ಅಪ್-ಟು-ಡೇಟ್ ಅಜ್ಜಿ ಮತ್ತು ಇತರೆ ಕಥೆಗಳು

Author : ಇ. ಆರ್. ರಾಮಚಂದ್ರನ್

Pages 256

₹ 210.00
Year of Publication: 2019
Published by: ನ್ಯೂ ವೇವ್ ಬುಕ್ಸ್
Address: #90/3, ಮೊದಲನೇ ಮಹಡಿ, ಬಸವನಗುಡಿ, ಬೆಂಗಳೂರು- 560 004
Phone: 9448788222

Synopsys

'ಅಪ್ ಟು ಡೇಟ್ ಅಜ್ಜಿ ಮತ್ತು ಇತರೆ ಕಥೆಗಳು' ಪುಸ್ತಕ ಒಂದು ಹಾಸ್ಯ ಬರೆಹಗಳ ಸಂಕಲನ. ಸುಧಾ, ಅಪರಂಜಿ, ಚುರುಮುರಿ, ಹಿಂದುಸ್ತಾನ್ ಟೈಮ್ಸ್, ಸ್ಟಾರ್ ಅಫ್ ಮೈಸೂರ್, ಮೈಸೂರ್ ಮೈಲ್, ವನ್ ಇಂಡಿಯ ಡಾಟ್ ಕಾಂ ನಲ್ಲಿ ಬಂದ ಕಥೆಗಳ ಹಾಸ್ಯಗುಚ್ಛ.

ಪುಸ್ತಕದಲ್ಲಿ ಎರಡು ಭಾಗಗಳಿವೆ. ಮೊದಲ ತೊಂಬತ್ತು ಪುಟಗಳಲ್ಲಿ ಅಜ್ಜಿ ಮತ್ತು ಮೊಮ್ಮಗನ ಸಂಭಾಷಣೆಯಲ್ಲಿ ಬರುವ ಕಥೆಗಳು. ಅಜ್ಜಿ ಒಂದು ಟು-ಇನ್-ವನ್ ಮಾಡೆಲ್. ಹರಿಕಥೆ, ಪುರಾಣ, ಸ್ಕಂದ ಪುರಾಣ, ಸತಿ ಸಾವಿತ್ರಿ ಪೌರಾಣಿಕ ಕಥೆಗಳು ಅಜ್ಜಿಗೆ ನೀರು ಕುಡಿದ ಹಾಗೆ. ಊಸಿರಾಟದಲ್ಲೂ ಬರುತ್ತೆ. ಹಾಗೆ ಇ-ಮೇಲ್, ಫೇಸ್ಬುಕ್, ವಾಟ್ಸ್ಯಾಪ್ ನಲ್ಲೂ ಪರಿಣಿತೆ. ಈಗಿನ ಕಾಲದಲ್ಲಿ ಅದೇನೂ ಆಶ್ಚರ್ಯದ ಮಾತಲ್ಲ! ಅಜ್ಜಿಗೆ ಯಾವ ಹೆದರಿಕೆಯೂ ಇಲ್ಲ. ತಾನು ಹೇಳಬಯಸಿದ್ದನ್ನು ಘಂಟಾಘೋಷವಾಗಿ ಹೇಳುವ ಡೋಂಟ್ ಕೇರ್ ಅಜ್ಜಿ. ಕೆಲವು ಸಲ ನಮಗೆ ದಾರಿದೀಪವಾಗಿ ಸರಿ ತಪ್ಪನ್ನು ತೋರಿಸಲು ಅಂಥವರು ಬೇಕು. ಇದರಲ್ಲಿ 'ಐಪಿಎಲ್ ದಾರಿಯಲ್ಲಿ ಯು-ಟರ್ನ್', 'ಆನ್ ಲೈನ್ ಅಜ್ಜಿ', 'ಮ್ಯಾಗಿಗೊಂದು ಸಬ್ಸ್ಟಿಟ್ಯೂಟ್', 'ಅಜ್ಜಿಯ ಆನ್ ಲೈನ್ ಟೂರ್', 'ಅಜ್ಜಿಯ ಯುನೀಕ್ ಎಕನಾಮಿಕ್ಸ್' ಇವುಗಳು ನಮ್ಮ ವಾಸ್ತವಿಕ ಪರಿಸ್ಥಿತಿಯ ಬಗ್ಗೆ ಅಜ್ಜಿಯ ಟೀಕೆ. ಮಿಕ್ಕ ಕಥೆಗಳು ಸಾಮಾನ್ಯವಾಗಿ ನಾವು ದಿನಚರಿಯಲ್ಲಿ ಕಂಡು ಬರುವ ವ್ಯಕ್ತಿಗಳ ಮೇಲೆ ಆಧಾರವಾಗಿಟ್ಟುಕೊಂಡು ಬರೆದಿದ್ದು.ಸ್ಕೂಲಿಗೆ ಸೇರಿಸಲು ಹೋದಾಗ ತಂದೆ ತಾಯಿ ಎದುರಿಸ ಬೇಕಾದ 'ಎಜುಕೇಷನ್ ಎಡವಟ್ಟು', ಮಕ್ಕಳಿಗೆ ಸ್ಕೂಲಿನಲ್ಲಿ ಸೆಕ್ಯೂರಿಟಿ ಇದೆಯೇ ಅನ್ನುವ ಪ್ರಶ್ನೆಗೆ 'ಸ್ಕೂಲಿನಲ್ಲಿ ಸೆಕ್ಯೂರಿಟಿ ರಿಂಗ್', ಅಕ್ಷಯ ತೃತೀಯ ಮುಂದೆ ಹೇಗೆ ಬೆಳೆಯ ಬಹುದು ಅಂದು ಯೋಚಿಸುವ, 'ಜೆ-ಜೆ ಸ್ಖೂಲ್ ಅಫ್ ಮಾರ್ಕೆಂಟಿಂಗ್, ಮನೆಕಟ್ಟುವ 'ಡೆವಲಪರ್ಸರ ಮೆಗಾಪ್ಲಾನ್ಗಳು' ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತೆ, ನಮ್ಮ ಪತ್ರ ಬರಿಯುವಿಕೆ ಈಗ ಎಲ್ಲಿಗೆ ಹೋಗಿದೆ ಎಂದು ತೋರಿಸುವ 'ಸ್ಲೋ ವರ್ಸಸ್ ಇ-ಮೇಲ್', 'ಕಸಬ್ನ ಕಳಕಳಿ', 'ಆಗಿನ ಕಾಲದ ಟೈಲರ್ಗಳು', 'ಹಿಂದಿ ಚೀನಿ ಪರಾರಿ', 'ಐಪಿಎಲ್ ಮತ್ತು ಆರ್ ಎಮ್ ಎಲ್', 'ಟೆಂಪಲ್ ಪ್ರೀಮಿಯರ್ ಲೀಗ್', 'ಟು-ಇನ್-ವನ್ ಡಾಕ್ಟರ್' ಇತ್ಯಾದಿ. ಈ ಕೃತಿಯನ್ನು ಲೇಖಕ ಇ.ಆರ್. ರಾಮಚಂದ್ರನ್ ರಚಿಸಿದ್ದಾರೆ.

