ಎಲವೋ ವಿಭೀಷಣ

Author : ಪ್ರದೀಪ್ ಬೇಲೂರು

₹ 100.00
Year of Publication: 2021
Published by: ಸ್ನೇಹ ಬುಕ್ ಹೌಸ್
Address: 165, 10ನೇ ಮುಖ್ಯ ರಸ್ತೆ, ಶ್ರೀನಗರ ಬಸ್ ಸ್ಟ್ಯಾಂಡ್ ಹತ್ತಿರ, ಶ್ರೀನಗರ ಬೆಂಗಳೂರು ಕರ್ನಾಟಕ- 560050
Phone: 9845031335

Synopsys

‘ಎಲವೋ ವಿಭೀಷಣ’ ಕೃತಿಯು ಪ್ರದೀಪ್ ಬೇಲೂರು ಅವರ ಕತಾ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ ಕೆ. ಬಿ ಪರಶಿವಪ್ಪ, ‘ಹತ್ತು ಸಣ್ಣಕತೆಗಳನ್ನು ಒಳಗೊಂಡ ಈ ಸಂಕಲನದ ಪ್ರತೀ ಕಥೆಯಲ್ಲೂ ನಾವೀನ್ಯತೆ ಇದೆ. ಕಥಾ ಪ್ರಪಂಚವೇ ಹಾಗೆ. ಅದು ಕಥೆಗಾರನ ಸೃಜನಶೀಲತೆಯ ದರ್ಪಣವಾಗಿರುತ್ತದೆ. ಹೆಸರಿಲ್ಲದ ಅನಾಥ ಬಾಲಕ ತನಗೆ ತಾನೇ ವಿಭೀಷಣ ಎಂಬ ನಾಮಕರಣ ಮಾಡಿಕೊಳ್ಳುವ ಮೊದಲ ಕಥೆಯಿಂದ ಮೊದಲ್ಗೊಂಡು ಕೊನೆಯ ಕಥೆ ಕೊರೋನಾ ತನಕ ಎಲ್ಲ ಕಥೆಗಳಲ್ಲೂ ಹೊಸತನವಿದೆ, ಓದಿಸಿಕೊಂಡು ಹೋಗುವ ಗುಣವೂ ಅಂತರ್ಗತವಾಗಿ ಇದೆ. ಒಬ್ಬ ಒಳ್ಳೆಯ ಓದುಗ ಒಳ್ಳೆಯ ಬರಹಗಾರನಾಗಬಲ್ಲ ಎಂಬ ಮಾತಿಗೆ ಅನ್ವರ್ಥವಾಗಿ ಕಾಣಿಸುತ್ತಾರೆ. ಈ ಕಥಾ ಸಂಕಲನದ ಕರ್ತೃ ಪ್ರದೀಪ್ ಬೇಲೂರ್. ಅವರಲ್ಲಿರುವ ಅಧ್ಯಯನಶೀಲ ಪ್ರವೃತ್ತಿ, ಕನ್ನಡ ಸಾಹಿತ್ಯದೆಡೆಗಿರುವ ಪ್ರೀತ್ಯಾಭಿಮಾನಗಳು ವಿಶೇಷ. ಸಾಫ್ಟ್ ವೇರ್ ಕ್ಷೇತ್ರದಲ್ಲಿದ್ದರೂ ತಂತ್ರಜ್ಞಾನದ ತಂತಿ ನಡಿಗೆಗೆ ತಮ್ಮನ್ನು ಸೀಮಿತಗೊಳಿಸದೇ ವೃತ್ತಿಯೊಂದಿಗೆ ಬರಹವನ್ನು ಪ್ರವೃತ್ತಿಯಾಗಿಸಿಕೊಂಡಿರುವುದು ವಿಶೇಷವಾಗಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಪ್ರದೀಪ್ ಬೇಲೂರು

ಲೇಖಕ ಪ್ರದೀಪ್ ಬೇಲೂರು ಅವರು ಮೂಲತಃ  ಹಾಸನ ಜಿಲ್ಲೆಯ ಬೇಲೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಬೆಂಗಳೂರಿನ ಒರಾಕಲ್ ಇಂಡಿಯಾ ಪ್ರೈ. ಲಿಮಿಟೆಡ್ ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರವಣಿಗೆ ಅವರ ಹವ್ಯಾಸವಾಗಿದೆ. ಕೃತಿಗಳು : ಎಲವೋ ವಿಭೀಷಣ (ಕಥಾ ಸಂಕಲನ), ಶತ್ರುಘ್ನ (ಕಾದಂಬರಿ)    ...

READ MORE

Related Books