ಈಶ್ವರ ಅಲ್ಲಾ

Author : ಜಿ.ಕೆ. ಗೋವಿಂದರಾವ್

Pages 104

₹ 45.00
Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು
Phone: 08022161900

Synopsys

ಈಶ್ವರ ಅಲ್ಲಾ-ಎಂಬುದು ಪ್ರೊ. ಜಿ.ಕೆ. ಗೋವಿಂದರಾವ್ ಅವರ ಕಿರು ಕಾದಂಬರಿ. ಸಂಸ್ಕೃತಿ-ಪರಿಸರದ ಒತ್ತಡಗಳು, ವ್ಯಕ್ತಿತ್ವ ವೈಶಿಷ್ಟ್ಯಗಳು ವ್ಯಕ್ತಿಗಳ ಬದುಕನ್ನು ಹೇಗೆ ಅಸ್ತವ್ಯಸ್ತಗೊಳಿಸುತ್ತವೆ ಎಂಬುದಕ್ಕೆ ಈ ಕಾದಂಬರಿ ಕನ್ನಡಿ ಹಿಡಿಯುತ್ತದೆ. 

ಭಾರತದ ನೆಲದ ಧರ್ಮ ಮತ್ತು ರಾಷ್ಟ್ರೀಯತೆಯ ಸಮಾಜವ್ಯಾಪಿ ಬಿಕ್ಕಟ್ಟುಗಳ ಸ್ವರೂಪಗಳನ್ನು ತಿಳಿಸುತ್ತಲೇ ಅವು ವ್ಯಕ್ತಿಗಳ ವಿಕಾಸಕ್ಕೆ ಹೇಗೆ ಮಾರಕವಾಗಿವೆ ಎಂಬುದನ್ನೂ ತೋರಿದ್ದಾರೆ. ಮತ-ಮಾನವೀಯತೆ ಮಧ್ಯೆ ಬಹುದೊಡ್ಡ ಕಂದಕ ಇರುವುದನ್ನು ಗುರುತಿಸಿದ್ದಾರೆ. ಈಶ್ವರ ಅಲ್ಲಾ ಕೋಮುಸೌಹಾರ್ದ ಬದುಕಿನ ಸಂಕೇತವಾಗಿದೆ. ಆದರೆ, ಸಾಮಾಜಿಕವಾಗಿ  ಅವು ಸೃಷ್ಟಿಸುವ ಆವಾಂತರಗಳು ಇಡೀ ಮನುಕುಲ ನಾಚಿಕೆಪಡುವಂತಿವೆ. ಇಂತಹ ವಿಷಯ ವಸ್ತುವನ್ನು ಒಳಗೊಂಡ ಕಾದಂಬರಿಯು ಪ್ರಸ್ತುತ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಸ್ಪಷ್ಟವಾಗಿ ತೋರುತ್ತದೆ.  

About the Author

ಜಿ.ಕೆ. ಗೋವಿಂದರಾವ್
(27 April 1937 - 15 October 2021)

ಜಿ.ಕೆ. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ರಂಗಭೂಮಿ, ಸಿನಿಮಾರಂಗದ ಒಡನಾಟ ಇವರಿಗಿದೆ. ಸಮಕಾಲೀನ ಪ್ರಜಾಸತ್ತಾತ್ಮಕ ಆಂದೋಲನಗಳಲ್ಲಿ ಭಾಗವಹಿಸಿ ತಮ್ಮ ಜನಪರ ನಿಲುವನ್ನು ಪ್ರಕಟಿಸುವುದು ಅವರಿಗೆ ಸದಾ ಆದ್ಯತೆಯ ವಿಷಯ. ಪ್ರಕಟಿತ ಕೃತಿಗಳು- ಈಶ್ವರ ಅಲ್ಲಾ (ಕಿರುಕಾದಂಬರಿ), ಶೇಕ್ಸ್‌ಪಿಯರ್ ಎರಡು ನಾಟಕಗಳ ಅಧ್ಯಯನ, ಶೇಕ್ಸ್‌ಪಿಯರ್ ಸಂವಾದ (ವಿಮರ್ಶಾ ಲೇಖನಗಳು), ನಡೆ-ನುಡಿ, ನಾಗರಿಕತೆ ಮತ್ತು ಅರಾಜಕತೆ, ಬಿಂಬ ಪ್ರತಿಬಿಂಬ, ಕ್ರಿಯೆ ಪ್ರತಿಕ್ರಿಯೆ, ಮನು ವರ್ಸಸ್ ಅಂಬೇಡ್ಕರ್: ತಮ್ಮ ಆಯ್ಕೆ ಯಾವುದು? (ಸಂಕೀರ್ಣ ಬರಹಗಳ ಸಂಗ್ರಹಗಳು). ...

READ MORE

Related Books