ಮಹಾಪ್ರಸ್ಥಾನ

Author : ಕೆ.ಎಸ್‍. ನಾರಾಯಣಾಚಾರ್ಯ

Pages 200

₹ 200.00
Year of Publication: 2022
Published by: ಸಾಹಿತ್ಯ ಪ್ರಕಾಶನ
Address: ಸಾಹಿತ್ಯ ಪ್ರಕಾಶನ ಕೊಪ್ಪೀಕರ ರಸ್ತೆ ಹುಬ್ಬಳ್ಳಿ : 580020

Synopsys

ಮಹಾಪ್ರಸ್ಥಾನ ಕೆ.ಎಸ್‌ ನಾರಾಯಣಾಚಾರ್‍ಯ ಅವರು ರಚಿಸಿರುವ ಕಥೆಯಾಗಿದೆ. ಎಷ್ಟಾದರೂ ನಾನು ಸ್ತ್ರೀ... ಬರೀ ಭೂಮಿ ನನ್ನಲ್ಲಿ ಬೆಳೆದುದನ್ನು ರೈತ ಕೊಯ್ದುಬಿಡುತ್ತಾನೆ. ನಾನು ಮರ, ಗಿಡ, ಬಳ್ಳಿ ಏನು ಬೆಳೆದರೂ, ಅಚಲೆ, ಜಡ. ಆ ಮರಗಳ ನೆರಳೂ, ಹೂ, ಹಣ್ಣು, ಕಾಯಿ, ಎಲೆ ಎಲ್ಲಾ ಬೇರೆಯವರಿಗೇ! ಈ ಪರಾರ್ಥವು ಸ್ವಾಭಾವಿಕ ಎಂದರೂ ಮನಸ್ಸು ಒಗ್ಗಿಕೊಳ್ಳುತ್ತಿಲ್ಲ. ಜಡ ಎಂದೆ. ಅದು ಭಾಷೆಯ, ರೂಪಕದ ಮಿತಿ. ಆದರೆ ನನಗೆ ಭಾವನೆ ಇದೆಯಲ್ಲ? ಮನಸ್ಸು ಇದೆಯಲ್ಲ? ಮನಸ್ಸನ್ನೂ ಜಡ ಎನ್ನುತ್ತಾರೆ. ಆದರೆ ಅದರ ಮೇಲೆ ದರ್ಬಾರು ನಡೆಸುವ ಆ ಇನ್ನೊಂದು – ಆತ್ಮ, ಚೈತನ್ಯ – ಅದರ ನೋವು ಇದೆಯಲ್ಲ? ಈ ಪರಿಸರದ ಹಳ್ಳಿಗರಿಗೂ ಅನುಭವಕ್ಕೆ ಬರುತ್ತಲೂ ನಾನು ಸ್ಪಂದಿಸುವಂತೆ ಇಲ್ಲದ ಒಂದು ಮೂಕತನ, ಈ ಸ್ಥಿತಿ ಯಾರ ಹಾರೈಕೆ? ಯಾರ ಹರಕೆ? ಯಾತರ ಹೊದ್ದಿಕೆ? ನಾನು ಅಹಲೈಯನ್ನು ನೆನೆಯುತ್ತೇನೆ. ಅವಳು ನಿಜವಾಗಿ ಕಲ್ಲಾಗಿಯೇ ಹೋಗಿದ್ದವಳು. ನನ್ನದು ಅದಕ್ಕಿಂತ ಕೆಟ್ಟ ಸ್ಥಿತಿ. ಒಂದು ವೇಳೆ ಮನುಷ್ಯರೂಪಿನಲ್ಲೇ ಅಹಲ್ಯ ಶಾಪಕಾಲ ನೂಕುವಂತಾಗಿದ್ದರೆ?... ಇಗೋ ಮನಃಪಟಲದಲ್ಲಿ ಅಹಲೈಯೇ ಬರುತ್ತಾಳೆ. ಎಂದು ದ್ರೌಪದಿಯವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಕೆ.ಎಸ್‍. ನಾರಾಯಣಾಚಾರ್ಯ
(31 October 1933 - 26 November 2021)

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ  (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...

READ MORE

Related Books