ತುಂಬೆಹೂವು ಹಾಗು ಅಂತರ್ಮುಖಿ

Author : ವೇದಾಮಂಜುನಾಥನ್ ಬೆಳಗೆರೆ

Pages 128

₹ 90.00
Year of Publication: 2018
Published by: ಕೆ.ಕೆ.ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್

Synopsys

ಕಾದಂಬರಿಕಾರ್ತಿ ವೇದಾಮಂಜುನಾಥನ್ ಬೆಳಗೆರೆ ಅವರ 30 ನೇ ಕಿರುಕಾದಂಬರಿ ತುಂಬೆಹೂವು. ಹಂಸರಾಗ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ತುಂಬೆಹೂವು ಗಾತ್ರದಲ್ಲಿ ತುಂಬಾ ಚಿಕ್ಕದಾದ ಏಕದಳ ಹೂವು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಹಾಗೆ ಈ ಹೂವು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಜೊತೆಗೆ ಇದು ಶಿವನಿಗೆ ಪ್ರಿಯವಾದ ಹೂವು.

ಕಾದಂಬರಿಯ ನಾಯಕಿ ಅಪರ್ಣ ಚಿಕ್ಕ ವಯಸ್ಸಿಗೇ ತಂದೆಯನ್ನು ಕಳೆದುಕೊಂಡು ಇಬ್ಬರು ತಂಗಿಯರು ಹಾಗು ತಾಯಿಯ ಜವಾಬ್ದಾರಿಯನ್ನು ಹೊತ್ತವಳು. ಉದ್ಯೋಗಕ್ಕೆ ಸೇರಿ, ಮನೆಯನ್ನು ನಿಭಾಯಿಸಲು ಹೆಣಗಾಡುವ ಇವಳು ಎತ್ತರ ಹಾಗು ಗಾತ್ರದಲ್ಲಿ ಬೆಳವಣಿಗೆ ಕಡಿಮೆಯೇ. ಸಾಧಾರಣ ಮೈಕಟ್ಟು ಇದ್ದರೂ, ಕೆಲಸದಲ್ಲಿ ಶ್ರದ್ಧೆ, ನಿಷ್ಠೆ. 60 ರ ವಯಸ್ಸಿನ ತನ್ನ ಬಾಸ್ ಈಶ್ವರ ಪ್ರಸಾದ್ ರವರ ಮೆಚ್ಚುಗೆಗೆ ಪಾತ್ರಳಾಗಿರುತ್ತಾಳೆ. ಒಂದೊಮ್ಮೆ ಆಫೀಸಿನ ಹಣ ಕಳೆದುಕೊಂಡು ಪರದಾಡುವ ಪರಿಸ್ಥಿತಿ ನಿರ್ಮಾಣವಾದಾಗ, ಆ ಹಣ ಸಿಕ್ಕ ಯುವಕ ಸುರೇಶನ ಪರಿಚಯವಾಗುತ್ತದೆ. ಈಗಿನ ಕಾಲದಲ್ಲಿ ಹಣವನ್ನು ಹಿಂದಿರುಗಿಸಿದ ಮಧ್ಯಮ ವರ್ಗದ ಸುರೇಶನ ಪ್ರಾಮಾಣಿಕತೆಯನ್ನು ಮೆಚ್ಚಿ ತನ್ನ ಬಾಸ್ ನಿಂದ ಬ್ಯುಸಿನೆಸ್ ಕೊಡಿಸುವ ಅಪರ್ಣಾ. ನಂತರದ ದಿನಗಳಲ್ಲಿ ಸುರೇಶನ ಪರಿಚಯ ಸ್ನೇಹವಾಗಿ, ಸ್ನೇಹ ಎಂಬುದು ಪ್ರೇಮಕ್ಕೆ ತಿರುಗುತ್ತದೆ. ಆದರೆ ತಂಗಿಯರ ಜವಾಬ್ದಾರಿಯನ್ನು ಹೊತ್ತ ಅಪರ್ಣಾ, ಅವರನ್ನು ಒಂದು ಗುರಿ ಮುಟ್ಟಿಸುವ ತನಕ ಮದುವೆ ನಿರಾಕರಿಸುತ್ತಾಳೆ. ಏತನ್ಮಧ್ಯೆ ಸುಮಾರು ವರ್ಷಗಳ ಹಿಂದೆ ಈಶ್ವರಪ್ರಸಾದ್, ಅಪರ್ಣಾಳ ತಾಯಿ ವಿಮಲಮ್ಮನನ್ನು ಮದುವೆ ಆಗಬೇಕಾದ ಸಂದರ್ಭ ಬಂದಿತ್ತಾದರೂ, ಆ ಕಾಲಕ್ಕೆ ಆತ ಬಡವನೆಂಬ ಕಾರಣಕ್ಕೆ ಮದುವೆ ನಿಂತುಹೋದ ವಿಷಯ ಮಕ್ಕಳಿಗೆ ಈಗ ತಿಳಿಯುತ್ತದೆ. ಈಶ್ವರ ಪ್ರಸಾದ್ ರವರಿಗೆ ಮದುವೆಯಾಗಿ ಪ್ರಾಯಕ್ಕೆ ಬಂದ ಮಗಳಿರುತ್ತಾಳೆ. ಆದರೆ ಮಡದಿ ತೀರಿಹೋಗಿ ವಿದುರನಾಗಿರುತ್ತಾರೆ. ತಾಯಿಯಿಲ್ಲದ ಹುಡುಗಿ, ಹಣದ ವ್ಯಾಮೋಹದಲ್ಲಿ ಕೆಟ್ಟ ಸಹವಾಸಕ್ಕೆ ಬೀಳುತ್ತಾಳೆ. ಮದುವೆಗೆ ಬಂದ ಹೆಣ್ಣುಮಕ್ಕಳಿಗೆ ವಿಮಲಮ್ಮ ಮದುವೆ ಮಾಡಿದರೇ ಅಥವಾ ತಮ್ಮ ತಾಯಿಗೂ ಈಶ್ವರ ಪ್ರಸಾದ್ ರವರಿಗೆ ಮಕ್ಕಳು ಮದುವೆ ಮಾಡಿಸಿದರೇ ಎಂಬ ಕುತೂಹಲಕ್ಕಾಗಿ ಕಾದಂಬರಿಯನ್ನು ಓದಲೇಬೇಕು.

