ಅರ್ಧ ಬಿಸಿಲು ಅರ್ಧ ಮಳೆ

Author : ಸದಾಶಿವ್ ಸೊರಟೂರು

Pages 105

₹ 120.00
Year of Publication: 2022
Address: 207, 3ನೇ ಮುಖ್ಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018
Phone: 0806926 2222

Synopsys

ಲೇಖಕ ಸದಾಶಿವ ಸೊರಟೂರ ಅವರ ಮೊದಲ ಕಥಾ ಸಂಕಲನ ಕೃತಿ ʻಅರ್ಧ ಬಿಸಿಲು ಅರ್ಧ ಮಳೆʼ. ವಿವಿಧ ಕಥಾ ವಸ್ತುಗಳಲ್ಲಿ ಇಲ್ಲಿರುವ ಕತೆಗಳನ್ನು ಹೆಣೆಯಲಾಗಿದೆ. ಪುಸ್ತಕದ ಪರಿವಿಡಿಯಲ್ಲಿ ನೀಲಿ, ಬಿಸಿಲು ಕೋಲು, ಮುಗಿಲ ದುಃಖ, ವಿದಾಯ, ಹುಚ್ಚು ಶೀರ್ಷಿಕೆಗಳ ಕಥೆಗಳಿವೆ. ಬೆನ್ನುಡಿಯಲ್ಲಿ ವಿದ್ಯಾರಶ್ಮಿ ಪೆಲತ್ತಡ್ಕ ಅವರು, ತೃತೀಯ ಲಿಂಗಿಗಳ ಒಳತೋಟಿ, ಹೆಣ್ಣಿನ ಬೇಗುದಿ, ಎಳೆಮನದ ತೊಳಲಾಟ, ಮನೋವೈದ್ಯಕೀಯ ಒಳನೋಟ... ಹೀಗೆ ವಿವಿಧ ವಸ್ತುಗಳ ಎಳೆ ಹಿಡಿದು ನಡೆದಿದ್ದಾರೆ ಸದಾಶಿವ ಸೊರಟೂರು. ಇಲ್ಲಿನ ಕಥೆಗಳಲ್ಲಿ ಕಲಾತ್ಮಕತೆ ಇದೆ. ಸುಲಲಿತ ಭಾಷೆ, ಮಾನವೀಯ ಮೌಲ್ಯಗಳ ಬನಿ ಕಥನಗಾರಿಕೆಯ ಅಂದ ಹೆಚ್ಚಿಸಿವೆ. ವಾಸ್ತವ ಲೋಕದ ತಲ್ಲಣಗಳು ಇಲ್ಲಿ ಕಥೆಗಳಾಗಿವೆ. ಬಹುತ್ವದ ಪದರು ಪದರುಗಳು ಕಥೆಗಳಾಗಿ ಅನಾವರಣಗೊಳ್ಳುವ

About the Author

ಸದಾಶಿವ್ ಸೊರಟೂರು
(18 June 1983)

ಸದಾಶಿವ ಸೊರಟೂರು ಇವರು ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸೊರಟೂರಿನವರು. ಸದ್ಯ ಹೊನ್ನಾಳಿ ನಗರದಲ್ಲಿ ವಾಸ. ಪ್ರೌಢಶಾಲಾ ಶಿಕ್ಷಕರಾಗಿರುವ ಇವರು ಹರಿಹರ ತಾಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇಲ್ಲಿ ಕರ್ತವ್ಯದಲ್ಲಿದ್ದಾರೆ.  ಸುಮಾರು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಇವರು ಪರಿಸರ ಪ್ರಜ್ಞೆ, ಸಾಮಾಜಿಕ ಕಾಳಜಿ ಮತ್ತು ಮನುಷ್ಯ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲುವ ವಿಷಯಗಳ ಕಡೆ ಲೇಖನಿ ಓಡಿಸಿದ್ದಾರೆ.‌ ಬರೆದ ಯಾವುದೊ‌ ಒಂದು ಸಾಲು ಓದುವ ಯಾರದೊ ಎದೆಯೊಳಗೆ ‌ಅರಿವಿನ ಒಂದಾದರೂ ಕಿಡಿ ಹೊತ್ತಿಸಲಿ ಎಂದು ಕಾದಿದ್ದಾರೆ.‌ ಕಥೆ ಇವರ ಇಷ್ಟದ ...

READ MORE

Related Books