ಹಾಸ್ಯ ಮತ್ತು ವಿಡಂಬನೆ ಎರಡೂ ಜೀವನಕ್ಕೆ ಬೇಕಾದ ಮುಖ್ಯ ಅಂಶಗಳು. ನಗುವುದು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಹಾಗೆ ವಿಡಂಬನೆಯೂ ನಾವು ದಾರಿ ತಪ್ಪದೇ ಇರಲಿ ಎಂದು ನಮ್ಮ ಜೀವನದ ವಾಹನಕ್ಕೆ ಹಾಕುವ ಬ್ರೇಕ್. ಎರಡನ್ನೂ ಅರ್ಥಪೂಣ್ವಾಗಿ ಬೆಸೆದ ಕೃತಿ ಇದು.

About the Author

ಇ. ಆರ್. ರಾಮಚಂದ್ರನ್

ಲೇಖಕ ಇ. ಆರ್. ರಾಮಚಂದ್ರನ್ ಅವರು `ಶಂಕರ್‍ಸ್‌ ವೀಕ್ಲಿ'ಯಲ್ಲಿ ಹಾಸ್ಯ ಲೇಖನವನ್ನು ಬರೆಯುತ್ತಿದ್ದರು. ಫಿಲಿಪ್ಸ್ ಕಂಪನಿಯಿಂದ ನಿವೃತ್ತರಾದ ನಂತರ ಮೈಸೂರಿನಲ್ಲಿ ನೆಲೆಸಿದ್ದಾರೆ. ಅವರು ಈಗ ಅಪರಂಜಿ ಮಾಸಿಕ ಪತ್ರಿಕೆಗೆ ಹಾಸ್ಯ ಲೇಖನ ಬರೆಯುತ್ತಿದ್ದು ಕೆಂಡಸಂಪಿಗೆ, ಆಂದೋಲನ ಮುಂತಾದೆಡೆ ಅವರ ಲೇಖನಗಳು ಪ್ರಕಟವಾಗಿವೆ. ಚುರುಮುರಿ, ಹಿಂದುಸ್ತಾನ್ ಟೈಮ್ಸ್, ಸಿಎನ್ ಎನ್ ಮತ್ತು ನ್ಯೂಸ್‌ 18ನಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ‘ಅಜ್ಜಿ ಮತ್ತು ಇತರ ಕತೆಗಳು’ ಅವರ ಪ್ರಕಟಿತ ಕೃತಿ. ...

READ MORE

Related Books