ಯಾವುದೇ ಕತೆ ಪೂರ್ಣವಲ್ಲ. ಎಲ್ಲರದೂ ಅಪೂರ್ಣ ಕತೆಯೇ ಎಂಬುದು ಒಂದು ತಾತ್ವಿಕ ಜಿಜ್ಞಾಸೆ. ಅದೇ ಅರ್ಥವನ್ನು ಹೋಲುವ ಶೀರ್ಷಿಕೆ ಪೂರ್ಣ ತೆರೆಯದ ಪುಟಗಳು.
ಇದು ಗೋಪಾಲಕೃಷ್ಣ ಕುಂಟಿನಿ ಅವರ ನಾಲ್ಕನೇ ಕಥಾಸಂಕಲನ. ಓದಿನ ಸುಖ ಕೊಡುವ ಕತೆಗಳನ್ನು ಕತೆಗಾರ ನೀಡಿದ್ದಾರೆ. ಇಬ್ಬಂದಿ, ಹಿತ್ತಿಲು, ನಿಜದರಾಜ, ನಾತಿಚರಾಮಿ, ಮರಳ ಮೇಲಿನ ದೋಣಿಗೆ ಬಿಗಿದ ಹಗ್ಗದಂತಹ ಕತೆಗಳು ಓದುಗರಿಗೆ ವಿಭಿನ್ನ ಆನಂದ ತರಬಲ್ಲವು.
ಹಿರಿಯ ಪತ್ರಕರ್ತರಾದ ಗೋಪಾಲಕೃಷ್ಣ ಕುಂಟಿನಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿಯವರು. ಕತೆಗಾರರಾಗಿರುವ ಗೋಪಾಲಕೃಷ್ಣ ಅವರು ‘ಅಪ್ಪನ ನೀಲಿಕಣ್ಣು’, ‘ಪೂರ್ಣ ತೆರೆಯದ ಪುಟಗಳು’ ಎಂಬ ಕತೆಗಳ ಸಂಕಲನ ಪ್ರಕಟಿಸಿದ್ದಾರೆ. ’ಆಮೇಲೆ ಇವನು’ ಮತ್ತು ’ವೃತ್ತಾಂತ ಶ್ರವಣವು’ ಅವರ ಪ್ರಕಟಿತ ಕೃತಿಗಳು. ಪತ್ರಕರ್ತ ಗೆಳೆಯ ಜೋಗಿ (ಗಿರೀಶರಾವ್ ಹತ್ವಾರ) ಅವರೊಂದಿಗೆ ಸೇರಿ ಆರಂಭಿಸಿದ ’ಕಥಾಕೂಟ’ವು ಕತೆಗಳ ರಚನೆ-ಚರ್ಚೆಗೆ ಅನುವು ಮಾಡಿಕೊಟ್ಟಿದೆ. ...
READ MORE