
‘ಒಬ್ಬ ದೇಶಪ್ರೇಮಿಯ ಒಲವು’ ಹಂಝ ಮಲಾರ್ ಅವರ ಕಥಾಸಂಕಲನವಾಗಿದೆ. ಯುವಜನತೆಯ ಉತ್ಸಾಹವು ಕ್ರಮೇಣ ಆಕ್ರೋಶ ಸಂತಾಪಗಳಾಗಿ ಭ್ರಮೆ ನಿರಸನಗೊಳ್ಳುವಂಥ ಹಲವು ಹತ್ತು ಅನಿಷ್ಟಗಳನ್ನು ಕಥೆಯ ಮೂಲಕ ಹೇಳುತ್ತಿದ್ದಾರೆ. ಯಾವುದೇ ಧರ್ಮವಿರಲಿ, ಅಲ್ಲಿ ಮಾನವ ಸಂಬಂಧ ಗಳೊ೦ದಿಗೆ ಮಾತನಾಡುವ ಹ೦ಬಲ ಆಶಯ ಇವುಗಳಲ್ಲಿದೆ.

ಹಂಝ ಮಲಾರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಅವರು ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದಾರೆ. ಅನೇಕ ಗೋಷ್ಠಿಗಳಲ್ಲಿ ಕವನ ವಾಚನಗಳನ್ನು ಮಾಡಿದ್ದಾರೆ. ...
READ MORE
ಹೊಸತು-2004- ಎಪ್ರಿಲ್
ಮುಸ್ಲಿಂ ಸಮಾಜದ ಧಾರ್ಮಿಕ ಅತಿರೇಕಗಳ ಮುಸುಕು ಸರಿಸಿ ನೋಡಬಲ್ಲ ಯುವ ಬರಹಗಾರ ಹಂಝ ಅವರ ಉತ್ತಮ ಕಥೆಗಳ ಸಂಕಲನ. ತೀರ ಬಡತನದ ನೆರಳು ದಟ್ಟವಾಗಿ ಬಿದ್ದಿರುವ ಸಂಸಾರಗಳ ಚಿತ್ರಣ ಕಣ್ಣಿಗೆ ಕಟ್ಟಿದಂತೆ ಪಡಿಮೂಡಿಸಿದ್ದಾರೆ. ಯುವಜನತೆಯ ಉತ್ಸಾಹವು ಕ್ರಮೇಣ ಆಕ್ರೋಶ ಸಂತಾಪಗಳಾಗಿ ಭ್ರಮೆ ನಿರಸನಗೊಳ್ಳುವಂಥ ಹಲವು ಹತ್ತು ಅನಿಷ್ಟಗಳನ್ನು ಕಥೆಯ ಮೂಲಕ ಹೇಳುತ್ತಿದ್ದಾರೆ. ಯಾವುದೇ ಧರ್ಮವಿರಲಿ, ಅಲ್ಲಿ ಮಾನವ ಸಂಬಂಧ ಗಳೊ೦ದಿಗೆ ಮಾತನಾಡುವ ಹ೦ಬಲ ಆಶಯ ಇವುಗಳಲ್ಲಿದೆ.
