ಮುಗಿಯದ ಪಯಣ

Author : ಎನ್. ಭಾಸ್ಕರ ಆಚಾರ್ಯ

Pages 216

₹ 80.00
Year of Publication: 2009
Published by: ಎನ್. ಆರ್. ಎ. ಎಂ ಪ್ರಕಾಶನ
Address: ಕೋಟೇಶ್ವರ-576222, ಉಡುಪಿ ಜಿಲ್ಲೆ

Synopsys

‘ಮುಗಿಯದ ಪಯಣ’ ಕೃತಿಯು ಎನ್ ಭಾಸ್ಕರ ಆಚಾರ್ಯ(ಆರ್ಚಿ) ಅವರ ಸಾಮಾಜಿಕ ಕಾದಂಬರಿಯಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಮುನಿಯಾಲ್ ಗಣೇಶ್ ಪೈ ಅವರು, `ಕರಾವಳಿ ಪ್ರದೇಶದ ಗ್ರಾಮೀಣ ಭಾಗದಲ್ಲಿ ಬಹಳ ಹಿಂದೆ ಆಸ್ಪತ್ರೆಯೊಂದನ್ನು ತೆರೆದು ಸ್ಥಳೀಯರಿಗೆ ಆಧುನಿಕ ವೈದ್ಯಕೀಯ ಸೇವೆ ಸಿಗುವಂತೆ ಮಾಡಿದ ಭಾಸ್ಕರ ಆಚಾರ್ಯರು, ಒಬ್ಬ ಸೃಜನಶೀಲ ಲೇಖಕರೂ ಹೌದು. ಆರ್ಚಿ ಎಂಬ ಕಾವ್ಯ ನಾಮದಲ್ಲಿ ಅವರು ಅನೇಕ ಕೃತಿಗಳನ್ನು ಬರೆದಿದ್ದಾರೆ ಮತ್ತು ಈ ಪ್ರದೇಶದ ಅನೇಕ ಲೇಖಕರ ಕೃತಿಗಳನ್ನು ಬೆಳಕು ಕಾಣಿಸಿದ್ದಾರೆ. ಸದಾಕಾಲ ವೈದ್ಯಕೀಯ ಚಟುವಟಿಕೆಗಳಲ್ಲಿ ಮುಳುಗಿದ್ದರೂ ತಮ್ಮ ಸೃಜನಶೀಲತೆಯನ್ನು ಜೀವಂತವಾಗಿಟ್ಟು ಕೊಂಡಿದ್ದಾರೆ. ವ್ಯಕ್ತಿಯೊಬ್ಬನ ಆಂತರಿಕ ತುಮುಲಗಳು, ಸಾಮಾಜಿಕ ವ್ಯವಸ್ಥೆಯ ಲೋಪದೋಷಗಳು, ಜ್ಞಾನದ ಹೆಸರಿನಲ್ಲಿ ಹೆಚ್ಚುತ್ತಿರುವ ಅಂಧಕಾರ, ಹೀಗೆ ಹಲವು ಆಯಾಮಗಳನ್ನು ಅತ್ಯಂತ ಯಶಸ್ವಿಯಾಗಿ ಚಿತ್ರಿಸಿ ಆರ್ಚಿಯವರು ಬರೆಯುತ್ತಿರುವ ಬೃಹತ್ ಕಾದಂಬರಿಯ ಮೂರನೆಯ ಭಾಗವಿದು. ಸ್ವತಂತ್ರವಾಗಿಯೂ ಇದನ್ನು ಪ್ರತ್ಯೇಕ ಕೃತಿಯಂತೆ ಓದಿ ರಸಗ್ರಹಣ ಮಾಡಬಹುದು. ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲೊಂದು ಅಪೂರ್ವ ಪ್ರಯೋಗ ಸಾಧನೆ ಇದು'  ಎಂದು ಪ್ರಶಂಸಿಸಿದ್ದಾರೆ. 

About the Author

ಎನ್. ಭಾಸ್ಕರ ಆಚಾರ್ಯ
(01 February 1954)

ಭಾಸ್ಕರ್ ಆಚಾರ್ಯ ಎನ್ ಅವರು ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ 1954 ಫೆಬ್ರವರಿ 01ರಂದು ಜನಿಸಿದರು. ಆರ್ಚಿ ಅವರ ಕಾವ್ಯನಾಮ. ತಂದೆಯ ಸ್ಮರಣಾರ್ಥ ಡಾ. ಎನ್. ಆರ್. ಆಚಾರ್ಯ ಸ್ಮಾರಕ ಆಸ್ಪತ್ರೆಯನ್ನು 1983ರಲ್ಲಿ ನಿರ್ಮಿಸಿದ್ದಾರೆ.  ಕೋಟೇಶ್ವರ ರೋಟರಿ ಸಂಸ್ಥೆಯ ಪ್ರಾರಂಭಿಕ ಸದಸ್ಯರಾಗಿದ್ದರು. ಸುವರ್ಣ ಮಹೋತ್ಸವ ಸಮಿತಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರದ ಗೌರವಾಧ್ಯಕ್ಷ ಹಾಗೂ ಸ್ಮರಣ ಸಂಚಿಕೆಯ ಸಂಪಾದಕರಾಗಿದ್ದರು. ‘ದ್ವಂದ್ವ, ವ್ಯವಸ್ಥೆ, ಅಭ್ಯಾಸ, ಪ್ರಯೋಗ, ಪರಿಣಾಮ, ಹೊಸ ಹಾದಿಯಲ್ಲಿ, ಆರ್ಚಿ ಅಂಕಣ’ ಅವರ ಮುಖ್ಯ ಕೃತಿಗಳು. ಪ್ರತಿ ವರ್ಷ ಬೆಂಗಳೂರಿನ ಗೆಳೆಯರ ಬಳಗದ ಸಹಯೋಗದೊಡನೆ ಸಾಹಿತ್ಯಕ ಸ್ಪರ್ಧೆ, ...

READ MORE

Related Books