ಚಾನ್ನೆ

Author : ಮುದಿರಾಜ್ ಬಾಣದ್

Pages 96

₹ 80.00




Year of Publication: 2020
Published by: Vaishnavi prakashana
Address: ಮುದಿರಾಜ ಬಾಣದ್, ರಾಯಚೂರು ಪೋಸ್ಟ್‌ ಆಫೀಸ್‌ ಹತ್ತಿರ, ರಾಯಚೂರು
Phone: 9620170027

Synopsys

ಚಾನ್ನೆ  ಹನ್ನೆರಡು ಕತೆಗಳಿರುವ ಕಥಾಸಂಕಲನ‌. ಈ ಸಂಕಲನದ ಕತೆಗಳ ಬಗ್ಗೆ  ಕತೆಗಾರ ವಸುಧೇಂದ್ರ ಅವರು ’ಹೈದರಾಬಾದ್‌ ಕರ್ನಾಟಕದಿಂದ ಹಲವಾರು ಉತ್ತಮ ಕತೆಗಾರರು ಇತ್ತೀಚಿನ ದಿನಗಳಲ್ಲಿ ಹೊರಹೊಮ್ಮಿದ್ದಾರೆ. ಅವರೆಲ್ಲರಿಗೂ ಅಮರೇಶ್‌ ನುಗಡೋಣಿಯವರೇ ಆದರ್ಶ ಕತೆಗಾರರಾಗಿರುವುದರಿಂದ ಅವರ ಕಥನ ಕ್ರಮ ಅನುಸರಿಸುವ ಸಹಜ ಗುಣ ಅವರಲ್ಲಿ ಕಂಡು ಬರುತ್ತದೆ. ಆದರೆ ಅಂತಹ ಯಾವ ಪ್ರಭಾವವೂ ಕಾಣಿಸದ ಮುದಿರಾಜ್‌ ಕಥನ ಕ್ರಮ ನನಗೆ ಸೋಜಿಗವನ್ನುಂಟು ಮಾಡಿದೆ. ಗುಂಪಿನೊಡನಿದ್ದೂ ತಮ್ಮ ಅನನ್ಯತೆಯನ್ನು ಕಾಪಾಡಿಕೊಳ್ಳುವ ಅವರ ಈ ಶಕ್ತಿ ಅವರ ಮುಂದಿನ ಬರವಣಿಗೆಯನ್ನು ಕುತೂಹಲದಿಂದ ಕಾಯುವಂತೆ ಮಾಡುತ್ತವೆ’ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

About the Author

ಮುದಿರಾಜ್ ಬಾಣದ್
(01 May 1986)

ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನ ಗುಡದಿನ್ನಿಯಲ್ಲಿ ಜನಿಸಿದ ಮುದಿರಾಜ್ ಬಾಣದ್ ಅವರು ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ರಾಯಚೂರಿನಲ್ಲಿ ಅಂಚೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಅವರಿಗೆ 2011ರಲ್ಲಿ ಮತ್ತು 2019 (ಹೇನು ಕತೆಗೆ)ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಜಯತೀರ್ಥ ರಾಜಪುರೋಹಿತ ರಾಜ್ಯಮಟ್ಟದ ಕತಾಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ.   ...

READ MORE

Related Books