ಚೆಂಗೂಲಿ ಚೆಲುವ

Author : ನಾ. ಕಸ್ತೂರಿ

Pages 152

₹ 80.00




Year of Publication: 2012
Published by: ಸಪ್ನ ಬುಕ್ ಹೌಸ್
Address: ಬೆಂಗಳೂರು

Synopsys

ಲೇಖಕ ನಾ. ಕಸ್ತೂರಿ ಅವರ ಕಿರು ಕಾದಂಬರಿ ‘ಚೆಂಗೂಲಿ ಚೆಲುವ’. ಇದರಲ್ಲಿ ಒಬ್ಬ ಸಾಮಾನ್ಯ ಗಾರೆ‌ ಕೆಲಸದ ಕೂಲಿಯೊಬ್ಬ ತನ್ನ ಜೀವನದಲ್ಲಿ ಕಂಡುಂಡ ವಿವಿಧ ಅನುಭವಗಳು ಮತ್ತು ಅವುಗಳಿಂದ‌ ಪಡೆದ ಸಾಮಾನ್ಯ ವಿವೇಕ ಹಾಗೂ ಜೀವನ ತತ್ವಗಳನ್ನು ಸರಳವಾದ ಆಡುಮಾತುಗಳಲ್ಲೇ ಹೇಳುತ್ತಾನೆ. ಕಾದಂಬರಿಯ ರೂಪ ಪಡೆದ ಈ ಕಥೆ ಲೇಖಕರ ಮನೆಯ ಬಳಿ ಒಂದು ಷೆಡ್ಡಿನಲ್ಲಿ ವಾಸಿಸುತ್ತಿದ್ದ ರಾಮಯ್ಯನೆಂಬ ಕೂಲಿ ಕೆಲಸದವನ ನಿಜ ಜೀವನದ ವ್ಯಥೆಯಾಗಿದೆ. "ಸಾಕ್ಷಾತ್ ಕೂಲಿಯವನು ಒಬ್ಬ ಹೇಗೆ ಬದುಕಿ ಬಾಳುತ್ತಿದ್ದಾನೆ ಎಂದು ಅವನ ಬಾಯಿಂದಲೇ ಹೇಳಿಸುವ ಒಂದೂ ಪುಸ್ತಕ ಈವರೆಗೆ ಕನ್ನಡದಲ್ಲಿ ಬಂದಿಲ್ಲ. ಏಕೆ, ಭಾರತೇಯ ಭಾಷೆಗಳಲ್ಲೂ ಇಲ್ಲವೆಂದೇ ತೋರುತ್ತದೆ." ಎನ್ನುತ್ತಾರೆ ನಾ ಕಸ್ತೂರಿಯವರು. ಇದು ಗೋಳಿನ ಕಥನವಲ್ಲ. ಅವಿದ್ಯಾವಂತ ನಾದರೂ ಲೋಕಾನುಭವ ಪಡೆದ ಚೆಲುವ ತನ್ನ ನಡೆ-ನುಡಿಗಳನ್ನು ವಿವೇಕಯುಕ್ತನಾಗಿ ವಿಮರ್ಶಿಸಿಕೊಳ್ಳುವಂತಹ ಯೋಗ್ಯತೆ ಉಳ್ಳವನು.

About the Author

ನಾ. ಕಸ್ತೂರಿ
(25 December 1897 - 14 August 1987)

ಕೇರಳದ ತ್ರಿಪುನಿತ್ತೂರ್ ಗ್ರಾಮದಲ್ಲಿ ಜನಿಸಿದ ನಾ. ಕಸ್ತೂರಿ ಅವರು ಕೇರಳದ ಎರ್ನಾಕುಲಂ ಮಹಾರಾಜಾ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ತಂದೆ ನಾರಾಯಣ. ಇತಿಹಾಸದಲ್ಲಿ ಸ್ನಾತಕೋತ್ತರ (ಎಂ.ಎ.) ಪಡೆದ ನಂತರ ಬಿ.ಎಲ್. ಪದವಿ ಪಡೆದರು. ವಕೀಲಿ ವೃತ್ತಿಗೆ ಸೇರುವ ಬದಲು ಶಿಕ್ಷಕ ವೃತ್ತಿಯತ್ತ ಹೊರಳಿದರು. ಮೈಸೂರಿಗೆ ಬಂದ ಅವರು ಅಲ್ಲಿನ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ನಾಟಕ, ಪ್ರಹಸನ, ಕಥೆ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಗಗ್ಗಯ್ಯನ ಗಡಿಬಿಡಿ, ಕಾಡಾನೆ, ವರಪರೀಕ್ಷೆ, ರಾಮಕೃಷ್ಣಯ್ಯನ ದರ್ಬಾರು, ಹೋಳು-ಬಾಳು, ಬ್ಯಾಂಕಿನ ದಿವಾಳಿ ಮುಂತಾದುವು ಅವರ ನಾಟಕಗಳು. ಗಾಳಿಗೋಪುರ, ಶಂಖವಾದ್ಯ, ರಂಗನಾಯಕಿ, ಅಲ್ಲೋಲ, ಕಲ್ಲೋಲ, ಉಪಾಯ ವೇದಾಂತ ಮುಂತಾದ ಹಾಸ್ಯ ಸಂಕಲನಗಳನ್ನು ರಚಿಸಿರುವುದಲ್ಲಿ ಹಾಸ್ಯ ...

READ MORE

Related Books