ಗೋಧ್ರಾ ಇನ್ನೆಷ್ಟು ದೂರ ?

Author : ಪ್ರೇಮಶೇಖರ

Pages 220

₹ 96.00




Year of Publication: 2018
Published by: ಪುಸ್ತಕಯಾನ, ಮೈಸೂರು

Synopsys

ಲೇಖಕ ಪ್ರೇಮಶೇಖರ್ ಅವರ ಕಥಾ ಸಂಕಲನ ‘ಗೋಧ್ರಾ ಇನ್ನೆಷ್ಟು ದೂರ ?’ 10 ಕತೆಗಳನ್ನೊಳಗೊಂಡ ಈ ಪುಸ್ತಕ ಪ್ರೇಮಶೇಖರ ಅವರ ಎಂಟನೆಯ ಕಥಾ ಸಂಕಲನ. ಇದರಲ್ಲಿ ಗೋಧ್ರಾ ಇನ್ನೆಷ್ಟು ದೂರ? ಎಂಬ ಕತೆಯಲ್ಲಿ ಮಾಂತ್ರಿಕ ವಾಸ್ತವ ಘಟನಾವಳಿಗಳ ಮೂಲಕ ವಿಷಯದ ಮೇಲೆ ಲೇಖಕರ ಟಿಪ್ಪಣಿ ಇದೆ. ದೆಹಲಿಯ ಒಂದು ಓವರ್ ಬ್ರಿಜ್ಜಿನ ಅಡಿಯಲ್ಲಿ ಬದುಕುವ ನಿರ್ಗತಿಕರ ಬದುಕಿನ ದಟ್ಟವಾದ ಹಾಗೂ ಸಮರ್ಥವಾದ ಚಿತ್ರಣ ಬಾಳಿಗೊಂದಿಷ್ಟು ಗಾಳಿ ಕತೆಯಲ್ಲಿದೆ. ಒಂದು ಕತೆ ತನ್ನನ್ನು ತಾನೆ ಮುಂದಕ್ಕೆ ತಳ್ಳಿಕೊಳ್ಳುತ್ತಾ ಹೋಗುವ ವಿಶಿಷ್ಟ ತಂತ್ರಗಾರಿಕೆಯ ಗುಡ್‌ಬೈ ಹೌರಾ ಎಕ್ಸ್ಪ್ರೆಸ್ ಎಂಬ ಪ್ರೇಮಗಾಥೆಯಿದೆ. ಕತೆಯ ಅಂತ್ಯ ಎಂಬ ಕತೆಯಲ್ಲಿ ಕಥಾ ನಾಯಕಿಯ ಬದುಕಿನ ಪ್ರತಿಮಾತ್ಮಕ ಚಿತ್ರಣವಿದೆ. ಪ್ರೊಫೆಸರ್ ನಾಥಮುನಿ ಅವರನ್ನು ಇಂದು ಬೆಳಗ್ಗೆ ಶಿಲುಬೆಗೆ ಏರಿಸಲಾಯಿತು ಎಂಬ ಕತೆಯಲ್ಲಿ ಮನಮುಟ್ಟುವಂತಹ ಶಿಲುಬೆಗೆ ಏರಿಸುವ ನೈಜ ಚಿತ್ರಣವಿದೆ. ಚಿನ್ನಿದಾಂಡು ಕತೆಯಲ್ಲಿ ಒಂದು ಹಳೆಯ ಕತೆಯನ್ನು ಕೆದಕಿ ಮಾನವ ಸಂಬಂಧಗಳ ಸಂಕೀರ್ಣತೆಯನ್ನು ಶೋಧಿಸುವ ಧೈರ್ಯ ಇದೆ. ಬದುಕೊಂದು ಕೋತಿಯಾಟದಲ್ಲಿ ಬದುಕಿನ ವಿಚಿತ್ರತೆಯ ವಿಶಿಷ್ಟ ಚಿತ್ರಣವಿದೆ. ಕನಸಿನ ತೀರ ದಲ್ಲಿ ಶಾಂತಿ ಪ್ರೇಮ ಇತ್ಯಾದಿಗಳ ಬಗ್ಗೆ ಸುಂದರ ವ್ಯಾಖ್ಯಾನವಿದೆ. ಅವಲ್ಲದೆ ರೇಖಾ ಗಣಿತ ಎಂಬ ತೀರಾ ವಿಭಿನ್ನವಾದ ಹೊಸ ಶೈಲಿಯ ಒಂದು ರೋಚಕ ಕತೆಯಿದೆ. ಯಾವುದೇ ಕತೆಯ ಸಾರಾಂಶ ಹೇಳಿ ಅದರ ಸ್ವಾದ ಕೆಡಿಸುವ ಕಿಡಿಗೇಡಿತನಕ್ಕೆ ನಾನು ಖಂಡಿತಾ ಕೈ ಹಾಕಲಾರೆ. ಕತೆಗಳ ಸುಪ್ತ ಶಕ್ತಿ ಇರುವುದೇ ಅದನ್ನು ಏಕಾಂತದಲ್ಲಿ ಓದಿದಾಗ ಅದು ನಮ್ಮ ಮನದಾಳಕ್ಕೆ ಇಳಿದು ಅಲ್ಲಿಯ ಒಂದು ಭಾಗವಾಗಿ ನಮಗೆ ದಕ್ಕುವ ಪ್ರಕ್ರಿಯೆಯಲ್ಲಿ. ಅದಕ್ಕಾಗಿ ಕತೆಗಳನ್ನು ಕುಳಿತು ಇಡಿಯಾಗಿ ಹಾಗೆಯೇ ಓದಬೇಕು. ಓದಿ ಹೇಳಲೂ ಬಾರದು, ಸಾರಾಂಶ ಹೇಳಲೂ ಬಾರದು. ಪ್ರೇಮ್ ಅವರ ಕತೆಗಳ ವಿಜಯ ಇರುವುದೇ ಅವರ ಗಟ್ಟಿಯಾದ ಕಥಾವಸ್ಥು ಮತ್ತು ಸಮರ್ಥ ವಿಭಿನ್ನ ನಿರೂಪಣೆಯಲ್ಲಿ. ಹೊಸ ಹೊಸ ತಂತ್ರಗಳು. ಹೊಸ ಹೊಸ ಪ್ಲಾಟ್, ಸರಳ ಸುಂದರ ಪಾತ್ರೋಚಿತ ಭಾಷೆ ಆಪ್ಯಾಯಮಾನವಾದ ವಾತಾವರಣ, ಸದೃಢ ಪಾತ್ರಗಳ ಚಿತ್ರಣ - ಇವೆಲ್ಲ ಅವರ ಕತೆಗಳನ್ನು ಜೀವಂತವಾಗಿಸಿವೆ. ಗೋಧ್ರಾ ಇನ್ನೆಷ್ಟು ದೂರ? ಪುಸ್ತಕದ ಮೂಲಕ ಇನ್ನೂ ಹತ್ತು ಕತೆಗಳಿಗೆ ನಮ್ಮೆದುರು ಜೀವಕೊಟ್ಟಿದ್ದಾರೆ.

