ಆರದಿರಲಿ ಬೆಳಕು

Author : ಕರುಣಾಕರ ಎನ್. ಶೆಟ್ಟಿ

Pages 182

₹ 150.00
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಮಹಾರಾಷ್ಟ್ರ ಘಟಕ
Phone: 98203 57758

Synopsys

ಜೀವನ ನಿರ್ವಹಣೆಗಾಗಿ ಮುಂಬೈನಗರದ ದಾರಿ ಹಿಡಿದು ಅಲ್ಲಿ ಕೇವಲ ಕೆಲಸಕ್ಕೆಮಾತ್ರ ಸೀಮಿತವಾಗದೆ ಸಾಹಿತ್ಯ, ಕಲೆ, ಸಂಸ್ಕೃತಿಯ ಮೂಲಕ ತಮ್ಮ ಬೇರನ್ನು, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿರುವ ಸುಮಾರುಜನ ನಮಗೆ ಕಾಣ ಸಿಗುತ್ತಾರೆ. ಅಂತಹ ಒಂದು ಪ್ರಯತ್ನದ ಭಾಗವೇ, ಡಾ. ಕರುಣಾಕರ್ ಎನ್. ಶೆಟ್ಟಿ ಪಣಿಯೂರು ಅವರ ಕಥಾ ಸಂಕಲನ 'ಆರದಿರಲಿ ಬೆಳಕು'. ಕನ್ನಡ ಸಾಹಿತ್ಯ ಪರಿಷತ್ತು, ಮಹಾರಾಷ್ಟ್ರ ಘಟಕವು ತನ್ನ ಶತಮಾನದ ಸಂಭ್ರಮದ ಹಿನ್ನೆಲೆಯಲಋು ಈ ಕೃತಿಯನ್ನು ಹೊರ ತಂದಿದೆ.. ಈ ಕತೆಗಳು ಮಹಾರಾಷ್ಟ್ರದ ಮಣ್ಣಿನಲ್ಲಿ ಬೆಳಕು ಕಂಡಿದ್ದರೂ, ಇವುಗಳ ಮೂಲ ಸೆಲೆಯಿರುವುದು ದಕ್ಷಿಣ ಕನ್ನಡದ ತುಳು ಸಂಸ್ಕೃತಿಯಲ್ಲಿ ಅಲ್ಲಲ್ಲಿ ನಗರಗಳ ಬದುಕು ಕಾಣುತ್ತವೆಯಾದರೂ, ಅದು ಅಂತಿಮವಾಗಿ ಹೋಗಿ ನಿಲ್ಲುವುದು ಹುಟ್ಟಿದ ಊರಿನಲ್ಲಿ. ಇಲ್ಲಿ ಒಟ್ಟು 18 ಕತೆಗಳಿವೆ. ಎಲ್ಲವೂ ಯಾವುದೇ ನಿರೂಪಣಾ ತಂತ್ರಗಳಿಲ್ಲದೆ, ಸರಾಗವಾಗಿ ಹರಿಯುವ, ಸರಳವಾಗಿ ಒಪ್ಪಿತವಾಗುವ ಕತೆಗಳು, ಜೀವನ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಕತೆಗಾರರ ಮುಖ್ಯ ಉದ್ದೇಶವಾಗಿದೆ.

Related Books