ನಿರ್ಗಮನ

Author : ಜೋಗಿ (ಗಿರೀಶ್ ರಾವ್ ಹತ್ವಾರ್)

Pages 152

₹ 170.00




Year of Publication: 2024
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ನಿರ್ಗಮನ’ ಜೋಗಿ ಅವರ ಕಾದಂಬರಿಯಾಗಿದೆ. ಈ ಕೃತಿಯ ಕುರಿತು ಲೇಖಕ ಜೋಗಿ ಅವರು ಹೀಗೆ ಹೇಳುತ್ತಾರೆ; ಬೆಂಗಳೂರಿನ ಕತ್ತರಿಗುಪ್ಪೆ ಮುಖ್ಯರಸ್ತೆಯನ್ನು ದಾಟಲು ಹಿರಿಯರೊಬ್ಬರು ಹೆಣಗಾಡುತ್ತ ಸುಮಾರು ಅರ್ಧಗಂಟೆಯಿಂದ ನಿಂತಿದ್ದರು. ತಲೆ ಮೇಲೆ ಬಿಸಿಲ ಕೊಡೆ. ಅವರಿಗೆ ದಾರಿಯೇ ಬಿಡದಂತೆ ಒಂದರ ಹಿಂದೊಂದು ವಾಹನಗಳು ಭರೋ ಭರ್ರೋ ಎಂದು ಓಡಾಡುತ್ತಲೇ ಇದ್ದವು. ತುಂಬ ಹೊತ್ತಾದ ನಂತರ ಯಾರೋ ಅವಸರ ಇಲ್ಲದವರು ಬಂದು ಅವರನ್ನು ರಸ್ತೆ ದಾಟಿಸಿದರು. ಆ ವಾಹನ ಪ್ರವಾಹದ ನಡುವೆ ಅವರನ್ನು ಆಚೆ ದಡ ಸೇರಿಸಲಿಕ್ಕೆ ಕೈ ಹಿಡಿದವರಿಗೂ ಐದಾರು ನಿಮಿಷ ಬೇಕಾಯಿತು. ಅಪರಿಚಿತ ವಾಹನ ಢಿಕ್ಕಿ. ವೃದ್ಧ ಸಾವು ಎಂಬ ಸುದ್ದಿ ದಿನವೂ ಪತ್ರಿಕೆಯಲ್ಲಿ ಬರುತ್ತಲೇ ಇರುತ್ತದೆ. ಕಳೆದ ವಾರ ಬೆಂಗಳೂರಿನ ಪೀಣ್ಯದ ಹತ್ತಿರ ಕೋಟ್ಯಂತರ ರುಪಾಯಿ ಆಸ್ತಿಯ ಒಡೆಯರೊಬ್ಬರು ರಸ್ತೆ ದಾಟುತ್ತಿದ್ದಾಗ ಪ್ರಾಣ ಕಳಕೊಂಡರು. ಅದೇ ದಿನ ಮತ್ತೂಬ್ಬರು ಪಿಂಚಣಿದಾರರು ಹಾಗೆ ರಸ್ತೆ ದಾಟುತ್ತಿದ್ದಾಗ ಮರಣಿಸಿದರು. ವೃದ್ಧರ ಮರಣಕ್ಕೆ ಮರುಗುವವರಿಲ್ಲ. ಯಾರಾದರೂ ಸತ್ತರು ಅಂದಾಕ್ಷಣ, ಏಜೆಸ್ಟು ಅನ್ನುವ ಪ್ರಶ್ನೆ ತೂರಿ ಬರುತ್ತದೆ. ಎಪ್ಪತ್ತು ಅಂದಾಕ್ಷಣ, ಹಾಗಿದ್ದರೆ ಪರವಾಗಿಲ್ಲ ಎಂಬ ಪ್ರತಿಕ್ರಿಯೆ ಎದುರಾಗುತ್ತದೆ. ಅವರು ಈ ದೇಶಕ್ಕೆ ಪ್ರೊಡಕ್ಟಿವ್‌ ಅಲ್ಲ. ಅವರಿಂದ ಆರ್ಥಿಕ ವ್ಯವಸ್ಥೆಗೆ ಲಾಭವಿಲ್ಲ. ಅವರೇನಿದ್ದರೂ ಖರ್ಚಿನ ಬಾಬತ್ತು. ಅವರು ಸುಖಕ್ಕೆ ಕೊಡಲಿ ಏಟು. ಹಾಗಂತ ಯಾರೂ ಹೇಳುವುದಿಲ್ಲ. ಅಂಥದ್ದೊಂದು ಭಾವ ಅಲ್ಲಲ್ಲೇ, ನೇರಳೆ ಮರದಡಿಯ ನೆರಳಿನಂತೆ, ಬಿದ್ದುಕೊಂಡಿರುವುದನ್ನು ನಾವು ಕಾಣಬಹುದು. ವೃದ್ಧರಿಂದ ಏನೇನು ಕೆಲಸ ಮಾಡಿಸಬಹುದೋ ಅದನ್ನೆಲ್ಲ ಮಾಡಿಸಲಾಗುತ್ತದೆ. ಮಕ್ಕಳನ್ನು ಸ್ಕೂಲಿನಿಂದ ಕರೆತರುವುದು, ಬೆಳ್ಳಬೆಳಗ್ಗೆ ಮಕ್ಕಳನ್ನು ಸ್ಕೂಲು ವ್ಯಾನು ಹತ್ತಿಸಲಿಕ್ಕೆ ಕರೆದುಕೊಂಡು ಹೋಗುವುದು, ಕಸದ ವ್ಯಾನಿಗೆ ಕಸ ಹಾಕುವುದು, ಗೇಟಿನ ಮುಂದೆ ಯಾರೂ ಕಾರು ನಿಲ್ಲಿಸದಂತೆ ಕಾಯುವುದು, ಕರೆಂಟು ಬಿಲ್ಲು, ವಾಟರ್‌ ಬಿಲ್ಲು ಕಟ್ಟುವುದು, ಮನೆ ಮುಂದೆ ಯಾರಾದರೂ ಗಲಾಟೆ ಮಾಡುತ್ತಿದ್ದರೆ ಅವರನ್ನು ಬೈದು ಓಡಿಸುವುದು- ಹೀಗೆ ಅವರಿಂದ ಅನೇಕಾನೇಕ ಕೆಲಸಗಳನ್ನು ಮಾಡಿಸಲಾಗುತ್ತದೆ ಎನ್ನುತ್ತಾರೆ. ಹೀಗೆ ‘ನಿರ್ಗಮನ’ ಕಾದಂಬರಿ ನಾನೇಕೆ ಬರೆದ ಎಂದು ವಿವರಿಸಿದ್ದಾರೆ.

About the Author

ಜೋಗಿ (ಗಿರೀಶ್ ರಾವ್ ಹತ್ವಾರ್)
(16 November 1965)

ಜೋಗಿ, ಜಾನಕಿ, ಎಚ್‌. ಗಿರೀಶ್‌ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್‌ 16ರಂದು. ಮೂಲತಃ ಸೂರತ್ಕಲ್‌ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ವೃತ್ತಿ ಜೊತೆ ಜೊತೆಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ಕೃತಿಗಳನ್ನು ...

READ MORE

Related Books