ಲೇಖಕ ಸಿ.ಎಚ್. ರಾಜಶೇಖರ ಅವರು ಬುದ್ಧನ ಅಮರ ಜಾತಕ ಕಥೆಗಳನ್ನು ಸಂಗ್ರಹಿಸಿದ ಕೃತಿ ಇದು. ಜಗತ್ತಿನ ಸರ್ವಶ್ರೇಷ್ಠ ಕಥೆಗಳೆಂದು ಪರಿಗಣಿಸಲಾಗುವ ಬುದ್ಧನ ಈ ಕಥೆಗಳು ಗುರಿ, ಮತ್ತು ಭರವಸೆ ಎಂದರೆ ಬದುಕಿನ ಉನ್ನತಿ, ಶ್ರೇಷ್ಠತೆ, ಯಶಸ್ಸು, ಪರಿಪೂರ್ಣತೆ ಹಾಗೂ ಸಂಕೋಲೆಗಳಿಂದ ವಿಮುಕ್ತಿಯೇ ಆಗಿದೆ. ‘ಬುದ್ಧ ನಂದನ ಬೋಳ್ಕೊಟ್ಟ ಕಾಮ ತೊರೆಸಿ ಕಲ್ಯಾಣದತ್ತ ಹಾಗೂ ಇತರೆ ಬೆಳಕಿನ ಕಥೆಗಳು’ ಕೃತಿಯು ಇದು ಬುದ್ಧನ ಜೀವನದ ಕತೆಯನ್ನು ಪ್ರತಿಬಿಂಬಿಸುವ ಬೃಹತ್ ಜ್ಞಾನಕೋಶ “ಸ್ವರ್ಣ ಖಜಾನೆ“ ಯಾಗಿದೆ. 25 ಸಂಪುಟಗಳ ಸಮಗ್ರ ಬುದ್ಧ ಸಾಹಿತ್ಯ ಮಾಲೆಯಡಿ ಈ ಕೃತಿ ಪ್ರಕಟವಾಗಿದೆ.