ಶರಣ ಶಿರೋಮಣಿ ಅಕ್ಕನಾಗಮ್ಮ

Author : ವಿಜಯಲಕ್ಷ್ಮೀ ಬಾಳೇಕುಂದ್ರಿ

Pages 227

₹ 135.00




Year of Publication: 2017
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ಹೃದಯ ರೋಗ ತಜ್ಞೆ ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರು ಬರೆದ ಕಾದಂಬರಿ-ಶರಣ ಶಿರೋಮಣಿ ಅಕ್ಕ ನಾಗಮ್ಮ. 12ನೇ ಶತಮಾನದ ಶರಣರಲ್ಲಿ ಅಕ್ಕ ನಾಗಮ್ಮ ಸಹ ಪ್ರಮುಖರು. ಇಲ್ಲಿ ಜಾತಿ -ಧರ್ಮದ ಭೇದ ಇರಲಿಲ್ಲ. ಕೇವಲ ಜ್ಞಾನಕ್ಕಷ್ಟೇ ಆದ್ಯತೆ ಇತ್ತು. ಅಕ್ಕ ನಾಗಮ್ಮ ಅವರು ಸಾಮಾಜಿಕ ತಾರತಮ್ಯವನ್ನು,ಅಸಮಾನತೆಯನ್ನು ಪ್ರತಿಭಟಿಸಿ ಹಲವಾರು ವಚನಗಳನ್ನು ರಚಿಸಿ ಜಾಗೃತಿ ಮೂಡಿಸಿದವರು. ಇವರ ಬದುಕು-ಸಾಮಾಜಿಕ ಸುಧಾರಣೆಯ ಸಾಧನೆಗಳನ್ನು ವಸ್ತುವಾಗಿಸಿ ಬರೆದ ಕಾದಂಬರಿ ಇದು. ಕಥಾ ವಸ್ತು, ಸನ್ನಿವೇಶಗಳ ಜೋಡಣೆ, ನಿರೂಪಣಾ ಶೈಲಿ ಹಾಗೂ ಪಾತ್ರಗಳ ಸೃಷ್ಟಿಯಿಂದ ಓದುರ ಗಮನ ಸೆಳೆಯುತ್ತದೆ.

About the Author

ವಿಜಯಲಕ್ಷ್ಮೀ ಬಾಳೇಕುಂದ್ರಿ
(06 August 1950)

ವೃತ್ತಿಯಲ್ಲಿ ವೈದ್ಯೆಯಾಗಿ, ವಿಶೇಷವಾಗಿ ಮಕ್ಕಳ ಹೃದಯತಜ್ಞೆಯಾಗಿ, ಬಡವರ ಬಗ್ಗೆ ಮಾನವೀಯತೆ, ಅನುಕಂಪದ ಗುಣಗಳನ್ನು ಹೊಂದಿರುವ, ಮನದಾಳದಲ್ಲಿ ಮೂಡುವ ಆರ್ದ್ರ ಭಾವಗಳಿಗೆ ಅಕ್ಷರ ರೂಪ ನೀಡುವ ಸಾಹಿತಿಯಾಗಿ ಓದುಗರ ಮನಸ್ಸನ್ನು ಸೆಳೆದಿರುವ ವಿಜಯಲಕ್ಷ್ಮಿ ಬಾಳೇಕುಂದ್ರಿಯವರು ಹುಟ್ಟಿದ್ದು 1950 ರ ಆಗಸ್ಟ್‌ 6ರಂದು ಬೆಳಗಾವಿಯಲ್ಲಿ. ತಂದೆ ಈಶ್ವರಪ್ಪ ಗುರುಸಿದ್ಧಪ್ಪ ಬಾಳೇಕುಂದ್ರಿ, ತಾಯಿ ಸಿದ್ದವ್ವ. ತಂದೆ ಮುಂಬಯಿ ವಿಶ್ವವಿದ್ಯಾಲಯದಿಂದ ಪಶುವೈದ್ಯಕೀಯದಲ್ಲಿ ಚಿನ್ನದ ಪದಕದೊಡನೆ ಪದವಿ ಪಡೆದಿದ್ದಲ್ಲದೆ ವೈಸ್‌ರಾಯ್‌ರವರಿಂದ ಪ್ರಶಸ್ತಿ ಪಡೆದ ಪ್ರತಿಭಾನ್ವಿತರು. ತಾಯಿಯ ತಂದೆ ರಾವಬಹದ್ದೂರ್ ವೈಜನಾಥ ಅನಗೋಳ್‌ರವರು ಬೆಳಗಾವಿಯ ಕೆ.ಎಲ್‌.ಇ. ಸೊಸೈಟಿಯ ಸಂಸ್ಥಾಪಕರಲ್ಲೊಬ್ಬರು, ಸುಶಿಕ್ಷಿತ, ಸುಸಂಸ್ಕೃತ ಮನೆತನ. ಪ್ರಾರಂಭಿಕ ಶಿಕ್ಷಣ ...

READ MORE

Related Books