ಮತ್ತೊಂದು ಕಿರುಕಾದಂಬರಿ ಅಂತರ್ಮುಖಿ. ಇದೂ ಸಹ ಹಂಸರಾಗ ಮಾಸಪತ್ರಿಕೆಯಲ್ಲಿ ಪ್ರಕಟಣೆಗೊಂಡಿತ್ತು. ಇದು ಒಂದು ವಿಭಿನ್ನ ಕಾದಂಬರಿ. ದೆವ್ವ ಭೂತಗಳ ಬಗ್ಗೆ ಇದೆ. ನಂಬಿಕೆ ಎಂಬುದು ಓದುಗರಿಗೇ ಬಿಟ್ಟಿದ್ದು. ದೆವ್ವ ಹಿಡಿದ ತನ್ನ ಪ್ರಿಯತಮೆಯನ್ನು ಸರಿಪಡಿಸಲು ಹರಸಾಹಸ ಪಡುವ ಯುವಕ. ಕೊನೆಗೂ ಅವಳಿಗೆ ಹಿಡಿದಿದ್ದ ಆ ಭೂತವಾದರೂ ಎಂಥದ್ದು...ಎಲ್ಲಕ್ಕೂ ತೆರೆ ಅಂತ್ಯದಲ್ಲಿದೆ. ಒಂದು ಕುತೂಹಲಭರಿತವಾದ ಕಾದಂಬರಿ ಇದಾಗಿದೆ.

About the Author

ವೇದಾಮಂಜುನಾಥನ್ ಬೆಳಗೆರೆ

ಬೆಳಗೆರೆಯಂತಹ ಸಾಹಿತ್ಯ ವಾತಾವರಣದಿಂದ ಬಂದ ವೇದಾರವರು, ಬಾಲ್ಯದಿಂದಲೇ ಬರವಣಿಗೆಯನ್ನು ರೂಢಿಸಿಕೊಂಡವರು. ಪದವಿ ವ್ಯಾಸಂಗದಲ್ಲಿ ಕನ್ನಡ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿರುತ್ತಾರೆ. ಇದಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನವರು ನಡೆಸುವ ಕನ್ನಡ ಜಾಣ ಹಾಗು ರತ್ನ ಪರೀಕ್ಷೆಗಳಲ್ಲಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿರುತ್ತಾರೆ.  ಕತೆ, ಕವನ ಕಾದಂಬರಿ, ಲೇಖನ, ಹಾಸ್ಯ ಬರೆಯುವ ವೇದಾರವರು ಇದುವರೆಗೂ 30 ಕೃತಿಗಳನ್ನು ರಚಿಸಿದ್ದಾರೆ. ಇವರ ಬರವಣಿಗೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ಇದಲ್ಲದೆ ವೇದಾರವರು ಟಿವಿ ಧಾರಾವಾಹಿ ಹಾಗು ಕಿರುಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿರುತ್ತಾರೆ. ಇವರ ಕಥೆಗಳು ಆಕಾಶವಾಣಿಯಲ್ಲಿಯೂ ಬಿತ್ತರಗೊಂಡಿವೆ. ವೇದಾಮಂಜುನಾಥನ್ ರವರ ಮಕ್ಕಳ ...

READ MORE

Related Books