ಗೀರು

Author : ದೀಪ್ತಿ ಭದ್ರಾವತಿ

Pages 116

₹ 100.00




Published by: ಆವರ್ತ ಪಬ್ಲಿಕೇಷನ್, ಭದ್ರಾವತಿ
Phone: 7483486300

Synopsys

ಗೀರು ಕಥಾಸಂಕಲನದಲ್ಲಿ 14  ಕಥೆಗಳಿವೆ. ಇದು ದೀಪ್ತಿ ಭದ್ರಾವತಿ ಅವರ ಎರಡನೇ ಕಥಾ ಸಂಕಲನ. ಈ ಕೃತಿಗೆ ಪಾಟೀಲ ಪುಟ್ಟಪ್ಪ ಪ್ರಶಸ್ತಿ ಲಭಿಸಿದೆ.  

ಓದಿ ದಿಕ್ಕು ತಪ್ಪುವ ಭಾವನೆಗಳಿಲ್ಲದೆ ಸ್ವಂತವೆಂದು ಅಪ್ಪಿಕೊಳ್ಳಬಹುದಾದಂತಹ ಪಾತ್ರಗಳು ಈ ಕಥೆಗಳಲ್ಲಿ ಮೂಡಿಬಂದಿವೆ. ಇಲ್ಲಿರುವ ಹೆಣ್ಣು ಪಾತ್ರಗಳು ಸೋತು ನಶಿಸಿದಾಗ ಅಪರಾಧಿ ಮನೋಭಾವ ಓದುಗನನ್ನು ಖಂಡಿತ ಕಾಡುತ್ತವೆ. ಸ್ಫೋಟ, ನ್ಯೂಸ್‌ ಬೀ ಚೌಕಟ್ಟು, ಭಾಗೀಚಿಕ್ಕಿ, ಮೊಹರು, ಮುಚ್ಚಿದ ಬಾಗಿಲು ಕಥೆಗಳು ಓದುಗನಲ್ಲಿ ಮತ್ತಷ್ಟು ಕುತೂಹಲತೆಯನ್ನು ಮೂಡಿಸುತ್ತವೆ. 

ಈ ಕೃತಿಗೆ ಕ.ಸಾ.ಪ ಕೊಡಮಾಡುವ 2019ನೇ ಸಾಲಿನ ಲಕ್ಷ್ಮೀದೇವಿ ಶಾಂತರಸ ಹೆಂಬೆರಾಳ ದತ್ತಿ ಪ್ರಶಸ್ತಿ ದೊರೆತಿದೆ.

About the Author

ದೀಪ್ತಿ ಭದ್ರಾವತಿ

ದೀಪ್ತಿ ಭದ್ರಾವತಿ -ದಕ್ಷಿಣ ಕನ್ನಡದ ಮರವಂತೆ ಮೂಲದವರು. ಚಿಕ್ಕಮಂಗಳೂರಿನ ನಕ್ಕರಿಕೆ ಎಂಬ ಕುಗ್ರಾಮದಲ್ಲಿ ಹುಟ್ಟಿದ್ದು, ಹೆಸರು ಕೇವಲ ದೀಪ್ತಿ ಮಾತ್ರ ಆದರೆ ಭದ್ರಾವತಿಯ ಜೊತೆ ಅವಿನಾಭಾವ ಸಂಬಂಧ ಇರುವುದರಿಂದ ಹಾಗೂ ಅವರ ಜೀವನದಲ್ಲಿ ಬಾಲ್ಯದಿಂದ ಯೌವನದವರೆಗೆ ಭದ್ರಾವತಿಯ ಕೊಡುಗೆ ತುಂಬಾ ಇರುವುದರಿಂದ ದೀಪ್ತಿ ಭದ್ರಾವತಿ ಎಂಬ ಹೆಸರಿನಿಂದ ಕಾವ್ಯವನ್ನು ಬರೆಯುತ್ತಾರೆ. ದೀಪ್ತಿಯವರು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವೀಧರರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನೂ ಹಾಗೂ ಹಿಂದಿಯಲ್ಲಿ ವಿಶಾರದ ಪದವಿಯನ್ನು ಪಡೆದಿದ್ದಾರೆ. ಪದವಿಪೂರ್ವದಲ್ಲಿ ವಿಜ್ಞಾನದ ವಿದ್ಯಾರ್ಥಿನಿಯಾಗಿದ್ದ ಇವರಿಗೆ ಸಾಹಿತ್ಯ ಕ್ಷೇತ್ರದ ಆಕರ್ಷಣೆ ಬೇರೆ ಬೇರೆ ಪದವಿಗಳಿಗೆ ಅನುವು ಮಾಡಿಕೊಟ್ಟಿತ್ತು. ಪ್ರಸ್ತುತ ಸರಕಾರಿ ...

READ MORE

Related Books