ಜಾಲ

Author : ಎಂ.ಜಿ. ಶುಭಮಂಗಳ

Pages 160

₹ 150.00




Year of Publication: 2022
Published by: ವಂಶಿ ಪಬ್ಲಿಕೇಷನ್ಸ್
Address: ನೆಲಮಂಗಲ, ಬೆಂಗಳೂರು- 562123
Phone: 9916595916

Synopsys

ತೆಲುಗಿನ ಲೇಖಕ ಪೆದ್ದಿಂಟಿ ಅಶೋಕ್ ಕುಮಾರ್ ಅವರ ತೆಲುಗು ಕಥೆಗಳನ್ನು ಎಂ.ಜಿ ಶುಭಮಂಗಳ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಲ್ಲಿ ಹನ್ನೆರಡು ಪ್ರತ್ಯೇಕ ಜಾಡಿನ ಕತೆಗಳಿವೆ. ಗೌರವ ಮೂಡಿಸಬಲ್ಲ ಹಾಗೂ ಮನಕಲುಕಬಲ್ಲ, ಮಾನವೀಯ ಗುಣಗಳುಳ್ಳ, ಗಂಭೀರ ಕಥೆಗಳು, ವಿಭಿನ್ನ ನೆಲೆಗಳಲ್ಲಿ ರೈತರು, ಸಾಮಾನ್ಯಜನರು, ಹಿಂದುಳಿದ ವರ್ಗದವರು, ಮೇಲ್ಜಾತಿಯವರು, ಅಧಿಕಾರಿಗಳು, ಪೋಷಕರು, ಬದುಕು ಕಟ್ಟಿಕೊಳ್ಳಲು ವಿದೇಶಗಳಿಗೆ ವಲಸೆ ಹೊದವರು…ಕೊನೆಗೆ ಪ್ರಕೃತ ಕೂಡ ಹೇಗೆ ವ್ಯವಸ್ಥಿತ ಜಾಲದಲ್ಲಿ ಸಿಲುಕಿ ನಲುಗುತ್ತಿದೆಯೆಂಬುದನ್ನು ತಿಳಿಸುವ ಕತೆಗಳಿವೆ. ಅದು ಬಹಳ ಸೂಚ್ಯವಾಗಿ ಗಹನವಾಗಿ, ವಿಡಂಬನಾತ್ಮಕವಾಗಿ, ನಿಷ್ಟುರವಾಗಿ ಮತ್ತು ನೇರವಾಗಿ ಚಿತ್ರಣಗೊಂಡಿದೆ.

About the Author

ಎಂ.ಜಿ. ಶುಭಮಂಗಳ

ಕೋಲಾರ ಜಿಲ್ಲೆಯ ಗುಡಿಬಂಡೆಯಲ್ಲಿ ೧೯೭೫ರಲ್ಲಿ ಜನನ. ದಿ.ಎಂ.ಆರ್. ಗುಂಡಪ್ಪ ಹಾಗೂ ಎಂ.ಎನ್. ಜಯಲಕ್ಷಮ್ಮ ದಂಪತಿಗಳ ಕಿರಿಯ ಪುತ್ರಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತçದಲ್ಲಿ ಎಂ.ಎ. ಮತ್ತು ಭಾರತೀಯ ವಿದ್ಯಾ ಭವನದ ಕನ್ನಡ ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೊಮಾ ಪದವೀಧರರು. ಸೂರ್ಯೋದಯ, ಜೀವನಾಡಿ, ಗೃಹಶೋಭಾ ಪತ್ರಿಕೆಗಳಲ್ಲಿ ಒಂದು ದಶಕದ ಕಾಲ ಉಪ-ಸಂಪಾದಕಿ, ವರದಿಗಾರ್ತಿ, ಅನುವಾದಕಿಯಾಗಿ ಕೆಲಸ ಮಾಡಿದ್ದಾರೆ. ಇಂಡಿಗೋ ಮಲ್ಟಿ ಮೀಡಿಯಾ ಪ್ರಕಟಣಾ ಸಹ ಸಂಸ್ಥಾಪಕಿಯಾಗಿ ದುಡಿದಿದ್ದಾರೆ. ಕಿಂಚ ಸ್ಮಾರಕ ಪ್ರಶಸ್ತಿ ಪುರಸ್ಕೃತರು. ಇವರ ಲೇಖನಗಳು, ಅನುವಾದಿತ ತೆಲುಗು ಕಥೆಗಳು ಸುಧಾ, ಮಯೂರ, ತುಷಾರ, ಸೂರ್ಯೋದಯ, ಗೃಹಶೋಭಾ, ವಿಜಯಕರ್ನಾಟಕ, ಕೆಂಡಸಂಪಿಗೆ, ಡೆಕ್ಕನ್ ...

READ MORE

Related Books