ದಲಿತರ ನಮ್ಮ ಕಥೆಗಳು

Author : ಕೆ. ಸತ್ಯನಾರಾಯಣ

Pages 123

₹ 90.00
Year of Publication: 2013
Published by: ಸಪ್ನ ಬುಕ್ ಹೌಸ್
Address: #3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು- 560009
Phone: 08040114455

Synopsys

ಕೆ. ಸತ್ಯನಾರಾಯಣ ಅವರ ಕಥಾ ಸಂಕಲನ ‘ದಲಿತರ ನಮ್ಮ ಕಥೆಗಳು’. ಸಾಮಾಜಿಕ ಬದಲಾವಣೆ, ಆದರ್ಶದ ಮಾತಿನಿಂದ ಅಳವಡಿಕೆಯ ಪ್ರತಿಕ್ರಿಯೆಗೆ ದಾಟುವುದು, ದಾಟಿದ ನಂತರ ಬದಲಾವಣೆ ಬಗ್ಗೆ ವಿಮರ್ಶೆಯ ಎಚ್ಚರವನ್ನು ಉಳಿಸಿಕೊಳ್ಳುವುದು ಮತ್ತೆ ಇನ್ನೊಂದು ನೆಲೆಗೆ ಅದನ್ನು ಮುಂದುವರಿಸುವುದು ಸ್ವಹಿತಾಸಕ್ತಿಗಳು ವೈವಿಧ್ಯಮಯವಾಗಿರುವ ನಮ್ಮ ಸಮಾಜದಲ್ಲಿ ಕಷ್ಟದ ಕೆಲವಸೇ.

ಆದರೆ ಅಂತಹ ಕಷ್ಟಗಳನ್ನು ಸಲೀಸಾಗಿ ನಿಭಾಯಿಸಿದ ಹಲವು ನಾಯಕರು ಇಂಡಿಯಾದಲ್ಲಿ ಆಗಿ ಹೋಗಿದ್ದಾರೆ. ಕರ್ನಾಟಕದ ಮಟ್ಟಿಗಂತೂ ಹಿಂದುಳಿದ ವರ್ಗಗಳಿಗೆ ಮಹತ್ತರ ಸಾಮಾಜಿಕ ಬದಲಾವಣೆಗಳನ್ನು ತಂದ ದೇವರಾಜ ಅರಸರನ್ನು ಆ ಒಟ್ಟು ಪ್ರಕ್ರಿಯೆಯನ್ನು ಕತೆಯಾಗಿ ಹೇಳುವಲ್ಲಿ ಸತ್ಯನಾರಾಯಣ ಆರಿಸಿಕೊಳ್ಳುವ ಮಾರ್ಗ ವಿಶಿಷ್ಟ.

ಸಬ್- ಸಬಾಲ್ಟ್ರನ್ ಕತೆಯಲ್ಲಿಯ ಚಿನ್ನಯ್ಯ,  ದೇವರಾಜ ಅರಸು ಅವರು ಸಾಂವಿಧಾನಿಕವಾಗಿ ನಿಭಾಯಿಸಿದ ಅಧಿಕಾರದ ಹಂಚುವಿಕೆಯ ಫಲಾನುಭವಿಯಾದರೂ ಅಧಿಕಾರವನ್ನು ಅರಸಿಕೊಂಡು ಹೋದವನಲ್ಲ. ಪ್ರಾತಿನಿಧಿಕ ವ್ಯಕ್ತಿಯಂತೂ ಅಲ್ಲವೆ ಅಲ್ಲ. ಆದರೆ ಸಾಮಾಜಿಕ ಬದಲಾವಣೆಯನ್ನೇ ಸಾಮುದಾಯಿಕ ಆದರ್ಶ ಮತ್ತು ಸಾರ್ವತ್ರಿಕ ನೈತಿಕತೆಯ ಅಭಿವ್ಯಕ್ತಿಯ ಅನುಭವವಾಗಿಸಿಕೊಂಡ ವ್ಯಕ್ತಿಯಾಗಿ ಕಾಣುತ್ತಾನೆ. ಇಂತಹ ಸೂಕ್ಷ್ಮ ಎಳೆಗಳಲ್ಲಿ ರೂಪು ಪಡೆಯುವ ಹಲವು ಕತೆಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.

About the Author

ಕೆ. ಸತ್ಯನಾರಾಯಣ
(21 April 1954)

ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.  1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ.  ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...

READ MORE

Related Books