ಈ ಕಾದಂಬರಿಯು ಸಮಾಜದ ಊನವುಳ್ಳ ಕುಟುಂಬ ವ್ಯವಸ್ಥೆಯ ತುಣುಕೊಂದನ್ನು ಕಥಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಹೆಣ್ಣಿನ ಪಾತ್ರ ಹೇಗಿರಬೇಕು, ಹೇಗಿರುತ್ತದೆ ಎಂಬ ವೈಚಾರಿಕತೆಯನ್ನು ಈ ಕಾದಂಬರಿಯೂ ನಮಗೆ ವಿವರಣೆಗಳನ್ನು ನೀಡುತ್ತದೆ. ಈ ದೃಷ್ಟಿಯಿಂದ ಸಮಾಜಶಾಸ್ತ್ರದ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮವಾದ ಕೈಪಿಡಿಯಾಗಿದೆ.
ಸಂಶೋಧನಾ ವಿಜ್ಞಾನಿಯಾಗಿರುವ ಚೀಮನಹಳ್ಳಿ ರಮೇಶಬಾಬು ಚಿಂತಾಮಣಿ ತಾಲ್ಲೂಕಿನ ಚೀಮನಹಳ್ಳಿಯವರು. ‘ಪ್ರಶ್ನೆ ಮತ್ತು ದೇವರು’, ‘ಎರಡು ಲೋಟಗಳು’, ‘ಮಾಯಾ ಸರೋವರ’ ಎಂಬ ಕವಿತಾ ಸಂಗ್ರಹಗಳನ್ನು ‘ನಾಗ್ದಾಳೆ’ ಎಂಬ ಖಂಡಕಾವ್ಯವನ್ನು ‘ಹಸ್ತಬಲಿ’ ಎಂಬ ಕಥಾ ಸಂಕಲನ ಹಾಗು ‘ಹದ’, ‘ಬಲಿಹಾರ’, ‘ಟೈರ್ಸಾಮಿ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ‘ಕಾಡು ಹುವ್ವು’ ಇವರ ಸಂಪಾದಕತ್ವದಲ್ಲಿ ಬಂದಿರುವ ಅನುವಾದಿತ ಕವಿತೆಗಳ ಸಂಗ್ರಹ. ಮಾಸ್ತಿ ಕಾದಂಬರಿ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ಬೆಟಗೆರಿ ಕೃಷ್ಣಶರ್ಮ ಕಾದಂಬರಿ ಪ್ರಶಸ್ತಿ, ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ, ವೀಚಿ ಉದಯೋನ್ಮುಖ ಪ್ರಶಸ್ತಿ, ಅರಳು ಸಾಹಿತ್ಯ ಪ್ರಶಸ್ತಿ ಸೇರಿದಂತೆ ಇನ್ನೂ ಹಲವು ...
READ MORE