ಶಿವಕುಮಾರ ಮಾವಲಿ ಅವರ ಮೊದಲ ಕಥಾ ಸಂಕಲನ `ದೇವರು ಅರೆಸ್ಟ್ ಆದ’. ಇಲ್ಲಿಯ ಕತೆಗಳ ನವೀನ ನಿರೂಪಣೆ, ಸೃಜನಾತ್ಮಕತೆ, ನವಿರಾದ ಹಗುರ ಭಾವಗಳು ಓದಿನೊಂದಿಗೆ ನಮ್ಮದಾಗುತ್ತದೆ. ತಮ್ಮ ತಾಜಾತನದ ಕತೆಯ ಎಳೆಯೊಂದಿಗೆ ಸಮ್ಮೋಹನಗೊಳಿಸುವಲ್ಲಿ ಯಶಸ್ವಿಯಾಗುತ್ತವೆ.
ಮೊದಲ ಕತೆ 'ಸತ್ತವರ ಸಂಭಾಷಣೆ' ಈಗಾಗಲೇ ಸತ್ತು ಹೋಗಿರಬೇಕಾಗಿದ್ದ ವಿಷಯವೊಂದನ್ನು ಭಿನ್ನವಾಗಿ ಹೇಳುವಲ್ಲಿ ಸಫಲವಾಗಿದೆ. ಹೆಣವಾಗಿ ಭೂಮಿ ಸೇರಿದ್ದ ರಾಜನೊಬ್ಬ ತನ್ನ ಪಕ್ಕದಲ್ಲಿ ಮಲಗಿದ್ದ ಹೆಣಕ್ಕೆ 'ನಾನು ರಾಜನೆಂದು ತಿಳಿದೂ ನನ್ನ ಪಕ್ಕದಲ್ಲಿ ಮಲಗುವ ಧೈರ್ಯವೇ?' ಎಂದು ಕೇಳುತ್ತಲೇ, ಶ್ರೇಣಿಕೃತ ಸಮಾಜದಲ್ಲಿರುವ ಹುಳುಕುಗಳನ್ನು ಕಣ್ಣಮುಂದೆ ತಂದಿಡುತ್ತದೆ.
'ನಾವು ಬದುಕುವ ಕ್ರಮ ಚಟವಾಗಬಾರದು” ಎಂಬ ಅರ್ಥಪೂರ್ಣ ಮಾತು ಈ ಕತೆಯ ಜೀವವನ್ನು ಮತ್ತಷ್ಟು ಸಶಕ್ತಗೊಳಿಸಿದೆ. 'ದೇವರು ಅರೆಸ್ಟ್ ಆದ’ ಕತೆಯು ಬರಹಕ್ಕೂ ಬದುಕಿಗೂ ಸಂಬಂಧವಿಲ್ಲದೆ ನಾಡಿಗೆ ಬುದ್ದಿ ಹೇಳುವ ಆಷಾಡಭೂತಿಗಳ ಬಣ್ಣ ಬಯಲು ಮಾಡುತ್ತದೆ. ಮೇಲ್ನೋಟಕ್ಕೆ ಸರಳವಾದ ಕತೆ ಎನಿಸಿಕೊಂಡರೂ ಆಳದಲ್ಲಿ ವಿಶೇಷ ಅನುಭವಗಳನ್ನು ಕಟ್ಟಿಕೊಡುತ್ತದೆ. ದೇವರ ಇರುವಿಕೆಯ ಚರ್ಚೆ ಮಾಡುವ ಸಂದರ್ಭದಲ್ಲಿ ನಾಸ್ತಿಕನೊಬ್ಬ ವಾದ ಮಾಡಿದರೆ ಹೇಗಿರಬಹುದು ಎಂಬುದನ್ನು ಕತೆ ಪ್ರತ್ಯಕ್ಷಗೊಳಿಸುತ್ತದೆ.
ಶಿವಕುಮಾರ್ ಮಾವಲಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಾವಲಿಯವರು. ಶಿವಮೊಗ್ಗದ ಡಿ.ವಿ.ಎಸ್. ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ. ಸದ್ಯ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶಿವಕುಮಾರ್ ಪ್ರತಿಭಾವಂತ ಬರಹಗಾರ. ಕಥೆ, ಕವಿತೆ, ನಾಟಕ ಹೀಗೆ ಸಾಹಿತ್ಯದ ಹಲವು ವಿಭಾಗಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಶಿವಕುಮಾರ್ ಅವರ ಮೊದಲ ಕಥಾಸಂಕಲನ ‘ದೇವರು ಅರೆಸ್ಟ್ ಆದ’ ಅವರ ‘ಸುಪಾರಿ ಕೊಲೆ’ ನಾಟಕ ಸಿನಿಮವಾಗುತ್ತಿದೆ. ಅವರ ಇತ್ತೀಚಿನ ಪುಸ್ತಕ ಟೈಪಿಸ್ಟ್ ತಿರಸ್ಕರಿಸಿದ ಕಥೆ. ಈ ಕೃತಿಯನ್ನು ಬಹುರೂಪಿ ...
READ MORE