ಪ್ರೀತಿ ಚಿಗುರು

Author : ಎ. ಸರಸಮ್ಮ

Pages 292

₹ 292.00




Year of Publication: 2021
Published by: ಸುದರ್ಶನ ಪ್ರಕಾಶನ
Address: ತಾರಾ ನಿವಾಸ, ತಿಪಟೂರು

Synopsys

‘ಪ್ರೀತಿ ಚಿಗುರು’ ಎ.ಸರಸಮ್ಮನವರ ಕಾದಂಬರಿಯಾಗಿದೆ. ಜೀವನವೆಂಬುದು ಹೋರಾಟದ ಸಂತೆ, ಸಂಬಂಧಗಳೆಂಬ ಕೊಂಡಿಯು ಬೆಸೆದಿರಲು ಮಾನವನ ಬದುಕು ಸುಖ ಸಂತೋಷದಿಂದ ತುಂಬಿ ಭೂಮಿಯೆ ಸ್ವರ್ಗವಾಗಿ ಆನಂದದಿಂದ ಬಾಳುತ್ತಾನೆ. ಈ ಕೊಂಡಿಯು ಸಡಿಲಗೊಂಡು ಕಳಚಿದಾಗ ಪಡುವ ಯಾತನೆ ಅಷ್ಟಿಷ್ಟಲ್ಲ ಬದುಕೇ ಬೇಡವೆಂಬ ನೋವು ಮನವನ್ನು ಕಾಡಿ ಜೀವಂತ ಶವಗಳಂತೆ ಬದುಕು ಸಾಗಿಸುತ್ತಾ ನಗುವನ್ನೇ ಮರೆಯುತ್ತಾರೆ. ಸ್ನೇಹವೆಂಬುದು ಎರಡು ಆತ್ಮಗಳನ್ನು ಬೆಸೆಯುವ ನಿಷ್ಕಲ್ಮಶ ನಿರ್ಮಲ ಭಾವ. ಇಲ್ಲಿ ತ್ಯಾಗವೇ ಉಸಿರಾಗಿರುತ್ತದೆ ಸ್ವಾರ್ಥದ ನೆರಳೂ ಬೀಳದಂತೆ ಮನಸುಗಳು ಬೆರೆತು ಪವಿತ್ರತೆಯ ಸ್ಥಾನ ಪಡೆಯುತ್ತವೆ. ಇಂಥಾ ಸ್ನೇಹ ಪ್ರೀತಿಯೆಂಬ ಬಂಧನದಲ್ಲಿ ಸಿಲುಕಿ ಬಿಡಿಸಲಾರದ ಅನುಬಂಧವಾಗುವ ಕ್ಷಣದಲ್ಲೇ ದೂರವಾದಾಗ ಆ ಹೃದಯ ನರಳುವ ಯಾತನೆ ಸಹಿಸಲಸಾಧ್ಯವಾದುದು. ಜೀವವಿಲ್ಲದ ಜೀವನ, ಉಸಿರಿಲ್ಲದ ಒಡಲಂತೆ ದಿನಗಳನ್ನು ದೂಡುತ್ತ ಸಾಗುವುದು ಮುಳ್ಳಿನ ಮೇಲೆ ಹೆಜ್ಜೆ ಇಟ್ಟಂತೆ ಎಂಬುವುದನ್ನು ಲೇಖಕರ ನುಡಿಯಲ್ಲಿ ಉಲ್ಲೇಖಿಸಲಾಗಿದೆ.

About the Author

ಎ. ಸರಸಮ್ಮ

ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ.  ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...

READ MORE

Related Books