ನದಿಯ ದಡದ ಮೇಲೆ

Author : ಎಚ್.ಎಂ. ನಾಗರಾಜರಾವ್ ಕಲ್ಕಟ್ಟೆ

Pages 108

₹ 75.00
Year of Publication: 2009
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ
Phone: 9141833556

Synopsys

‘ನದಿಯ ದಡದ ಮೇಲೆ' ನಾಗರಾಜರಾವ್ ರವರ ಪ್ರಥಮ ಕಥಾಸಂಕಲನ, ಕಥೆ ರಚನೆ ಸುಲಭದ ಮಾತಲ್ಲ, ಅಲ್ಲಿ ಸತ್ಯವೂ ಬೇಕು, ಕಲ್ಪನೆಯೂ ಬೇಕು. ಹದ ಕಡಿಮೆಯಾದರೆ ಹಸಿ, ಹೆಚ್ಚಾದರೆ ಕರಕಲು ಎಂಬ ಅಪಾಯ. ಚಿತ್ರದಲ್ಲಿ ಮೂಡಿದ್ದನ್ನು ಅಕ್ಷರ ರೂಪಕ್ಕೆ ಇಳಿಸಿದಾಗ ಓದುಗ ಹೇಗೆ ಸ್ವೀಕರಿಸುತ್ತಾನೆ ಎಂಬ ಅರಿವಿರಬೇಕು. ಇಲ್ಲಿನ ಹೆಚ್ಚಿನ ಕತೆಗಳಲ್ಲಿ ಆ ಅರಿವಿರುವುದು ಹೌದು. “ಇಲ್ಲಿ ಆದರ್ಶದ ಹೊರೆಯಿಲ್ಲ, ವಕ್ರವಾದ ಗೆರೆಯಿಲ್ಲ, ಎಲ್ಲವೂ ಸರಳಾತಿ ಸರಳ, ಸಹೃದಯ ಸ್ಪರ್ಶಿ ಸ್ವರೂಪಗಳೇ, ಅನುಭವವನ್ನು ಕಥಾಚೌಕಟ್ಟಿಗೆ ತರುವುದು ಒಂದು ಕುಸುರಿ ಕೆಲಸ, ಆ ಬಗೆಯ ಕುಶಲತೆಯನ್ನು ಎಚ್. ಎಂ. ನಾಗರಾಜ್ ರಾವ್ ಕಲ್ಲಟ್ಟೆ ರೂಢಿಸಿಕೊಂಡಿದ್ದಾರೆ. ಮಧ್ಯಮ ವರ್ಗದ ಕುಟುಂಬದೊಳಗೆ ನಡೆವ ಈ ಕಥೆಗಳು ಮಾತ್ರ ಮೇಲು ಮಟ್ಟದಲ್ಲಿವೆ

About the Author

ಎಚ್.ಎಂ. ನಾಗರಾಜರಾವ್ ಕಲ್ಕಟ್ಟೆ

ಲೇಖಕ, ಗಾಯಕ, ನಾಟಕಕಾರ ಎಚ್. ಎಂ. ನಾಗರಾಜರಾವ್ ಕಲ್ಕಟ್ಟೆ ಪ್ರಸ್ತುತ ಚಿಕ್ಕಮಗಳೂರು ತಾಲ್ಲೂಕು ಕಳಸಾಪುರದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರು. ವಿದ್ಯಾರ್ಥಿ ಜೀವನದಲ್ಲಿ ಇವರು ಕಲಿಕೆಯಲ್ಲಿ ಚಿನ್ನದ ಪದಕಗಳನ್ನು ಗಳಿಸಿದವರು. ಸಾಹಿತ್ಯ, ಸಂಗೀತ, ಅಭಿನಯ, ಸಾಂಸ್ಕೃತಿಕ ಸಂಘಟನೆ, ಸಮಾಜಸೇವೆ, ಧಾರ್ಮಿಕ ಸೇವೆ ಹೀಗೆ ಹಲವು ಕ್ಷೇತ್ರಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅವರ ಸಾಹಿತ್ಯವಿರುವ ನೂರಕ್ಕೂ ಹೆಚ್ಚು ಅಡಕ ಮುದ್ರಿಕೆಗಳು ಲೋಕಾರ್ಪಣೆಗೊಂಡಿವೆ. ಕಾಂತಾವರ ಕನ್ನಡ ಸಂಘವೇ ಪ್ರಕಟಿಸಿದ 'ಕನ್ನಡ ಕೋಗಿಲೆ ಪಿ. ಕಾಳಿಂಗರಾವ್' ಹಾಗೂ ’ಪ್ರಥಮ ಪುಟ’, ’ಬೆಳಕು’ ಪುಸ್ತಕವೂ ಸೇರಿ ಈವರೆಗೆ ಇಪ್ಪತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಆರು ಕೃತಿಗಳನ್ನು ...

READ MORE

Related Books