ಮಲಾಣ್

Author : ಶಾಂತನಾಯ್ಕ ಶಿರಗಾನಹಳ್ಳಿ

Pages 292

₹ 310.00




Year of Publication: 2018
Published by: ದೇಸಿ ಪುಸ್ತಕ ಪ್ರಕಾಶನ
Address: ದೇಸಿ ಪುಸ್ತಕ ಪ್ರಕಾಶನ, #121,13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040
Phone: 9845096668

Synopsys

’ಮಲಾಣ್ ’  ಕೃತಿಯು  ವಲಸೆ ಲಂಬಾಣಿಗರ ಇತಿಹಾಸ ವರ್ತಮಾನದ ಕಾದಂಬರಿಯಾಗಿದೆ.

ಲಂಬಾಣಿ ಜನಾಂಗದವರು ಸ್ವಾತಂತ್ರ್ಯ ಸಿಕ್ಕ 70 ವರ್ಷಗಳಿಂದಲೂ ಮೂಲ ನೆನಪುಗಳನ್ನು ಕಡಿದುಕೊಳ್ಳಲಾಗದೆ ಒದ್ದಾಡುತ್ತಿದ್ದು ನೆಲೆಗಾಗಿ ಅವಿರತ ಹೋರಾಟ ಮಾಡುತ್ತಿರುವ ಇವರು ಪರಾಂಪೋಕ್ ಬೇನಾಮಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು  ಒಂದಿಷ್ಟು ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಬದುಕುತ್ತಿದ್ದರು. ಇತ್ತೀಚಿನವರೆಗೂ ಸರ್ಕಾರಿ ಕಡತಗಳಲ್ಲಿ ಸೇರಿದ ತಾಂಡಗಳು, ಸರ್ಕಾರಿ ಸವಲತ್ತು ವಂಚಿತ ಜನರು ಹೀಗೆ ಬದುಕಿರುವ ಬಡ ಬಂಜಾರರು ತಮ್ಮ  ಬದುಕನ್ನು ಕಟ್ಟಿಕೊಳ್ಳುವ ಅಸಹನೀಯ ಸನ್ನಿವೇಶದಲ್ಲೂ ಸಹನೆಯಿಂದ ಬದುಕಿ ಕರ್ನಾಟಕ-ಭಾರತದ ಒಟ್ಟಾರೆ ಜನ ಸಮುದಾಯಗಳದಲ್ಲಿ ಬಂದು ಗುರುತಿಸಲ್ಪಡುವ ಪ್ರಮಾಣದಲ್ಲಿರುವ ಇವರನ್ನು ಆಯಾ ರಾಜ್ಯದಲ್ಲಿ ಕೇಂದ್ರೀಕೃತವಾಗಿರುವ ಬಹುಸಂಖ್ಯಾತ ಮೇಲ್ವರ್ಗ ಸ್ವಾಭಿಮಾನಕ್ಕೆ ತಲೆದೂಗಿ ಬಂಜಾರರನ್ನು ಪ್ರೀತಿಸುವುದರಿಂದ ಅಭಿಮಾನದಿಂದ ನೋಡುವುದು, ಬಹಳಷ್ಟು ಜಾತಿಗಳಿಗೆ ಸಹಿಸಲಾರದ ವಿಷಯವಾಗಿದೆ.

ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಮಾರುವ ಸ್ಥಿತಿ ತಲುಪಿರುವ ಬಂಜಾರರು ಕೂಲಿ ಮಾಡಿ ಬದುಕಲೇ ಬೇಕಾದ ಸನ್ನಿವೇಷವನ್ನು ಹೊಂದಿರುವ ಕಷ್ಟಜೀವಿಗಳು. ಇವರು ಕೆಳಗಿನಿಂದಲೂ ಶೋಷಣೆಗೊಳಗಾಗುತ್ತಿದ್ದಾರೆ. ಮೇಲಿನಿಂದಲೂ ಶೋಷಣೆಗೊಳಗಾಗುತ್ತಿದ್ದಾರೆ. ಈ ಎಲ್ಲಾ ತುಮುಲಗಳನ್ನು ಸಂಘರ್ಷಗಳನ್ನು ಐತಿಹಾಸಿಕ ದೃಷ್ಟಿಕೋನದಿಂದ ಈ ಕಾದಂಬರಿ ಇತಿಹಾಸ ಮತ್ತು ವರ್ತಮಾನದ ಮುಖಾಮುಖಿಯಾಗಿದೆ. ಭೂತಕಾಲದ ಹೆಜ್ಜೆ ಗುರುತುಗಳನ್ನು ಸ್ವಷ್ಟಪಡಿಸುವ ಪ್ರಯತ್ನವಾಗಿದೆ. ಮಲಾಣ್ ಎಂದರೆ ವಲಸೆ ಎನ್ನುವ ಅರ್ಥವಿದ್ದು, ವಸಾಹತು ಪೂರ್ವಕಾಲದಲ್ಲಿ ಇಡೀ ಭಾರತದ ಮೂಲೆ-ಮೂಲೆಗೆ ಹೋಗಿ ಸಣ್ಣಪುಟ್ಟ ವ್ಯಾಪಾರ ಮಾಡುತ್ತಾ ಕಾಡನ್ನು ಆಶ್ರಯಿಸಿದ್ದ ಲಂಬಾಣಿಗರ ಸ್ಥಿತ್ಯಂತರವನ್ನು ದಾಖಲಿಸುವ ಪ್ರಯತ್ನವಾಗಿದೆ.   

 

About the Author

ಶಾಂತನಾಯ್ಕ ಶಿರಗಾನಹಳ್ಳಿ

ಡಾ.ಶಾಂತನಾಯ್ಕ ಶಿರಗಾನಹಳ್ಳಿಯವರು ಧಾರವಾಡ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಶಿರಗಾನಹಳ್ಳಿಯವರು. ಕರ್ನಾಟಕ ವಿ.ವಿ.ಯಿಂದ ಎಂ.ಎಂ. (ಇಂಗ್ಲಿಷ್) ಪದವೀಧರರು. ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರು. ಕೃತಿಗಳು: ಗುಡ್ಡಜ್ಜ, ಕೊಂಯ್ಯ ಮತ್ತು ಧೋತ್ರ (ಕಥಾ ಸಂಕಲನಗಳು), ಮೀನು ಮತ್ತು ಹುಡುಗಿ, ಹಳೆ ಭಾವನೆ ಮತ್ತು ಹೊಸ ಮನುಷ್ಯ (ಕವನ ಸಂಕಲನಗಳು), ಗೋರ್ ಮಾಟಿ, ಲಮಾಣ್ (ಕಾದಂಬರಿಗಳು), ಮಲಾಣ- ಇವರ ಆತ್ಮಕಥನ,  ...

READ MORE

Related Books