳಗಣ ಬಯಲು

Author : ವಿನಯಾ ಒಕ್ಕುಂದ

Pages 82

₹ 40.00




Published by: ಛಂದ ಪುಸ್ತಕ
Address: ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು- 76
Phone: 9844422782

Synopsys

ಡಾ. ವಿನಯಾ ಅವರ ಊರ ಒಳಗಣ ಬಯಲು ಕಥಾ ಸಂಕಲನದಲ್ಲಿ ಒಟ್ಟು 12 ಕತೆಗಳಿವೆ. ಒಂದು ಖಾಸಗಿ ಪತ್ರ, ಊರ ಒಳಗಣ ಬಯಲು, ಕಡಿತನಕಾ ಕಾಯೋ ಅಭಿಮಾನ, ಎಲ್ಲ ಆರಾಮ, ನೋಯದವರೆತ್ತ ಬಲ್ಲರೋ.., ದಣಿವು ಕಾಡುವ ಹೊತ್ತು, ಸ್ವಯ, ಕ್ಷಮೆಯಿರಲಿ ಕಂದಾ, ಪ್ರೀತಿ, ಜಾಣೆಯಾಗಿರು ನನ್ನ ಮಲ್ಲಿಗೆ, ಹತ್ತು ವರ್ಷದ ಹಿಂದೆ ಮುತ್ತೂರ ತೇರಿನಲಿ ಮುಂತಾದವು. 

ಈ ಕೃತಿಗೆ ಬೆನ್ನುಡಿ ಬರೆದಿರುವ ಕೆ.ವಿ. ನಾರಾಯಣ ಅವರು ’ಅನುಭವಗಳು ನೆನಪುಗಳಾದಾಗ ಅವು ಮಾಯದ ಗಾಯಗಳಾಗುತ್ತವೆ. ಗಾಯ ಮಾಯ್ದರೆ ಅದರ ಕಲೆಗಳನ್ನು ಮುಟ್ಟುತ್ತಿರುವಾಗ ದೊರಕುವ ಹಿತ ಈ ತೆರೆದ ಗಾಯಗಳಿಂದ ದೊರಕುವುದಿಲ್ಲ. ಅವು ಎಂದೂ ನಿನ್ನೆಗಳ ಹೊರೆಯನ್ನು ಹೆಚ್ಚಿಸುತ್ತವೆ. ವಿನಯಾ ಅವರ ಹೆಚ್ಚು ಕತೆಗಳು ಇಂತಹ ಅವಸ್ಥೆಯಲ್ಲಿ ಮೈ ತಳೆದಿವೆ. ಈ ಹೊತ್ತಿನ ಬದುಕಿನಲ್ಲಿ ಇಣುಕುವ ನಿನ್ನೆಗಳು, ಕಳೆದು ಹೋದದ್ದರ ಅಸಹನೀಯತೆಯನ್ನು ಗಾಢವಾಗುವಂತೆ ಮಾಡುವ ಜತೆಗೆ ಇಂದಿನ ಬದುಕನ್ನೂ ರಾಡಿಗೊಳಿಸಬಲ್ಲವೆಂಬ ಭಾವ ಕತೆಗಳಲ್ಲಿ ಮೂಡುವಂತಿದೆ’ ಎನ್ನುತ್ತಾರೆ. 

About the Author

ವಿನಯಾ ಒಕ್ಕುಂದ
(24 October 1968)

ವಿನಯಾ- ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ, ಕುಮಟಾ ತಾಲೂಕಿನ ನಾಡುಮಾಸ್ಕೇರಿಯಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ 1990ರಲ್ಲಿ ಕನ್ನಡ ಎಂ.ಎ, 1992ರಲ್ಲಿ ಎಂ.ಫಿಲ್. ಹಾಗೂ 1996ರಲ್ಲಿ ಪಿಎಚ್.ಡಿ ಪದವಿ ಪಡೆದಿದ್ದು, ಸವಣೂರು, ನರಗುಂದದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಧ್ಯ ಧಾರವಾಡ ಜಿಲ್ಲೆಯ ಅಳ್ಳಾವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ವಿನಯಾ ಅವರ ಕವನ ಸಂಕಲನಗಳು: ಬಾಯಾರಿಕೆ, ನೂರು ಗೋರಿಯ ದೀಪ, ಹಸಬಿ, ಇನ್ನೂ ಕಥಾ ಸಂಕಲನಗಳು: ಊರ ...

READ MORE

Awards & Recognitions

Related Books