ಲೇಖಕ ’ಕು. ಗೋ' ಖ್ಯಾತಿಯ ಎಚ್.ಗೋಪಾಲಭಟ್ಟರು ಬರೆದಿರುವ ಕಥಾ ಸಂಕಲನ ’ಎತ್ತಣಿದೆಂತ್ತ’. ಇವರ ಆಯ್ದ ಕಥೆಗಳ ಈ ಸಂಗ್ರಹದಲ್ಲಿ ತಿಳಿಹಾಸ್ಯದ, ಮೇಲುದನಿಯ ಬರಹಗಳ ಆಳದಲ್ಲಿ ಗಂಭೀರ ಚಿಂತನೆಯ ಸೆಳಹುಗಳಿವೆ. ಬದುಕಿನ ವಿವಿಧ ಮಗ್ಗುಲುಗಳ ಸೂಕ್ಷ್ಮದರ್ಶನವಿದೆ. ಸಾಹಿತ್ಯದ ಸಿದ್ಧಾಂತಗಳು, ವಿಮರ್ಶೆಯ ಸೂತ್ರಗಳು, ಬರವಣಿಗೆಯ ತಂತ್ರಗಳು, ಸಾಹಿತ್ಯ ಪಕಾರದ ಚೌಕಟ್ಟು ಇತ್ಯಾದಿ ಬಗ್ಗೆ ತಲೆ ಕೆಡಿಸಿಕೊಳ್ಳದೇ, ಕು. ಗೋ. ತಮ್ಮ ಸ್ವಾನುಭವಕ್ಕೆ ನಿಷ್ಠರಾಗಿ ಸರಳವಾಗಿ, ಸಹಜವಾಗಿ, ಸ್ವಾರಸ್ಯಕರವಾಗಿ ಕಥೆ ಹೇಳುತ್ತಾರೆ. ಈ ಕೃತಿಯಲ್ಲಿ ತಮ್ಮ ಬದುಕಿನ ಅನುಭವವನ್ನೇ ಸ್ವಾರಸ್ಯವಾಗಿ ಕಥೆಯಾಗಿಸಿದ್ದಾರೆ ಎನಿಸುತ್ತದೆ
'ಕು. ಗೋ' ಎಂದೇ ಜನಪ್ರಿಯರಾಗಿರುವ ಲೇಖಕ ಹೆರ್ಗ ಗೋಪಾಲ ಭಟ್ಟರು ತಮ್ಮ ಪುಸ್ತಕ ಪ್ರೀತಿಗಾಗಿ ಹೆಸರಾದವರು. ಅವರನ್ನು ಕುರಿತು ’ಪುಸ್ತಕ ಸಂಸ್ಕೃತಿಯ ಪರಿವ್ರಾಜಕ ಕು.ಗೋ’ ಎಂಬ ಗ್ರಂಥ ಪ್ರಕಟವಾಗಿದೆ. ಗೋಪಾಲ ಭಟ್ಟರು ಜನಿಸಿದ್ದು 1938 ರ ಜೂನ್ 6ರಂದು. ತಂದೆ ಅನಂತ ಪದ್ಮನಾಭ ಭಟ್ಟ ಮತ್ತು ತಾಯಿ ವಾಗ್ದೇವಿಯಮ್ಮ. ಎಸ್. ಎಸ್. ಎಲ್. ಸಿಯಲ್ಲಿ ರಾಜ್ಯಮಟ್ಟದಲ್ಲಿ 37ನೇ Rank ಪಡೆದ ಅವರು ಮೈಸೂರಿನ ಯುವರಾಜ ಕಾಲೇಜು ಮತ್ತು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಮತ್ತು ಬಿ. ಎಸ್ಸಿ ಓದು ಕೈಗೊಂಡರು. ಕಾರಣಾಂತರಗಳಿಂದ ಅವರಿಗೆ ಬಿ. ಎಸ್ಸಿ ಪೂರ್ಣಗೊಳಿಸಲಾಗಲಿಲ್ಲ. ಉದ್ಯೋಗಕ್ಕೆ ಸೇರಿದ ನಂತರ ಅಂಚೆ ತೆರಪಿನ ಮೂಲಕ ...
READ MORE