ನಿರಾಕರಣ

Author : ಎಸ್.ಎಲ್. ಭೈರಪ್ಪ

Pages 171

₹ 160.00

Buy Now


Year of Publication: 1971
Published by: ಸಾಹಿತ್ಯ ಭಂಡಾರ
Address: ಶಾಪ್ ನಂ.8, ಜೆಎಂ ಲೇನ್, ಬಳೆಪೇಟೆ, ಬೆಂಗಳೂರು ಕರ್ನಾಟಕ 560053
Phone: 080 2287 7618

Synopsys

ಪ್ರಖ್ಯಾತ ಲೇಖಕರಾದ ಎಸ್. ಎಲ್. ಭೈರಪ್ಪನವರ ’ನಿರಾಕರಣ’ ಕಾದಂಬರಿಯು ಸಂಸಾರವನ್ನು ನಿರಾಕರಿಸಿ ವ್ಯಕ್ತಿ ಸಮಾಜದ ಎಲ್ಲ ಸಂಬಂಧಗಳನ್ನೂ ಕಳಚಿಕೊಂಡು ಒಂಟಿಯಾಗುವ, ವಿರಕ್ತ ಜೀವನವನ್ನು ಬೋಧಿಸುವ ಭಾರತೀಯ ತತ್ತ್ವದ ಮುಖವೊಂದನ್ನು ವಿಶ್ಲೇಷಿಸುವ ಯತ್ನವಾಗಿದೆ. ಕಾದಂಬರಿಯ ನಾಯಕ ನರಹರಿಯ ವಾಸ್ತವ ಹಾಗೂ ಅದರ್ಶ ಜೀವನದ ನಿರಂತರ ಭ್ರಮಣೆಯೇ ಇಲ್ಲಿಯ ಕಥಾವಸ್ತು. ವ್ಯಕ್ತಿ ಹಾಗೂ ಸಮಾಜಕ್ಕಿರುವ ಅಭೇದ್ಯ ಸಂಬಂಧವನ್ನು ಕಾದಂಬರಿ ಪ್ರತಿಪಾದಿಸುತ್ತದೆ.

ಐದು ಪುಟ್ಟ ಮಕ್ಕಳನ್ನು ಸಾಕಲು ಮನೆಯಲ್ಲಿ ಹೆಣ್ಣು ದಿಕ್ಕಿಲ್ಲದ ತಂದೆಯು, ಅವರನ್ನೆಲ್ಲ ದತ್ತು ಕೊಡುವುದಾಗಿ ಮುಂಬೈಯ ಟೈಮ್ಸ್ ಪತ್ರಿಕೆಯಲ್ಲಿ ಜಾಹೀರಾತು ಮಾಡುತ್ತಾನೆ. ‘ಬಂಧನಕ್ಕೆ ಮಿತಿ ಎಂಬುದು ಸುಳ್ಳು. ಅಂಟಿದರೆ ಪೂರ್ತಿಯಾಗಿಯೂ ಸೆಳೆದುಬಿಡುತ್ತದೆವಿದ್ಯುತ್ ಶಾಕ್ ನಂತೆ. ಇಲ್ಲ, ಸ್ಪರ್ಶಕ್ಕೆ ಸಿಕ್ಕದಷ್ಟು ದೂರವೇ ಇರಬೇಕು. ಇದಕ್ಕೆ ಮಧ್ಯಮ ಸ್ಥಿತಿ ಇಲ್ಲಎಂಬ ಗ್ರಹಿಕೆಯಿಂದ ಅವನು ನಿರ್ಧರಿಸುತ್ತಾನೆ. ಕನ್ನಡ ಕಾದಂಬರೀ ಪ್ರಪಂಚದಲ್ಲಿ ಒಂದು ವಿನೂತನ ಕೃತಿಯಾಗಿ ’ನಿರಾಕರಣ’ ಓದುಗರ ಕೈ ಸೇರಿದೆ.

About the Author

ಎಸ್.ಎಲ್. ಭೈರಪ್ಪ
(20 August 1931)

ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಮೀಮಾಂಸಕರೂ ಹೌದು. ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ 1931ರ ಆಗಸ್ಟ್ 20ರಂದು ಜನಿಸಿದರು. ತಂದೆ ಲಿಂಗಣ್ಣಯ್ಯ- ತಾಯಿ ಗೌರಮ್ಮ. ತಮ್ಮ ಹುಟ್ಟೂರಿನ ಸುತ್ತಮುತ್ತಲ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದು ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಓದಿ, ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮಾಡಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು. ಅನಂತರ ಹುಬ್ಬಳ್ಳಿಯ ಕಾಡುಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕ (1958-60), ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ (1960-66), ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಉಪಪ್ರಾಧ್ಯಾಪಕ (1967-1971) ...

READ MORE

Related Books