ಒಂದು ಡೈರಿಯ ಪರಿಮಳ

Author : ವಾಸುದೇವ ನಾಡಿಗ್

₹ 190.00




Year of Publication: 2022
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್
Address: #745, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560 010
Phone: 9945939436

Synopsys

ಕವಿ, ಲೇಖಕ ವಾಸುದೇವ ನಾಡಿಗ್ ಅವರ ಕತಾಸಂಕಲನ ಒಂದು ಡೈರಿಯ ಪರಿಮಳ. ಈ ಕೃತಿಗೆ ಡಾಲಿ ವಿಜಯಕುಮಾರ್ ಅವರು ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಸುಳ್ಳು ಕಾಲಹರಣದ ಪೊರೆ ಕಳಚಿ ಸತ್ಯದ ಅನಾವರಣಗೊಳಿಸುತ್ತಾ ತಾತ್ವಿಕ ನಿಲುವುಗಳ ಜೊತೆಗೆ ಸಾತ್ವಿಕತೆಯನ್ನೂ ತಾಗಿಸುವುದು ಮನೋಜ್ಞವಾಗಿ ಬಿಂಬಿತವಾಗಿದೆ. ಜೀವನದಲ್ಲಿ ಬಂದೊದಗುವ ಎಲ್ಲ ಸಂಬಂಧಗಳನ್ನೂ ಅವರ ಮನದ ಭಿತ್ತಿಯಲ್ಲಿ ಹೊರಳಾಡಿಸಿ ಭಾವನೆಗಳ ಹೊತ್ತೊತ್ತು ಬರುವ ಅಲೆಗಳಿಗೆ ಎದೆಯೊಡ್ಡಿ ನಿಲ್ಲಿಸುತ್ತಾರೆ. ವಯೋಮಿತಿಗಳನ್ನೂ ಮೀರಿದ ಮಿಂಚಿನ ಸಂಚಲನವೊಂದನ್ನು ಹರಿಸುವುದರ ಮೂಲಕ ಒಂಚೂರು ಮನವನ್ನ ಹರಿಬಿಡದಂತೆ ಬಿಗಿಹಿಡಿದು ಓದಿಸುವ ಮಾಜಾಲವ ರೂಪಿಸಿದ್ದಾರೆ. ಕಥಾ ಷೇರು ತಮ್ಮೊಳಗೇ ಮೀಯಿಸಿ ಪ್ರೀತಿಯಲ್ಲಿ ಸೇರಿಸಿ, ವಿರಹದ ಬೇಗುದಿಯಲ್ಲಿ ಮುಳುಗಿಸಿ, ತ್ಯಾಗದ ಕೌದಿ ಹೊದಿಸಿ ಒಂಟಿತನವನ್ನೂ ಗಟ್ಟಿಗೊಳಿಸುತ್ತಾರೆ ಎಂಬುದಾಗಿ ಹೇಳಿದ್ದಾರೆ.

About the Author

ವಾಸುದೇವ ನಾಡಿಗ್

ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. 20 ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ...

READ MORE

Related Books