ಕಲ್ಲರಳಿ ಹೂವಾಯ್ತು

Author : ಹೆಚ್.ಜಿ. ರಾಧಾದೇವಿ

Pages 152

₹ 80.00
Year of Publication: 2012
Published by: ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ
Address: ಬೆಂಗಳೂರು

Synopsys

ಕಲ್ಲರಳಿ ಹೂವಾಯ್ತು ಹೆಚ್‌.ಜಿ ರಾಧದೇವಿ ಕಾದಂಬರಿಯಾಗಿದೆ. ಒಂದು ಕಾದಂಬರಿಯ ನಾಯಕಿ ಎಂದರೆ ಸುಂದರವಾದ ಯುವತಿಯೇ ಆಗಬೇಕೆ ? ಅಥವಾ ಸಕಲ ಸದ್ಗುಣ ಸಂಪನ್ನಳೇ ಆಗಬೇಕೇ ? ಈ ಎರಡೂ ನಿಯಮ ಮುರಿದವರು ರಾಧಾದೇವಿಯವರು . ಈ ಕಾದಂಬರಿಯ ನಾಯಕಿ ಅರವತ್ತು ವರ್ಷದ ವೃಧ್ಧೆ ವೆಂಕಮ್ಮನವರು . ಈ ವಯಸ್ಸಿನಲ್ಲೂ ಅರಿಷಡ್ವರ್ಗಗಳನ್ನು ಬಿಡದವರು . ಮಗಳ ಮೇಲೆ ವಿನಾಕಾರಣ ಮೋಹವೆಷ್ಟೋ ಸೊಸೆಯ ಮೇಲೆ ವಿನಾ ಕಾರಣ ದ್ವೇಷವೂ ಅಷ್ಟೇ ಇದೆ . ಕೊನೆಗಾದರೂ ಆಕೆ ಯಾರು ತಮ್ಮವರು ಎಂದು ಅರಿತರೇ ಎನ್ನುವುದೇ ಕಥಾ ವಸ್ತು . ನಾಯಕಿ ವೆಂಕಮ್ಮನವರಿಗೆ 60 ವರ್ಷ ವಯಸ್ಸು . ಇಬ್ಬರು ಗಂಡು ಮಕ್ಕಳು ಹಾಗು ಒಬ್ಬ ಮಗಳ ತಾಯಿ . ದೊಡ್ಡ ಮಗ ಸುರೇಶ ಹಾಗು ಅವನ ಹೆಂಡತಿ ಜೊತೆ ವಿರಸ ಮಾಡಿಕೊಂಡು ಎರಡನೇ ಮಗ ಸತೀಶನ ಜೊತೆಗಿರಲು ಬರುತ್ತಾರೆ . ಇಲ್ಲಿ ಸತೀಶನ ಹೆಂಡತಿ ಚಂಪಾ ಅತ್ತೆಯನ್ನು ಅತ್ಯಂತ ಪ್ರೀತಿಯಿಂದಲೇ ಸ್ವಾಗತಿಸುತ್ತಾಳೆ . ಗಂಡ ಹೆಂಡಿರಿಬ್ಬರೂ ಕೆಲಸಕ್ಕೆ ಹೋಗುವವರಾದ್ದರಿಂದ ಮನೆ ಕೊಂಚ ಅಸ್ತವ್ಯಸ್ತವಾಗಿರುತ್ತದೆ . ಚಂಪಾ ಮನೆಗೆಲಸದಲ್ಲಿ ಗಂಡನ ಸಹಾಯ ಪಡೆಯುತ್ತಿರುತ್ತಾಳೆ .ವೆಂಕಮ್ಮನವರ ಪಾಲಿಗೆ ಇದು ಅಸಹನೆಯ ವಿಷಯ .

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books