ʻಪ್ರಾಣಪಕ್ಷಿಯ ಅರಸುತ್ತಾ..ʼ ಜಯಪ್ರಕಾಶ ಮಾವಿನಕುಳಿಯವರ ಕಥಾಸಂಕಲ. ಲೇಖಕರು ಸ್ವತಂತ್ರ ಭಾರತದಲ್ಲಿ ಚಡಪಡಿಸುತ್ತಿರುವ ಸೂಕ್ಷ್ಮ ಸಂವೇದನೆಯ ವ್ಯಕ್ತಿಗಳ ಅಪಾರ ಸಂಕಷ್ಟಗಳನ್ನು ಸೃಜನಶೀಲತೆಯ ಮೂಲಕ ಧ್ವನಿಪೂರ್ಣವಾಗಿ ತಮ್ಮ ಅತ್ಯಂತ ಕಥೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಮಾನವೀಯ ಮೌಲ್ಯಗಳು ಸಮಾಜದಲ್ಲಿ ಅಧೋಗತಿಗೆ ಹೋಗುತ್ತಿರುವ ಬಗ್ಗೆ ಅಪಾರ ಸಿಟ್ಟು ಅವರ ಕಥೆಗಳಲ್ಲಿ ಹಾಸುಹೊಕ್ಕಿವೆ. ಅವರು ವರ್ತಮಾನದ ಸಂಗತಿಗಳನ್ನು ಹೇಳುತ್ತಲೇ ಭವಿಷ್ಯದ ಬೆಳಕಿನ ಬಗ್ಗೆ ಬರೆಯುತ್ತಾರೆ. ತಮ್ಮ ಪ್ರತಿಭಾ ಶೈಲಿಯ ಮೂಲಕ ಅವರು ತಮ್ಮ ಕಥೆಗಳಿಗೆ ಸ್ನಾಯುಶಕ್ತಿಯನ್ನು ತುಂಬಿದ್ದಾರ.
ಸಾಹಿತಿ ಜಯಪ್ರಕಾಶ ಮಾವಿನಕುಳಿ ಅವರು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯಿಕ ಕೃಷಿಯ ಜೊತೆಗೆ ನಾಟಕಕಾರರಾಗಿ, ರಂಗ ನಿರ್ದೇಶಕರಾಗಿ ಮತ್ತು ರಂಗಭೂಮಿ ಚಲನಚಿತ್ರ ನಟರಾಗಿಯೂ ಖ್ಯಾತಿ ಗಳಿಸಿದ್ದಾರೆ. ಕನ್ನಡ ಸಾಹಿತ್ಯಲೋಕಕ್ಕೆ ಹಲವು ನಾಟಕಗಳು, ಕಾದಂಬರಿ, ಸಣ್ಣಕತೆಗಳು, ಕಾವ್ಯ ಮತ್ತು ಇತರರೊಡನೆ ಹಲವು ಕೃತಿಗಳ ಸಂಪಾದನೆ ಸೇರಿದಂತೆ ಸುಮಾರು ಎಪ್ಪತ್ತು ಪುಸ್ತಕಗಳನ್ನು ನೀಡಿದ್ದಾರೆ. 1978ರಿಂದಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದು 4 ಕಥಾ ಸಂಕಲನಗಳು, 4 ಕವನ ಸಂಕಲನಗಳು, 7 ನಾಟಕಗಳು, 12 ಸಂಪಾದಿತ ಕೃತಿಗಳು ಹಾಗೂ ಇತರ ಕೃತಿಗಳೊಂದಿಗೆ 60ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. 'ಪೊಲಿಟಿಕ್ಸ್ ಆ್ಯಂಡ್ ಕಲ್ಚರ್' ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ...
READ MORE