ಕಾನ್ಮನೆಯ ಕಾಲುದಾರಿ

Author : ದಿನೇಶ ಹುಲಿಮನೆ

Pages 171

₹ 160.00




Year of Publication: 2019
Published by: ಕಿಕ್ಕೇರಿ ಪಬ್ಲಿಕೇಷನ್ಸ್
Phone: 9916058773

Synopsys

ಮಲೆನಾಡೆಂದು ಕರೆಯಲ್ಪಡುವ ಪಶ್ಚಿಮ ಘಟ್ಟ ಪ್ರದೇಶದ ಸುತ್ತಲಿನ ಊರುಗಳು, ಅಲ್ಲಿಯ ಪ್ರಕೃತಿ ಅದನ್ನು ಆಶ್ರಯಿಸಿ ನೆಲೆ ನಿಂತ ದುಂಬಿಗಳು, ಪಟ್ಟಣದ ಪರಿಸರಕ್ಕೆ ಆಕರ್ಷಿತವಾಗಿ ಅಲ್ಲಿಂದ ಜಿಗಿಯುವ ಮರಿದುಂಬಿ ಗಳು, ಅಲ್ಲಿ ಅವುಗಳ ಹಾರಾಟ, ಇವೇ “ಕಾನ್ದನೆಯ ಕಾಲುದಾರಿ" ಕಾದಂಬರಿಯ ಕಥಾ ವಸ್ತು ಹಾಗಿದ್ದೂ ಇದು ಯಾರನ್ನೂ ಉದ್ದೇಶಿಸಿ ಬರೆದ ಕಾದಂಬರಿಯಲ್ಲ, ಪಾತ್ರಗಳೆಲ್ಲವೂ ಕೇವಲ ಕಾಲನಿಕ *ಸಮಾಜದಲ್ಲಿ ಕೆಲವರು ಜೀವನದ ರಥವೇರಿ ಸಾಗಿದರೆ, ಮತ್ತೆ ಕೆಲವರು ಬದುಕಿನ ಬಂಡಿಯನ್ನು ಎಳೆಯುತ್ತಾರೆ. ಎಳೆಯುವುದೂ ಕಷ್ಟವಾದಾಗ ತಳ್ಳುವುದು ಸಹಜ, ಆಧುನೀಕರಣ, ಸಂಪ್ರದಾಯ ಸಂಬಂಧ ಇತ್ಯಾದಿಗಳ ನಡುವೆ ಸಂಸಾರ ನಡೆಸುವ, ಎಳೆಯುವ ಅಥವಾ ತಳ್ಳುವ ಸಮಾಜದಲ್ಲಿ, ಸಾಂದರ್ಭಿಕವಾಗಿ ನಡೆಯುವ ಎಷ್ಟೋ ಘಟನೆಗಳನ್ನು ನೇರವಾಗಿ "ಸರಿ" ಇಲ್ಲವೇ "ತಪ್ಪು" ಎಂದು ತೀರ್ಮಾನಿಸುವುದು ಅಷ್ಟು ಸುಲಭದ ಮಾತಲ್ಲ.

About the Author

ದಿನೇಶ ಹುಲಿಮನೆ

ದಿನೇಶ ಹುಲಿಮನೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪಶ್ಚಿಮ ಘಟ್ಟದಲ್ಲಿರುವ ಸಿದ್ದಾಪುರ ತಾಲೂಕಿನ ಪುಟ್ಟ ಹಳ್ಳಿ ಹುಲಿಮನೆ ಇವರ ತವರೂರು. ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಪದವಿ ಪಡೆದ ಇವರು ವೃತ್ತಿಯಲ್ಲಿ ಇಂಜಿನಿಯರ್. ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿರುವ ಇವರು, ಪ್ರವೃತ್ತಿಯಲ್ಲಿ ಲೇಖಕರು. ಕಾದಂಬರಿಗಳ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಇವರು ಸಣ್ಣ ಕಥೆಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಮಲೆನಾಡಿನ ಪ್ರಾಕೃತಿಕ ವರ್ಣನೆ, ಗ್ರಾಮೀಣ ಭಾಷೆಯ ಸೊಗಡು, ಕುತೂಹಲ ಕೆರಳಿಸುವ ಕಥೆಯ ತಿರುವುಗಳು, ಮಾನವ ಸಹಜ ಪ್ರೀತಿ, ಪ್ರಣಯ ಹಾಗೂ ವೈಚಾರಿಕ ವಿಚಾರಗಳನ್ನು ಇವರ ಬರಹಗಳಲ್ಲಿ ಕಾಣಬಹುದಾಗಿದೆ. ಕಾದಂಬರಿಗಳಲ್ಲಿ ...

READ MORE

Related Books