ಬೆಳಕಿನ ಬೀದಿ

Author : ತ.ರಾ.ಸು. (ತ.ರಾ. ಸುಬ್ಬರಾವ್)

Pages 94

₹ 90.00




Year of Publication: 2003
Published by: ಸಾಹಿತ್ಯ ನಂದನ
Address: ನಂ, 9, 4ನೇ ‘ಇ’ ವಿಭಾಗ, 10 ‘ಎ’ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು- 560010

Synopsys

‘ಬೆಳಕಿನ ಬೀದಿ’ ಹಿರಿಯ ಲೇಖಕ ತ.ರಾ.ಸು ಅವರ ಸಾಮಾಜಿಕ ಕಾದಂಬರಿ. ತ.ರಾ.ಸು ಅವರ ಮಾರ್ಗದರ್ಶಿಯಲ್ಲಿ ಆರಂಭವಾಗಿ ಭಾಗ್ಯಶಿಲ್ಪಿಯಲ್ಲಿ ಮುಂದುವರಿದ ಕಾದಂಬರಿಯ, ಮೂರನೆಯ ಮತ್ತು ಮುಕ್ತಾಯದ ಭಾಗವಾಗಿದೆ ಈ `ಬೆಳಕಿನ ಬೀದಿ'.

ಮೂರು ಭಾಗಗಳ ವಿಸ್ತಾರಕ್ಕೆ ಹಬ್ಬಿದ ಈ ಕಾದಂಬರಿಯಲ್ಲಿ ಇಂದಿನ ಗ್ರಾಮಗಳು, ಅವುಗಳ ಸ್ಥಿತಿ, ಆ ಗ್ರಾಮಗಳನ್ನು, ಗ್ರಾಮ ವಾಸಿಗಳನ್ನು ಬಳಲಿಸುತ್ತಿರುವ ಬಗೆಬಗೆಯ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ನೋಡುವ ಆದರ್ಶವಾದ, ಈ ಮಾರ್ಗದಲ್ಲಿ ಎದುರಿಸಬೇಕಾದ ಸಮಸ್ಯೆಗಳು, ಅನುಭವಿಸಬೇಕಾದ ಸಂಕಷ್ಟಗಳು, ವೈಯಕ್ತಿಕ ಜೀವನದ ನೋವು-ನಲಿವುಗಳು- ಇವುಗಳನ್ನು ಈ ಕಾದಂಬರಿಯ ನಾಯಕ ಶ್ರೀಕಂಠನ ಜೀವನ ಬೆಳೆದ ರೀತಿಯಲ್ಲಿ ಚಿತ್ರಿಸಿದ್ದಾರೆ.

About the Author

ತ.ರಾ.ಸು. (ತ.ರಾ. ಸುಬ್ಬರಾವ್)
(12 June 1906 - 10 April 1984)

ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...

READ MORE

Related Books