ಇದು ಕಥಾ ಕಾಲ ಭಾಗ-3

Author : ಗಂಗಾವತಿ ಪ್ರಾಣೇಶ್

Pages 180

₹ 90.00




Year of Publication: 2018
Published by: ಪ್ರಕಾಶ ಸಾಹಿತ್ಯ
Address: #27/1, ಕಾಟನ್ ಪೇಟೆ, ಬೆಂಗಳೂರು-560053
Phone: 9900118800

Synopsys

ಲೇಖಕ ಹಾಗೂ ನಗೆಗಾರ ಗಂಗಾವತಿ ಪ್ರಾಣೇಶ್ ಅವರ ಕೃತಿ-ಇದು ಕಥಾಕಾಲ ಭಾಗ-3. ಸಂತ ಶ್ರೀ ಅಚ್ಯುತದಾಸ ಹಾಗೂ ಮತ್ತಿತರರಿಂದ ಕೇಳಿ ಮೆ ಚ್ಚಿದ ಕಥೆಗಳ ಪ್ರಬಾವದಿಂದ ಈ ಕೃತಿಗೆ ರಚನೆಗೆ ಪ್ರೇರಣೆಯಾಯಿತು ಎಂದು ಲೇಖಕರು ಹೇಳಿದ್ದಾರೆ. ಹಾಸ್ಯ ಸಾಹಿತಿ ಬೀchi ಅವರ ಸಾಹಿತ್ಯಕ ಓದು ಹಾಗೂ ಲೇಖಕರ ಅನುಭವದ ಗಟ್ಟಿತನದಿಂದ ಇಲ್ಲಿಯ ಕಥೆಗಳು ತುಂಬಾ ಪರಿಣಾಮಕಾರಿಯಾಗಿವೆ.

About the Author

ಗಂಗಾವತಿ ಪ್ರಾಣೇಶ್
(08 September 1961)

ಪ್ರಾಣೇಶ್ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ಸೆಪ್ಟಂಬರ್ 8, 1961ರಲ್ಲಿ ಗಂಗಾವತಿಯಲ್ಲಿ ಜನಿಸಿದ ಪ್ರಾಣೇಶ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಯಲಬುರ್ಗಿಯಲ್ಲೂ, ಬಿ.ಕಾಂ. ಪದವಿಯನ್ನು ಗಂಗಾವತಿಯಲ್ಲೂ ಪೂರೈಸಿದರು. ಪ್ರಾಣೇಶ್ ಅವರ ತಂದೆ ಸ್ವಾತಂತ್ರ್ಯ ಯೋಧ  ಬಿ.ವೆಂಕೋಬಾಚಾರ್ಯರು, ಶಾಲಾ ಶಿಕ್ಷಕರಾಗಿದ್ದರು. ತಾಯಿ ಸತ್ಯವತಿ ಬಾಯಿ. ತಾಯಿಯಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡವರು.  ಹಾಸ್ಯಕ್ಕಷ್ಟೇ ಸೀಮಿತವಾದ ಪ್ರಾಣೇಶ್ ನಗಿಸುವವನ ನೋವುಗಳು, ನಗ್ತಾ ನಲಿ ಅಳ್ತಾ ಕಲಿ, ಪಂಚ್‌ ಪಕ್ವಾನ್ನ ಮುಂತಾದ ಪುಸ್ತಕಗಳನ್ನು ರಚಿಸಿದ್ದಾರೆ. ಜೊತೆಗೆ ಹಲವಾರು ಕ್ಯಾಸೆಟ್, ಸಿಡಿಗಳನ್ನೂ ಹೊರತಂದಿದ್ದಾರೆ. ಯೂ ಟ್ಯೂಬ್ ನಂತಹ ಅಂತರ್ಜಾಲ ಮಾಧ್ಯಮಗಳಲ್ಲಿ ಅವರ ಹಲವಾರು ಕಾರ್ಯಕ್ರಮಗಳ ತುಣುಕುಗಳು ನಿರಂತರವಾಗಿ ಜನಪ್ರೀತಿಯನ್ನು ಸಂಪಾದಿಸುತ್ತಿವೆ. ...

READ MORE

Related Books