About the Author

ಪ್ರೇಮಶೇಖರ
(22 June 1960)

ಹೊರನಾಡ ಕನ್ನಡಿಗ ಪ್ರೇಮಶೇಖರ ಪಠ್ಯವಿಷಯಗಳ ಬಗ್ಗೆ ಇಂಗ್ಲೀಷಿನಲ್ಲಿ ಸಂಶೋಧನಾ ಲೇಖನಗಳನ್ನು ಹಾಗೂ ಕನ್ನಡದಲ್ಲಿ ಕಥೆಕಾದಂಬರಿಗಳನ್ನು ಬರೆಯುವುದರ ಮೂಲಕ ಬರವಣಿಗೆಯನ್ನಾರಂಭಿಸಿದವರು.. ಹುಟ್ಟಿದ್ದು 1960 ಜೂನ್ 22 ಕೊಳ್ಳೇಗಾಲದಲ್ಲಿ. ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡಿ, ಇಪ್ಪತ್ತೆರಡು ವರ್ಷಗಳ ಸುಧೀರ್ಘ ಕಾಲ ಪಾಂಡಿಚೆರಿ ವಿಶ್ವವಿದ್ಯಾಲಯದಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಬೋಧಿಸಿ 2012ರಲ್ಲಿ ಸ್ವಯಂನಿವತಿ ಪಡೆದುಕೊಂಡಿದ್ದಾರೆ. ಪತ್ರಿಕಾರಂಗದಲ್ಲಿರುವ ಹಿತೈಷಿಗಳ ಬಯಕೆಯಂತೆ ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಕನ್ನಡದಲ್ಲಿ ಐನೂರರಷ್ಟು ಲೇಖನಗಳನ್ನು ಬರೆದಿದ್ದಾರೆ. ಇದುವರೆಗೆ ಎರಡು ಕಾದಂಬರಿಗಳನ್ನೂ, ಹತ್ತು ಕಥಾ ಸಂಕಲನಗಳನ್ನೂ, ಹನ್ನೊಂದು ಲೇಖನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಹಿತ್ಯಾಸಕ್ತರಿಗೆ ಕಥಾರಚನೆಯಲ್ಲಿ ತರಬೇತಿ ನೀಡುವ ಕಾರ್ಯಾಗಾರಗಳನ್ನು ...

READ MORE

Related Books