ತಂತ್ರಾಗ್ನಿ (ಕಾದಂಬರಿ)

Author : ಗಣೇಶ ಪ್ರಸಾದ ಮಂಜೇಶ್ವರ

Pages 260

₹ 280.00
Year of Publication: 2021
Published by: ಸ್ವಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಗಣೇಶ್ ಪ್ರಸಾದ್ ಮಂಜೇಶ್ವರ ಅವರ ಕಾದಂಬರಿ-ತಂತ್ರಾಗ್ನಿ. ಜೀವನದಲ್ಲಿ ಭರವಸೆ ಕಳೆದುಕೊಂಡಾತನಿಗೆ ಏಕಾಏಕಿಯಾಗಿ ತನಗೆ ತಿಳಿಯದಂತೆ ಅವಕಾಶಗಳು ತೆರೆದುಕೊಳ್ಳುತ್ತದೆ. ಇಂತಹ ರಹಸ್ಯಗಳು ಜೀವನದಲ್ಲಿ ಜರುಗುತ್ತಾ ಇರುತ್ತವೆ. ಹೀಗೆ ಬಯಸದೆ ಸಿಕ್ಕಿದ ಅವಕಾಶಗಳು ತರ್ಕವನ್ನೂ ಮೀರುತ್ತವೆ. ಕೆಲವೊಂದು ಅನುಭವಗಳು ತರ್ಕಕ್ಕೆ ನಿಲುಕಿದ್ದರೆ ಕೆಲವೊಂದು ಮೀರಿದ್ದಾಗಿರುತ್ತವೆ. ಈ ಮಧ್ಯೆ ತಾನು ಜೀವನದಲ್ಲಿ ಗಳಿಸಿದ್ದಾದರೂ ಏನು? ಹೀಗಿರುವುದೇ ಬದುಕಿನ ಮಿತಿಯೇ? ಅದೇ ಸಾಮರ್ಥ್ಯವೇ?  ತಂತ್ರ, ಮಂತ್ರ. ಅಧ್ಯಾತ್ಮಗಳನ್ನು ಬಹಳ  ಹತ್ತಿರದಿಂದ ನಿರೂಪಿಸುವ ರೋಚಕ ಕಥಾನಕವಿದು. ನಿಗೂಢ ಶಕ್ತಿಗಳ ದಟ್ಟ ಜ್ಞಾನ ನೀಡುವ ಕೃತಿ. 

 

 

About the Author

ಗಣೇಶ ಪ್ರಸಾದ ಮಂಜೇಶ್ವರ

ಲೇಖಕ ಗಣೇಶ ಪ್ರಸಾದ ಮಂಜೇಶ್ವರ ಅವರು ಕರ್ನಾಟಕ ಗಡಿನಾಡಿನ ಕಡಲ ತಡಿಯ ಕಾಸರಗೋಡು ಜಿಲ್ಲೆಯ ಮಂಜೇಶ್ವರದವರು.  ಎಂ ಎ, ಬಿ ಎಡ್, ಎಂ ಎಸ್ ಡಬ್ಲ್ಯೂ ಪದವೀಧರರು.  ವೃತ್ತಿಯಲ್ಲಿ ಅಧ್ಯಾಪಕರು. ಸಂಗೀತ, ಸಂಶೋಧನೆ, ಕಾವ್ಯ, ಸಣ್ಣಕಥೆ, ಅಂಕಣಬರಹ,ಕಾದಂಬರಿ, ಗೀತರಚನೆ, ರಾಗ ಸಂಯೋಜನೆ, ಹಾಡುಗಾರಿಕೆ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಆಸಕ್ತರು. ಇವರ ಬರಹಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.  ಕೃತಿಗಳು: ಸಾಕ್ಷಾತ್ಕಾರ (ಕವನ ಸಂಕಲನ), ತಂತ್ರಾಗ್ನಿ(ಕಾದಂಬರಿ),  ...

READ MORE

Related Books