ಮಹಾಭಾರತದಲ್ಲಿ ನಡೆದ 18 ದಿನಗಳ ಯುದ್ಧದ ಅವಧಿಯನ್ನೇ ಮೂಲವಾಗಿರಿಸಿಕೊಂಡು ಬರೆದ ಕಾದಂಬರಿ-ಆ ಹದಿನೆಂಟು ದಿನಗಳು. ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ರಚಿಸಿದ್ದು, ಭಗವದ್ಗೀತೆಯ ಪಠ್ಯ ಬೋಧನೆಯೇ ಕಾದಂಬರಿಯ ಜೀವಾಳವಾಗಿದೆ. ಯುದ್ಧ ಪ್ರಸಂಗಗಳು, ಸಂಬಂಧಿಕರನ್ನು ಕೊಲ್ಲಲ್ಲು ಅರ್ಜುನನ ನಿರಾಕರಣೆ, ಇದಕ್ಕೆ ವಿರುದ್ಧವಾಗಿ ಕೃಷ್ಣನ ಸಮಜಾಯಿಷಿ, ಯುದ್ಧದಲ್ಲಿ ಅನಿವಾರ್ಯವಾಗಿ ಬಳಸಲೇಬೇಕಾದ ರಕ್ಷಣಾತ್ಮಕ ತಂತ್ರಗಳು- ಪ್ರತಿತಂತ್ರಗಳು, ಇಲ್ಲಿ ನೀತಿ-ಅನೀತಿಯ ಪ್ರಶ್ನೆಯೇ ಇಲ್ಲ. ಏಕೆಂದರೆ, ಅದು ರಣರಂಗ. ಇಲ್ಲಿ ಎಲ್ಲವೂ ಧರ್ಮವೇ! ಸ್ವಲ್ಪ ಯಾಮಾರಿದರೂ ಮೃತ್ಯು ಗೆಲ್ಲುತ್ತದೆ. ಇಂತಹ ಭೀಕರ ಹಾಗೂ ವಾಸ್ತವದ ನಿತ್ಯ ಸತ್ಯಗಳನ್ನು ಬೋಧಿಸುವ ಮಹಾಭಾರತದ ಯುದ್ಧವು ನೀತಿ ಹಾಗೂ ಬೋಧಪ್ರಧಾನವಾಗಿದೆ. ಎಲ್ಲರಿಗೂ ತಿಳಿದಿರುವ ಮಹಾಭಾರತದ ಯುದ್ಧವನ್ನು ಮತ್ತೇ ಮತ್ತೆ ಕುತೂಹಲದೊಂದಿಗೆ ಓದಿಸಿಕೊಂಡು ಹೋಗುವುದೇ ಈ ಕಾದಂಬರಿಯ ಶೈಲಿಯ ಆಕರ್ಷಣೆ.
ಹಿರಿಯ ವಿದ್ವಾಂಸ ಮತ್ತು ಪ್ರವಚನಕಾರ ಆಗಿರುವ ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ ಕನಕನಹಳ್ಳಿ (ಈಗಿನ ಕನಕಪುರ)ಯವರು. 1933ರ ಅಕ್ಟೋಬರ್ 30ರಂದು ಜನಿಸಿದರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬದಲ್ಲಿ ಬೆಳೆದ ನಾರಾಯಣಚಾರ್ಯ ಅವರು ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಪಡೆದರು. ನಂತರ ಬಿ.ಎ. ಆನರ್ಸ್ ಮಾಡಿದ ಅವರು ಆಮೇಲೆ ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್ರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ...
READ MORE