ಮಧುರಾ (ಕಾದಂಬರಿ)

Author : ಸುನೀಲ್ ಸೀಕೆ

Pages 106

₹ 127.00
Year of Publication: 2020
Published by: ಬ್ಲೂ ರೋಸ್ ಪಬ್ಲಿಷರ್ಸ್
Address: ಆನ್‌ಲೈನ್ ಪಬ್ಲೀಷಿಂಗ್ ಪ್ಲಾಟ್‌ಫಾರ್ಮ್, 4222,1,ಅನ್ಸಾರಿ ರಸ್ತೆ, ದರ್ಯಗಂಜ್,ಹೊಸ ದೆಹಲಿ, ದೆಹಲಿ-110002
Phone: 9311521003

Synopsys

ಲೇಖಕ ಸುನೀಲ್ ಸೀಕೆ ಅವರ ಕಾದಂಬರಿ-ಮಧುರಾ. ಚಿಕ್ಕಪ್ಪ ಭುಜಂಗರಾಯರೊಂದಿಗೆ ನ್ಯೂಯಾರ್ಕ್‌ನಲ್ಲಿ ನೆಲೆಸುವ ಮಧುರಾಳಿಗೆ, ಆತನ ಗೆಳೆಯನ ಮಗ ನಿಶಾಂತ್‌ನೊಂದಿಗೆ ಮದುವೆ ನಿಶ್ಚಯವಾಗಿರುತ್ತದೆ. ಮಧುರಾಳ ತಂದೆ ರಾಮಚಂದ್ರರಾಯನಿಗೆ ಎರಡನೇ ಮದುವೆ. ಆದ್ದರಿಂದ, ತಂದೆಯೆಡೆಗೆ ದ್ವೇಷ. ಚಿಕ್ಕಪ್ಪನ ಬಲವಂತಕ್ಕೆ ಮದುವೆ ಆಮಂತ್ರಣ ನೀಡಲು ಬೆಂಗಳೂರಿಗೆ ನಿಶಾಂತ್ ನೊಂದಿಗೆ ಬರುವ ಮಧುರಾ, ತಂದೆಯನ್ನು ಕಾಣಲು ಮಡಿಕೇರಿಗೂ ಬರುತ್ತಾಳೆ. ತಂದೆಯ ಎಸ್ಟೇಟ್ ನೋಡಿಕೊಳ್ಳುವ ಆರ್ಯನಲ್ಲಿ ಮನ ಸೋಲುತ್ತಾಳೆ. ಮಧುರಾಳ ಮುಂದಿನ ನಡೆಯು ಕಾದಂಬರಿಯ ಮೂಲ ವಸ್ತು. ನಿರೂಪಣಾ ಶೈಲಿಯು ಆಕರ್ಷಕವಾಗಿದೆ. 

 

About the Author

ಸುನೀಲ್ ಸೀಕೆ
(03 December 1991)

ಲೇಖಕ ಸುನೀಲ್ ಸೀಕೆ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಹೋಬಳಿಯ ಸೀಕೆ-ಮುದುಗುಣಿ ಗ್ರಾಮದವರು. ತಂದೆ ದಿ.ಜಾನ್ ಡಿಸೋಜ ತಾಯಿ ಫಿಲೋಮಿನಾ ಡಿಸೋಜ. ಹತ್ತನೇ ತರಗತಿವರೆಗೆ ಓದು. ಕೃಷಿಕರು.  ಕೃತಿಗಳು: ಮಧುರಾ (ಕಾದಂಬರಿ-2020), ಕಾರ್ಮೋಡ ಸರಿದಾಗ (ಕಾದಂಬರಿ-2021)  ...

READ MORE

Related Books