ಮಂಡಲ

Author : ಕಂನಾಡಿಗಾ ನಾರಾಯಣ

Pages 120

₹ 60.00
Year of Publication: 2010
Published by: ಕಂನಾ ಪುಸ್ತಕ
Address: `ಸೃಜನಾ’, 3 ನೇ ಕ್ರಾಸ್, ಹೆಸರಘಟ್ಟ ಮುಖ್ಯ ರಸ್ತೆ, 8 ನೇ ಮೈಲಿ, ದಾಸರಹಳ್ಳಿ ಬೆಂಗಳೂರು- 560057
Phone: 9880220505

Synopsys

ಕತೆಯ ವಸ್ತು ವೈವಿಧ್ಯತೆ ಮತ್ತು ಪಾತ್ರಗಳ ಅನುಭವವನ್ನು ಸರಳವಾಗಿ ಕಟ್ಟಿಕೊಡುವ ಆಕರ್ಷಕ ನಿರೂಪಣೆ, ಸಮಕಾಲೀನ ಸಾಮಾಜಿಕ ಸಂದರ್ಭದ ಕೊಳಕು ರಾಜಕೀಯವನ್ನೂ ಒಳಗೊಂಡು ವೈಚಾರಿಕ ಉತ್ಸಾಹವಿರುವವರೂ ಕೂಡ ಮೀರಲಾಗದಂತಹ ಜಾತಿ ವ್ಯವಸ್ಥೆಯ ಕ್ರೂರ ಕಟ್ಟುಪಾಡುಗಳು, ಮಾನವ ಸಂವೇದನೆಗಳನ್ನು ನಿಯಂತ್ರಿಸುತ್ತಲೇ ಇರುವ ಧಾರ್ಮಿಕ ನಿರ್ಬಂಧಗಳು ಮತ್ತು ಇಂತಹ ಸಂಕೀರ್ಣ ನೆಲೆಯಲ್ಲಿ ಸಾಹಿತ್ಯದ ಮೂಲಕ ಸ್ಥಾಪಿಸ ಬಯಸುವ ಆಶಯಗಳ ಅಭಿವ್ಯಕ್ತಿಯನ್ನು ಇಲ್ಲಿನ ಅನೇಕ ಕತೆಗಳಲ್ಲಿ ಗುರುತಿಸಬಹುದಾಗಿದೆ. ಸಮಾಜದ ಬೀಜ ಸ್ವರೂಪವೇ ಆಗಿರುವ ಮನುಷ್ಯ ಸಂಬಂಧ, ಗ್ರಾಮ ಜೀವನ, ಶ್ರಮ ಜೀವಿಗಳು ಮತ್ತು ಹಿಂದುಳಿದವರ ಬಗೆಗೆ ಕತೆಗಾರ ತೋರುವ ಆಸಕ್ತಿ, ಕಾಳಜಿಗಳ ಕಾರಣಕ್ಕಾಗಿ ಇಲ್ಲಿನ ಕತೆಗಳು ಬಿಟ್ಟು ಕೊಡುವ ಸಾಮಾಜಿಕ ಎಚ್ಚರದ ದನಿ ವಿಶಿಷ್ಟವಾಗಿದೆ.

About the Author

ಕಂನಾಡಿಗಾ ನಾರಾಯಣ

ಕಥೆಗಾರ ಕಂನಾಡಿಗಾ ನಾರಾಯಣ ಅವರದು ಕನ್ನಡ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಸಂವೇದನೆ. ಪ್ರಾಣಿಲೋಕದೊಳಗಿನ ಮನುಷ್ಯ ಜಗತ್ತು. ಮನುಷ್ಯನೊಳಗಿರುವ ಮೃಗಲೋಕ ಎರಡರ ತಾಕಲಾಟಗಳನ್ನೂ ಒಂದು ಹದದಲ್ಲಿ ಹಿಡಿಯುವ ಇವರ ಕತೆಗಳು ಹೊಸ ಜಗತ್ತೊಂದನ್ನು ತೆರೆದಿಡುತ್ತವೆ. ಹಾಗೆಂದು ಇವೆರಡೇ ಇವರ ಆಸಕ್ತಿಯ ವಿಷಯವಲ್ಲ. ಸಮಾಜದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮದಲ್ಲದ ತಪ್ಪಿಗೆ ಸಂದಿಗ್ಧತೆಯನ್ನು ಅನುಭವಿಸುವ ಅನೇಕ ಬಗೆಯ ಜನರ ನೋವುಗಳನ್ನು ಸೂಕ್ಷ್ಮವಾಗಿ ನಾರಾಯಣ ಅವರು ಹಿಡಿದಿಡುತ್ತಾರೆ. ಇಂತಹ ಮನುಷ್ಯ ವೇದನೆಯ ಕತೆಗಳನ್ನು ಕಡೆಯುವಾಗ ಕೊಂಚ ಜನಪ್ರಿಯ ದಾರಿಯನ್ನು ಹಿಡಿಯುವ ನಾರಾಯಣ ಅವರ ಕಥೆಗಳು ಪ್ರಾಣಿಗಳ ಲೋಕದ ತಾಕಲಾಟಗಳನ್ನು ಕಾಣಿಸಹೊರಟಾಗ ...

READ MORE

Related Books