ಪುನರ್ಮಿಲನ

Author : ಎ.ಪಿ. ಮಾಲತಿ

Pages 142

₹ 6.00




Year of Publication: 1981
Published by: ಗೀತಾ ಬುಕ್ ಹೌಸ್
Address: ಮೈಸೂರು- 570001

Synopsys

‘ಪುನರ್ಮಿಲನ’ ಎ.ಪಿ. ಮಾಲತಿ ಅವರ ಕಾದಂಬರಿ. ಸಮಾಜ ಗಂಡು ಮತ್ತು ಹೆಣ್ಣಿಗೆ ಸಮಾನ ಸ್ವಾತಂತ್ರ್ಯ, ಸಮಾನ ಬೆಲೆಯನ್ನು ಕೊಟ್ಟದ್ದರೂ ಎಷ್ಟೋ ವಿಚಾರಗಳಲ್ಲಿ ಹೆಣ್ಣು ಈಗಲೂ ಗಂಡಿಗಿಂತ ಎಷ್ಟೋ ಪಾಲು ನಿಕೃಷ್ಟರು. ವಿವಾಹದ ಮೊದಲು ಅವಳು ಯಾವ ವಿಧದಲ್ಲಿಯೂ ಸ್ವತಂತ್ರಳಲ್ಲ, ಸ್ವಚ್ಛಂಧತೆ ಅವಳಿಗೆ ಸಲ್ಲ, ಅರಿತು ಅಥವಾ ಅರಿಯದೆ ಆಕಸ್ಮಿತವಾಗಿ ಅವಳ ಮೇಲೆ ಅನ್ಯಾಯವಾಗಿ ಹೋದರೆ ಅವನ್ನು ಪ್ರತಿಭಟಿಸುವ ಹಕ್ಕು ಅವಳಿಗಿಲ್ಲ, ಸಮಾಜದ ಹೆದರಿಕೆ, ನಾಚಿಕೆ, ಸಂಕೋಚದಿಂದ ನೋವನ್ನು ತನ್ನೊಳಗೆ ಅಡುವಿಟ್ಟುಕೊಂಡು ಜೀವಂತವಾಗಿ ವಹಿಸಿ ಎಲ್ಲರಿಂದಲೂ ದೂರ ಆಗುತ್ತಾಳೆ. ತನ್ನ ತಪ್ಪನ್ನು ಬಿಚ್ಚುಮನಸ್ಸಿಂದ ಹೇಳಿಕೊಳ್ಳುವ ಎದೆಗಾರಿಕೆ ಹೆಣ್ಣಿಗಿರುವದು ಬಹಳ ಅಪರೂಪ ನೈತಿಕವಾಗಿ ಗಂಡಸು ತಪ್ಪು ಮಾಡಿದರೂ ಅದು ಅವನ ಮತ್ತು ಸಮಾಜದ ದೃಷ್ಟಿಯಲ್ಲಿ ತಪ್ಪಲ್ಲ. ಅದೇ ಹೆಣ್ಣು ಮಾಡುವ ತಪ್ಪು ಅಕ್ಷಮ್ಯ ಹಿರಿಯರು ಹಾಕಿದ ಇಂತಹ ಸೀಮೇರೇಖೆಯಿಂದಲೇ ಅನೇಕ ಹೆಣ್ಣುಗಳ ಪಾಲಿಗೆ ಬಾಳು ಕಣ್ಣೀರು, ನಿಜವಾದ ಮಾನವೀಯತೆ, ಕನಿಕರ, ಅನುಕಂಪದಿಂದ ಹೆಣ್ಣನ್ನು ಅರ್ಥಮಾಡಿಕೊಳ್ಳದ ಗಂಡಸು ಸ್ಪಾರ್ಥಿಯೂ ಆಗಿದ್ದರೆ ಅವಳು ಮಾಡಿದ ತಪ್ಪಿಗೆ ಅವನಲ್ಲಿ ಕ್ಷಮೆಯಿಲ್ಲ. ಆದರೆ ನಿಷ್ಕಳಂಕ ಮನಸ್ಸಿನ ಪ್ರೀತಿ ಎದುರು ತಪ್ಪು ಕ್ಷಮಾರ್ಹವಾಗಲಾರದೇ. ವಿಶ್ವವಿಖ್ಯಾತ ಇಂಗ್ಲಿಷ್ ಕಾದಂಬರಿಕಾರ ಥಾಮಸ್ ಹಾರ್ಡಿಯ ಟೆಸ್ ಕಾದಂಬರಿಯ ಸ್ಫೂರ್ತಿಯಿಂದ ಬರೆದ ಕಾದಂಬರಿ ಇದು ಎಂದು ಲೇಖಕಿ ಹೇಳಿಕೊಂಡಿದ್ದಾರೆ.

About the Author

ಎ.ಪಿ. ಮಾಲತಿ
(06 May 1944)

ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ  ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್‌, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...

READ MORE

Related Books