ಪರಮೂ ಪ್ರಪಂಚ-

Author : ಇಂದ್ರಕುಮಾರ್‌ ಎಚ್.ಬಿ

Pages 100

₹ 150.00

Synopsys

 ಎಚ್‌.ಬಿ. ಇಂದ್ರಕುಮಾರ್‌ ಅವರ ಮೂರನೇ ಕಥಾ ಸಂಕಲನ ’ಪರಮೂ ಪ್ರಪಂಚ’. ಹೊಸ ತಲೆಮಾರಿನ ಪ್ರಮುಖ ಕತೆಗಾರರಾದ ಇವರು ತಮ್ಮ ವಾರಗೆಯ ಕತೆಗಾರರಿಗಿಂತಲೂ ಭಿನ್ನವಾಗಿರುವುದು ಸದಾ ಹೊಸತನಕ್ಕೆ ತುಡಿಯುವ ಕಾರಣಕ್ಕೆ. 

ಸಂಕಲನ ಒಟ್ಟು ಹತ್ತು ಕತೆಗಳನ್ನು ಹೊಂದಿದೆ. ಶೀರ್ಷಿಕೆ ಕತೆಯು ಪರಮೂ ಮತ್ತು ಮೃಣಾಲರ ಗೊಂದಲ, ಸಂಘರ್ಷದ ಬದುಕಿಗೆ ಹಿಡಿದ ಕನ್ನಡಿ. ಜೀಪು ಇಲ್ಲಿ ಚಲಿಸುವ ಬದುಕಿನ ರೂಪಕ. ’ಹೊರೆ’ ಇದಮಿತ್ಥಂ ಎನ್ನುವ ಬದುಕನ್ನು ಒಡೆದು ನೋಡುವ ಕತೆ. ಅನೂಹ್ಯ ತಿರುವುಗಳ ’ಇಷ್ಟಗಂಧ’, ರೋಚಕತೆಯಿಂದ ಕೂಡಿದ ’ಗ್ರಹಣ’, ಪ್ರೇಮದ ತುಮುಲಗಳನ್ನು ತೆರೆದಿಡುವ ’ಗಿಫ್ಟ್‌’, ಸರಳತೆಯಿಂದಾಗಿಯೇ ಗಮನ ಸೆಳೆಯುವ ’ಅಣ್ಣನ ನೆನಪಲ್ಲಿ’ ಇಲ್ಲಿನ ಯಶಸ್ವಿ ಕತೆಗಳು. 

About the Author

ಇಂದ್ರಕುಮಾರ್‌ ಎಚ್.ಬಿ

'ಆ ಮುಖ', 'ನನ್ನ ನಿನ್ನ ನೆಂಟತನ', 'ಪರಮೂ ಪ್ರಪಂಚ' ಹಾಗೂ 'ಕಾಣದ ಕಡಲು' ಸಂಕಲನಗಳ ಮೂಲಕ ಗಮನ ಸೆಳೆದವರು ಕಥೆಗಾರ ಇಂದ್ರಕುಮಾರ್ ಎಚ್‌.ಬಿ. ವೃತ್ತಿಯಿಂದ ಶಿಕ್ಷಕರಾಗಿರುವ ಇವರ ಕಾದಂಬರಿಗಳು ’ಮೃದುಲಾ’ ಮತ್ತು’ಹುಲಿಕಾನು’.  ಚಿತ್ರದುರ್ಗ ಮೂಲದವರಾದ ಇಂದ್ರಕುಮಾರ್ ಅವರ ಕತೆಯೊಂದು ’ಸೂಜಿದಾರ’ ಹೆಸರಿನಲ್ಲಿ ಸಿನಿಮಾ ಸಹ ಆಗಿದೆ. ತಮ್ಮದೇ ಇಂಪನ ಪ್ರಕಾಶನದ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.  ಡಾ. ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ, ಜನ್ನಾ ಸನದಿ ಸಾಹಿತ್ಯ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಅರಳು ಪ್ರಶಸ್ತಿ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ 'ಯುವ ಪುರಸ್ಕಾರ',  ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿರುವ ಅವರು ಗುಲ್ಬರ್ಗಾ ವಿವಿಯ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಚಿನ್ನದ ...

READ MORE

Related Books