ಕನ್ನಡ ಕಾದಂಬರಿ ಲೋಕ

Author : ಮಲ್ಲಿನಾಥ ಶಿ. ತಳವಾರ

Pages 100

₹ 100.00




Year of Publication: 2022
Published by: ಬಸವರಾಜ ಜಿ.ಕೊನೇಕ
Address: ಸಿದ್ಧಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕಾಶನ ಕಲಬುರಗಿ 585 101
Phone: 9448124431

Synopsys

ಕನ್ನಡ ಕಾದಂಬರಿ ಲೋಕ ಮಲ್ಲಿನಾಥ ಶಿ.ತಳವಾರ ಅವರ ಕೃತಿಯಾಗಿದೆ. ಈಗ ಬರೆಯುತ್ತಿರುವ ಕಲ್ಯಾಣ ಕರ್ನಾಟಕದ ಬರಹಗಾರರಲ್ಲಿ ಮಲಿನಾಥ ತಳವಾರ ಅವರು ತಮ್ಮ ನಿರಂತರ ಓದು, ಅಧ್ಯಯನ, ಬರವಣಿಗೆಯಿಂದ ಕನ್ನಡ ಓದುಗರ, ಚಿಂತಕರ ಗಮನ ಸೆಳೆದ ಅಪ್ಪಟ ಗ್ರಾಮೀಣ ಪ್ರತಿಭೆ, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಎನ್ನುವ ಹಿಂದುಳಿದ ಮನೆಯಲ್ಲಿ ಜನಿಸಿದ ಮಲ್ಲಿನಾಥರು ರಾವೂರ, ಶಹಾಬಾದ, ಕಲಬುರಗಿ, ಹಂಪಿಯಲ್ಲಿ ತಮ್ಮ ವಿವಿಧ ಹಂತದ ಶಿಕ್ಷಣವನ್ನು ಮುಗಿಸಿರುವರು. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಡಾ. ಶಿವರಾಮ ಕಾರಂತರ ಕಾದಂಬರಿಗಳನ್ನು ಕುರಿತು ಮಹಾಪ್ರಬಂಧವನ್ನು ಬರೆದು ಪಿಎಚ್.ಡಿ ಪದವಿ ಪಡೆದಿದ್ದಾರೆ. ಈಗ ಕಲಬುರಗಿಯ ಪ್ರತಿಷ್ಠಿತ ನೂತನ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವರು. ಕಾವ್ಯ ರಚನೆಯಿಂದ ಕೃಷಿಗೆ ತೊಡಗಿದ ಮಲ್ಲಿನಾಥರವರು ಬಹುಬೇಗನೆ ಗಜಲ್ ಕವಿಯಾಗಿ, ವಿಮರ್ಶಕರಾಗಿ ತಮ್ಮನ್ನು ಗುರುತಿಸಿಕೊಂಡದ್ದು ಇದು ಅವರ ಪ್ರಯೋಗಶೀಲತೆಯನ್ನು ಬಿಂಬಿಸುತ್ತದೆ. ಮಿರ್ಜಾಗಾಲಿಬ್ ಕವಿಯ ಕುರಿತು ಬರೆದ ಅವರ ವಿಮರ್ಶೆ ಕೃತಿಯು ಅವರೊಬ್ಬರು ಸೂಕ್ಷ್ಮ ಸಂವೇದಿ ವಿಮರ್ಶಕ ಎಂಬುದನ್ನು ತೋರಿಸಿಕೊಟ್ಟಿದೆ ಈ ಕೃತಿಯಿಂದ ದೊರೆತ ಪ್ರೋತ್ಸಾಹವು ವಿಮರ್ಶೆಯ ಕಡೆಗೆ ಒಲವು ಮೂಡಿಸಲು ಕಾರಣವಾಗಿರುವುದು. ಈ ಸಂಕಲನದಲ್ಲಿ ತಳವಾರರು ವಿಮರ್ಶೆಗೆ ಆಯ್ಕೆ ಮಾಡಿಕೊಂಡ ಕೃತಿಗಳು ಅದರಲ್ಲೂ ಮುಖ್ಯವಾಗಿ ಶಾಂತಿನಾಥ ದೇಸಾಯಿಯವರ ಛೇದ ಕಾರಂತರ ಚೋಮನದುಡಿ ವೀಣಾ ಶಾಂತೇಶ್ವದ ಗಂಡಸರು, ಸುಶೀಲಾ ಕಮತಗಿಯವರ ಬಿರಿದ ಮೊಗ್ಗು, ಕುಸುನೂರರ ಯಾತನಾ ಶಿಬಿರ, ಗೀತಾ ನಾಗಭೂಷಣರ ಹಸಿಮಾಂಸ ಮತ್ತು ಹದ್ದುಗಳು ಸಾರಾ ಅಬೂಬಕರ್ ಅವರ ವಜ್ರಗಳು ಇವೇ ಮೊದಲಾದ ಕಾದಂಬರಿಗಳನ್ನು ಪರಮರ್ಶೆಗೆ ಒಡ್ಡುವ ಪರಿ ಮೆಚ್ಚುಗೆಯಾಗುತ್ತದೆ. ಲೇಖಕರು ಇಲ್ಲಿ ಬಹುಮುಖ್ಯವಾಗಿ ಕೃಷಿ ವಿಶ್ಲೇಷಣೆಗೆ ಪೂರ್ಣ ಪ್ರಮಾಣದ ಗಮನಕೊಟ್ಟು, ಅಲ್ಲಿಂದಲೇ ಕೃತಿಯ ಸಾಮಾಜಿಕ, ಸಾಹಿತಿಕ ಮೌಲ್ಯಗಳನ್ನು ಪರೀಕ್ಷಿಸುವ ರೀತಿ ಅನುಕರಣೀಯವಾದುದು ಎಂದು ಮೀನಾಕ್ಷಿ ಬಾಳಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಮಲ್ಲಿನಾಥ ಶಿ. ತಳವಾರ
(11 July 1979)

ಲೇಖಕ ಮಲ್ಲಿನಾಥ ಶಿ. ತಳವಾರ ಅವರು ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರು (ಜನನ: 11-07-1979)  ಗ್ರಾಮದವರು. ಗುಲಬರ್ಗಾ ವಿ.ವಿ.ಯಿಂದ ಎಂ.ಎ. ಬಿ.ಇಡಿ, ಹಾಗೂ  ಹಂಪಿಯ ಕನ್ನಡ ವಿ.ವಿ.ಯಿಂದ ಪಿಎಚ್ ಡಿ (ಕಾರಂತರ ಕಾದಂಬರಿಗಳ ಸ್ತ್ರೀಪ್ರಪಂಚ) ಪದವೀಧರರು.  ಚಿತ್ತಾಪುರದ ಶ್ರೀ ಗಂಗಾ ಪರಮೇಶ್ವರಿ ಡಿ.ಎಡ್ ವಿದ್ಯಾಲಯದಲ್ಲಿ ಉಪನ್ಯಾಸಕರು. ನಂತರ 2009 ರಿಂದ ಕಲಬುರಗಿಯ ನೂತನ ಪದವಿ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರು. ರಾವೂರು ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಚಿತ್ತಾಪುರ ತಾಲೂಕು ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಚಿತ್ತಾಪುರ ತಾಲೂಕು ಘಟಕ ಅಧ್ಯಕ್ಷರು, ಕನ್ನಡ ...

READ MORE

Related Books