ಹಿಮಗಿರಿಯ ನವಿಲು

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 120

₹ 90.00




Year of Publication: 1982
Published by: ಸುಧಾ ಎಂಟರ್ ಪ್ರೈಸಸ್

Synopsys

ಕಾದಂಬರಿಕಾರ್ತಿ ಸಾಯಿಸುತೆ ಸಾಮಾಜಿಕ ಕಾದಂಬರಿ ‘ಹಿಮಗಿರಿಯ ನವಿಲು’. ಮನುಷ್ಯನ ಆಯಸ್ಸು ಎಷ್ಟು? ಅದರಲ್ಲಿ ಬದುಕಲು ಯೋಗ್ಯವಾಗಿರುವ ಕಾಲವೆಷ್ಟು? ಈ ಜಗತ್ತು ಎಷ್ಟು ವಿಶಾಲ, ಎಷ್ಟೊಂದು ವೈವಿಧ್ಯಮಯ; ಸಂಸ್ಕೃತಿ, ಅದ್ಭುತಗಳು, ವಿಸ್ಮಯಗಳೆಷ್ಟು? ಇಷ್ಟನ್ನೆಲ್ಲ ನೋಡಲು, ಅಭ್ಯಸಿಸಲು ತಿಳಿಯಲು ಎಷ್ಟು ಕಾಲ ಬೇಕು? ಎಂದು ಪ್ರಶ್ನಿಸುವ ಲಾವಣ್ಯ ಯಾರು? ಅವಳು ಬಂದಿದ್ದು ಎಲ್ಲಿಂದ? ಹೋಗಿದ್ದು ಎಲ್ಲಿಗೆ? ಅವಳು ಬೆಳೆಸಿಕೊಂಡ ಮಾನವೀಯ ಸಂಬಂಧಕ್ಕೆ ಅರ್ಥವೇನು? ಹಿಮಗಿರಿಯ 'ಗಿರಿನವಿಲು' ನಿಗೂಢವಾಗಿ ಜಗದೀಶ್ ಬದುಕಿನಲ್ಲಿ ಉಳಿದು ಹೋದಳು. ಏಕೆಂದರೆ ಬದುಕಿನ ರೋಮಾಂಚನ ಉಳಿಯುವುದು ಪ್ರಶ್ನೆಗಳಲ್ಲಿಯೇ ವಿನಃ ಉತ್ತರ ಪಡೆಯುವಲ್ಲಿ ಅಲ್ಲ. ಹಿಮಗಿರಿಯ ಮೇಲೆ ಕುಳಿತ ಚೆಂದದ ನವಿಲು ಬದುಕಿಗೊಂದು ಅರ್ಥ ಬರೆದುಹೋಗಿದ್ದಾಳೆ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books