ಎತ್ತರ

Author : ಇಂದ್ರಕುಮಾರ್‌ ಎಚ್.ಬಿ

Pages 530

₹ 500.00
Year of Publication: 2022
Published by: ಇಂಪನಾ ಪುಸ್ತಕ

Synopsys

‘ಎತ್ತರ’ ಇಂದ್ರಕುಮಾರ್ ಎಚ್.ಬಿ ಅವರ ಕಾದಂಬರಿಯಾಗಿದೆ. ಇಲ್ಲಿನ ವಿಚಾರಗಳು ದಟ್ಟ ಹಿನ್ನೆಲೆಗಳನ್ನು ಚಿತ್ರಿಸುತ್ತಲೇ, ಆ ಹಿನ್ನೆಲೆಗಳು ಅಮುಖ್ಯವೋ ಅನ್ನುವಷ್ಟು ನಮ್ಮನ್ನು ಪಾತ್ರಗಳ ಆಂತರಿಕ ವಿಶ್ವಗಳೊಳಗೆ ಕಳೆದು ಹೋಗುವಂತೆ ವಿಚಾರವನ್ನು ಪ್ರಸ್ತಾಪಿಸುತ್ತದೆ. ವಾಸ್ತವ- ಅವಾಸ್ತವ ಅಥವಾ ಅತಿ ವಾಸ್ತವ ಮಾಂತ್ರಿಕ-ವಾಸ್ತವ ಈ ಬಗೆಯ ವಿಂಗಡೆಗಳನ್ನು ಸಹ ಇಲ್ಲಿನ ಕತೆಗಳು ಅನುಪಯೋಗಿಯಾಗಿಸುತ್ತವೆ. ಹಳ್ಳಿ ಬದುಕು, ಪಟ್ಟಣದ ಬದುಕು, ಆಧುಕಿನ ಸಾಂಪ್ರದಾಯಿಕ ಎಂಬೆಲ್ಲ ವಿಂಗಡನೆಗಳು ಕೆಲಸಕ್ಕೆ ಬರದಂತೆ ಮಾಡಿಸುವ ಕಲ್ಪನಾ ಶಕ್ತಿ ಈ ಕತೆಗಳದ್ದು. ಓದುಗರಿಗೆ ಕಲಾತ್ಮಕ, ಸಾಮಾಜಿಕ, ರಾಜಕೀಯ ಇತ್ಯಾದಿ ಸ್ತರಗಳಲ್ಲಿಯೂ ಚುರುಕು ತಾಗಿಸಿ ಕ್ರಿಯಾತ್ಮಕ ಓದಿನ ಅನುಭವ ಕೊಡುವಲ್ಲಿ ಇಲ್ಲಿನ ವಿಚಾರಗಳು ಸಫಲವಾಗುತ್ತದೆ. ವಿವರಗಳು ಪ್ರಸಂಗಗಳ ಮೇಲೂ, ಪ್ರಸಂಗಗಳು ವಿವರಗಳ ಮೇಲೂ ಮೇಲಾಟ ಸಾಧಿಸುತ್ತ, ತನ್ಮೂಲಕ ಪಾತ್ರಗಳು ಒಂದು ಬಗೆಯ ದಟ್ಟತೆಯನ್ನು, ತೀವ್ರತೆಯನ್ನೂ ಪಡೆಯುವ ಮೇಲಾಟ ಸಾಧಿಸುತ್ತ, ತನ್ಮೂಲಕ ಪಾತ್ರಗಳು ಒಂದು ಬಗೆಯ ದಟ್ಟತೆಯನ್ನು, ತೀವ್ರತೆಯನ್ನು ಪಡೆಯುತ್ತದೆ.

About the Author

ಇಂದ್ರಕುಮಾರ್‌ ಎಚ್.ಬಿ

'ಆ ಮುಖ', 'ನನ್ನ ನಿನ್ನ ನೆಂಟತನ', 'ಪರಮೂ ಪ್ರಪಂಚ' ಹಾಗೂ 'ಕಾಣದ ಕಡಲು' ಸಂಕಲನಗಳ ಮೂಲಕ ಗಮನ ಸೆಳೆದವರು ಕಥೆಗಾರ ಇಂದ್ರಕುಮಾರ್ ಎಚ್‌.ಬಿ. ವೃತ್ತಿಯಿಂದ ಶಿಕ್ಷಕರಾಗಿರುವ ಇವರ ಕಾದಂಬರಿಗಳು ’ಮೃದುಲಾ’ ಮತ್ತು’ಹುಲಿಕಾನು’.  ಚಿತ್ರದುರ್ಗ ಮೂಲದವರಾದ ಇಂದ್ರಕುಮಾರ್ ಅವರ ಕತೆಯೊಂದು ’ಸೂಜಿದಾರ’ ಹೆಸರಿನಲ್ಲಿ ಸಿನಿಮಾ ಸಹ ಆಗಿದೆ. ತಮ್ಮದೇ ಇಂಪನ ಪ್ರಕಾಶನದ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.  ಡಾ. ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ, ಜನ್ನಾ ಸನದಿ ಸಾಹಿತ್ಯ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಅರಳು ಪ್ರಶಸ್ತಿ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ 'ಯುವ ಪುರಸ್ಕಾರ',  ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿರುವ ಅವರು ಗುಲ್ಬರ್ಗಾ ವಿವಿಯ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಚಿನ್ನದ ...

READ MORE

Related Books