ಕಥಾರೂಪದ ಯೋಗಾಸನ

Author : ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)

Pages 142

₹ 23.00
Year of Publication: 2007
Published by: ಅನಾಥ ಸೇವಾಶ್ರಮ ವಿಶ್ವಸ್ತ ಸಮಿತಿ
Address: ಮಲ್ಲಾಡಿಹಳ್ಳಿ- 577531

Synopsys

‘ಕಥಾರೂಪದ ಯೋಗಾಸನ’ ತಿರುಕ ಅವರ ಕಥಾಸಂಕಲನವಾಗಿದೆ. ಬಕಧ್ಯಾನ ಮತ್ತು ಸಚಿತ್ರ ಕತೆಗಳನ್ನು ಒಳಗೊಂಡ ಭಾಗ-1 ಕೃತಿ ಇದಾಗಿದ್ದು, ರೇಖಾಚಿತ್ರವನ್ನೊಳಗೊಂಡ ಕತೆಗಳನ್ನು ಇಲ್ಲಿ ನೋಡಬಹುದಾಗಿದೆ. ರಾಮಾಯಣದ ಕತೆಯನ್ನು ಇಲ್ಲಿ ಹೆಣೆಯಲಾಗಿದೆ. ತಂದೆಯಾದ ದಶರಥನ ಮಾತನ್ನು ನಡೆಸುವುದಕ್ಕಾಗಿ ಶ್ರೀರಾಮನು ಸೀತೆ, ಲಕ್ಷ್ಮಣರೊಡನೆ ಕಾಡಿಗೆ ಹೊರಟನು. ರಾಮ ಲಕ್ಷ್ಮಣರು ನಾರುಮಡಿಯನ್ನು ಉಟ್ಟು, ಕೈಯಲ್ಲಿ ಧನುಸ್ಸನ್ನು (ಬಿಲ್ಲು) ಹಿಡಿದಿದ್ದರು. ಅಡವಿಗೆ ಹೊರಟ ಆಕೆ ಅವುಗಳನ್ನು ಕುರಿತು “ಎಲೈ ಕಮಲಗಳೇ, ನೀವು ನನ್ನ ಚೆನ್ನಮಲ್ಲಿಕಾರ್ಜುನನ್ನು ಕಂಡಿರಾ?” ಎಂದು ಕೇಳಿದಳು. ಅವು ಸುಮ್ಮನಿದ್ದವು. ಅಕ್ಕಮಹಾದೇವಿ ಮುಂದೆ ನಡೆದಳು. ಹಾದಿಯಲ್ಲಿ ಹರಿಯುತ್ತಿದ್ದ ಒಂದು ಭುಜಂಗ (ಹಾವು ಕಾಣಿಸಿತು. ಆಕೆ ಅದನ್ನೂ ಕುರಿತು “ಚೆನ್ನಮಲ್ಲಿಕಾರ್ಜುನ ನನ್ನು ನೀನು ಕಂಡೆಯಾ? ಎಂದು ಕೇಳಿದಳು. ಹೀಗೆ ಇಲ್ಲಿನ ಕತೆಗಳು ರೇಖಾಚಿತ್ರಗಳೊಂದಿಗೆ ಸುಂದರವಾಗಿ ಮೂಡಿಬಂದಿದೆ.

About the Author

ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ)
(18 March 1891 - 04 August 1996)

ಕೇರಳದಲ್ಲಿ ಹುಟ್ಟಿ, ಚಿತ್ರದುರ್ಗ ಜಿಲ್ಲೆಯ, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿ ಹಳ್ಳಿಯಲ್ಲಿದ್ದು, ತಿರುಕ ಎಂ ಕಾವ್ಯನಾಮದೊಂದಿಗೆ ಬೆಳೆದವರು. ತಂದೆ ಅನಂತ ಪದ್ಮನಾಭ ನಂಬೂದರಿ, ತಾಯಿ ಪದ್ಮಂಬಾಳ್. ಈ ಮಗುವಿಗೆ ದೇಹ ವಿಕಾರ ಹಾಗೂ ಮೆದುಳಿನ ಬೆಳವಣಿಗೆ ಸರಿಯಾಗಿರಲಿಲ್ಲ. ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ದಂಪತಿ ಬಾರಕೂರಿನಲ್ಲಿ ತಂಗಿದ್ದರು. ಆ ಹಾದಿಯಲ್ಲಿ ಉಡುಪಿಗೆ ಹೊರಟಿದ್ದ ಮಂತ್ರಾಲಯದ ಪೀಠಸ್ಥ ಸ್ವಾಮಿಗಳು ಈ ಮಗುವನ್ನು ಕಂಡು ಕೀರ್ತಿವಂತನಾಗುವುದಾಗಿ ಹರಸುತ್ತಾರೆ.  ತಂದೆ ಈ ಮಗುವನ್ನು ಸಾಕಲಾಗದೆ ಅತಿಥೇಯರಾಗಿದ್ದ ನರಸಿಂಹಯ್ಯ – ಪುತಲೀ ಬಾಯಿ ಅವರಿಗೆ ದತ್ಯತು ಕೊಟ್ಟು ಯಾತ್ರೆ ಹೊರಡುತ್ತಾರೆ. ಈ ಮಗು ಮುಂದೆ ರಾಘವೇಂದ್ರ ಎಂದು ನಾಮಕರಣವಾಗುತ್ತದೆ. ಕುಂದಾಪುರದ ಶಾಲೆಗೆ. ...

READ MORE

Related Books