ಉಮೇದುವಾರರು

Author : ಲೋಹಿತ್ ನಾಯ್ಕರ

Pages 248

₹ 250.00
Year of Publication: 2019
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮೀ ಭವನ, ಸುಭಾಷ್ ರೋಡ್, ಧಾರವಾಡ-580001
Phone: 9845447002

Synopsys

'ಉಮೇದುವಾರರು' ಡಾ. ಲೋಹಿತ್ ನಾಯ್ಕರ ರಾಜಕೀಯ ಕಾದಂಬರಿ. ರಾಜಕೀಯ ಕುಟುಂಬದಿಂದ ಬಂದ ಹಾಗೂ ವೃತ್ತಿಯಿಂದ ವಕೀಲರಾಗಿರುವ ನಾಯ್ಕರ ಅವರಿಗೆ ರಾಜಕೀಯದ ಆಳ-ಅಗಲಗಳ ಸ್ಥೂಲ ಪರಿಚಯ ಇದೆ. ಅವರ ಅನುಭವದ ಮೂಸೆಯಿಂದ ಬಂದಿರುವುದರಿಂದ ’ಉಮೇದುವಾರರು’ ಕೃತಿಗೆ ಒಂದು ಅಧಿಕೃತತೆ ಲಭ್ಯವಿದೆ.

ಉತ್ತರ ಕರ್ನಾಟಕ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಎರಡು ರಾಜಕೀಯ ಕುಟುಂಬಗಳ ನಡುವೆ ನಡೆಯುವ ಮೇಲಾಟವನ್ನು ಚಿತ್ರಿಸುವ ಕಾದಂಬರಿಯಲ್ಲಿ ಮಧ್ಯ ಕರ್ನಾಟಕದಲ್ಲಿ ಹಣ, ಹೆಂಡದ ಜೊತೆಗೆ ಜಾತಿವ್ಯವಸ್ಥೆ ಹೇಗೆ ರಾಜಕೀಯ ದಾಳಗಳನ್ನು ಉರುಳಿಸಬಲ್ಲದು ಎಂಬುದನ್ನು ನವಿರಾದ ಮತ್ತು ಲವಲವಿಕೆಯ ಭಾಷೆಯಲ್ಲಿ ಹಿಡಿದಿಟ್ಟಿರುವುದು ಈ ಕಾದಂಬರಿಯ ವಿಶೇಷ.

About the Author

ಲೋಹಿತ್ ನಾಯ್ಕರ

 ವೃತ್ತಿಯಿಂದ ವಕೀಲರಾಗಿರುವ ಲೋಹಿತ ನಾಯ್ಕರ್‌ ಅವರು ಪ್ರವೃತ್ತಿಯಿಂದ ಕತೆಗಾರ-ಲೇಖಕ. ಅಸ್ಸಾಂ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸಂದರ್ಶಕ ಪ್ರಾಧ್ಯಾಪಕರಾಗಿ ಲೋಹಿತ ನಾಯ್ಕರ ಕಾರ್ಯ ನಿರ್ವಹಿಸಿದ್ದಾರೆ. ಅವರ ಎರಡು ಕಥಾಸಂಕಲ ಪ್ರಕಟವಾಗಿವೆ.ದೃಷ್ಟಿಕೋನ ಮತ್ತು ಕಥಾನಾಯಕಿಯ ಕತೆ. ಕರ್ನಾಟಕ ಸರಕಾರದಲ್ಲಿ ಮಂತ್ರಿಯಾಗಿದ್ದ ಡಿ.ಕೆ.ನಾಯ್ಕರ್‌ ಅವರ ಪುತ್ರರು. ...

READ MORE

Reviews

ವರ್ತಮಾನದಲ್ಲಿ ಕಾಣುತ್ತಿರುವ ರಾಜಕಾರಣದ ಎಲ್ಲ ಮಗ್ಗುಲುಗಳನ್ನು ತೆರೆದಿಡುವ ಅಪರೂಪದ ಕಥಾವಸ್ತು ಒಳಗೊಂಡಿರುವ ರಾಜಕೀಯ ಕಾದಂಬರಿ ಇದು.ಈ ಕಾದಂಬರಿಯಲ್ಲಿ ಬರುವ ಎಸಿಪಿ ಹಿರೇಮಠ ಪಾತ್ರ, 'ಅರ್ಜುನ್ ಅಂದ ಹಾಗೆ ಒಂದೆರಡು ಲೌಕಿಕ ಮಾತುಗಳು, ಬೇರೆಯವರ ಹೆಂಗಸರ ಸಹವಾಸ ಬಹಳ ಕೆಟ್ಟದ್ದು, ದೊಡ್ಡವರ ಮನೆ ಹೆಂಗಸರ ಸಹವಾಸ ಇನ್ನೂ ಕೆಟ್ಟದು. ಈ ದೊಡ್ಡವರು ಎನಿಸಿಕೊಂಡವರು ಯಾವಾಗ ಯಾವ ಕೆಳಮಟ್ಟಕ್ಕೆ ಇಳಿದು ಏನೇನು ಮಾಡ್ತಾರೋ ಅಥವಾ ಮಾಡಿಸುತ್ತಾರೋ ಗೊತ್ತಾಗುವುದಿಲ್ಲ. ಅರ್ಜುನ್, ಹುಟ್ಟು ಎಲ್ಲರಿಗೂ ಒಂದೇ, ಆದರೆ ಸಾವು? ವರ್ಣರಂಜಿತ' ಎಂದು ಸಮಾಜ ಸೇವಕ ಮತ್ತು ವ್ಯಾಪಾರ ವೃತ್ತಿಯ ಅರ್ಜುನ್ ಕೋಳಿ ಎಂಬುವವನಿಗೆ ಹೇಳುವ ಮಾತು ಕಾದಂಬರಿಯ ಜೀವದ್ರವದಂತೆ ಕಾಣಿಸುತ್ತದೆ. ಹೈದರಾಬಾದ್ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದಲ್ಲಿ ಎರಡು ರಾಜಕೀಯ ಕುಟುಂಬಗಳಲ್ಲಿ ನಡೆಯುವ ಹಗ್ಗಜಗ್ಗಾಟ, ಜೊತೆಗೆ ಮಧ್ಯ ಕರ್ನಾಟಕದಲ್ಲಿ ಹಣ ಮತ್ತು ಸಾರಾಯಿ ಜೊತೆಗೆ ಜಾತಿ ವ್ಯವಸ್ಥೆಯೂ ಹೇಗೆ ರಾಜಕೀಯ ದಾಳವಾಗುತ್ತದೆ ಎನ್ನುವುದನ್ನು ಲೇಖಕರು ನವಿರಾದ ಭಾಷೆಯಲ್ಲಿ ಚಿತ್ರಿಸಿದ್ದಾರೆ. ನಿರೂಪಣೆಯಲ್ಲೂ ಲವಲವಿಕೆ ಇದ್ದು, ಓದುಗನ ಆಸಕ್ತಿ ಕೆರಳಿಸುವಂತೆ ರೋಚಕತೆ, ಅನಿರೀಕ್ಷಿತ ತಿರುವು ಕಥಾವಸ್ತುವಿನಲ್ಲಿ ಹದಪಾಕದಂತೆ ಬೆರೆತಿದೆ.

ಕೃಪೆ: ಪ್ರಜಾವಾಣಿ, ಮೊದಲ ಓದು (2020 ಜನವರಿ 13)

Related Books