ಕತ್ತಲಲ್ಲಿ ಕಂಡ ಮಿಂಚು

Author : ಹೆಚ್.ಜಿ. ರಾಧಾದೇವಿ

₹ 120.00




Published by: ಲಕ್ಷ್ಮೀವೆಂಕಟೇಶ್ವರ ಪ್ರಕಾಶನ
Address: ನ0.298,6ನೇ ಕ್ರಾಸ್ ತ್ರಿವೇಣಿ ರಸ್ತೆ, ಯಶವಂತಪುರ,ಬೆಂಗಳೂರು -560022

Synopsys

ಕಾದಂಬರಿಗಾರ್ತಿ ಹೆಚ್.ಜಿ..ರಾಧಾದೇವಿ ಅವರ ಸಾಮಾಝಿಕ ಕಾದಂಬರಿ ‘ಕತ್ತಲಲ್ಲಿ ಕಂಡ ಮಿಂಚು’. ಕಾದಂಬರಿಯ ನಾಯಕಿ ಹೇಮಳ ಕತ್ತಲೆ ತುಂಬಿದ ಬಾಳಿನಲ್ಲಿ ಬೆಳಕಿನ ಮಿಂಚು ಮೂಡಿತೇ ಅನ್ನೋದೆ ಕಾದಂಬರಿಯ ತಿರುಳು. .ಸಮಾಜದಲ್ಲಿ ಹೇಗೆ ಹೆಣ್ಣು ಮಕ್ಕಳು ಆತ್ಮ ಸ್ಥೈರ್ಯ ಕಳೆದುಕೊಳ್ಳದೆ ಜೀವನದಲ್ಲಿ ಪ್ರಗತಿ ಕಾಣಬೇಕು ಎನ್ನುವುದೇ ರಾಧಾ ದೇವಿಯವರ "ಕತ್ತಲಲ್ಲಿ ಕಂಡ ಮಿಂಚು " ಕಾದಂಬರಿ ಸಾರುವ ಸಂದೇಶ.

About the Author

ಹೆಚ್.ಜಿ. ರಾಧಾದೇವಿ
(30 January 1952 - 09 November 2006)

ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್‌. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.  ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ  ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...

READ MORE

Related Books