ಅಯಸ್ಕಾಂತ

Author : ಬೇಲೂರು ರಾಮಮೂರ್ತಿ

Pages 228

₹ 40.00




Year of Publication: 1993
Published by: ತಾಳಂಕಿ ಪ್ರಕಾಶನ
Address: ಜೆ.ಪಿ ನಗರ ಅಂಚೆ, ಬೆಂಗಳೂರು

Synopsys

‘ಅಯಸ್ಕಾಂತ’ ಬೇಲೂರು ರಾಮಮೂರ್ತಿ ಅವರ ಕಾದಂಬರಿಯಾಗಿದೆ. ಸದಾನಂದ ಮಧ್ಯಮ ವರ್ಗದ ಹುಡುಗ. ಸ್ನೇಹಿತ ರಮೇಶನ ಮದುವೆಗೆಂದು ಹೋದವನು ಮದುವೆಯಲ್ಲಿ ವಧುವಿಗೆ ವಜ್ರದ ಮೂಗುತಿ ಹಾಕಲಿಲ್ಲವೆಂಬ ಕಾರಣಕ್ಕೆ ಮದುವೆ ರದ್ದಾದಾಗ ಸದಾನಂದ ಮುಂದೆ ಬಂದು ಸಂಗೀತಳನ್ನು ವರಿಸುತ್ತಾನೆ. ಎಲ್ಲರಿಗೂ ಮೆಚ್ಚುಗೆಯಾಗಿದ್ದ ಸದಾನಂದನಿಗೆ ಮದುವೆಯಾಗಿ ಬಹಳ ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಸಮಾಜಮುಖೀ ಕೆಲಸಗಳಲ್ಲಿ ತೊಡಗುತ್ತಿದ್ದ ಸದಾನಂದ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತನ್ನಿಂದ ಗಂಡ ದೂರವಾಗುತ್ತಿರಬಹುದು ಎನ್ನುವ ಶಂಕೆ ಸಂಗೀತಳನ್ನು ಕಾಡುತ್ತದೆ. ಗಂಡನ ಕಾಲೇಜಿನ ಜೀವನದ ಗೆಳತಿ ಪಂಕಜಳ ಮೇಲೆ ಸಂಗೀತಳಿಗೆ ಅನುಮಾನ ಬಂದು ಬೇಸರವಾಯಿತು. ಸದಾನಂದ ಹೇಳುವ ಯಾವ ಮಾತೂ ಅವಳು ಕೇಳುವ ಸ್ಥಿತಿಯಲ್ಲಿರಲಿಲ್ಲ. ಜೀವನದಲ್ಲಿ ಹತ್ತು ಹಲವಾರು ಏರುಪೇರುಗಳನ್ನು ಕಂಡ ಸದಾನಂದನ ಬದುಕು ಸರಿಹೋಯಿತೇ. ಸಂಗೀತ ಅವನನ್ನು ಅರ್ಥ ಮಾಡಿಕೊಂಡಳೇ. ಗಂಡ ಹೆಂಡಿರಲ್ಲಿ ಮತ್ತೆ ಮೊದಲಿನ ಅಯಸ್ಕಾಂತ ಗುಣಗಳೇ ಇದ್ದವೇ ಎನ್ನುವುದು ಅಯಸ್ಕಾಂತ ಕಾದಂಬರಿಯಲ್ಲಿರುವ ತಿರುಳು.

About the Author

ಬೇಲೂರು ರಾಮಮೂರ್ತಿ
(30 June 1950)

ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು.  ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು.  ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.  ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...

READ MORE

Related Books