ಡಾ. ಕೆ. ಶಿವರಾಮ ಕಾರಂತರ ’ಜಗದೋದ್ಧಾರ-ನಾ’ ಕಾದಂಬರಿಯು ಈ ಮೊದಲು 1964ರಲ್ಲಿ ಪ್ರಕಟಗೊಂಡಿತ್ತು. ಈವರೆಗೆ ಐಳು ಮುದ್ರಣ ಕಂಡಿದೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿರುವಂತೆ ’ಯದಾ ಯದಾಹಿ ಧರ್ಮಸ್ಯ...’ ಎಂದರೆ ಕಾಲಕಾಲಕ್ಕೆ ಅಧರ್ಮ-ಗ್ಲಾನಿ ಹೆಚ್ಚುತ್ತಿದ್ದಂತೆ ತಾನು ಅವತರಿಸುವುದಾಗಿ ಅಭಯ ನೀಡುತ್ತಾನೆ. ಪುರಾಣಗಳಿಲ್ಲಿರುವಂತೆ ದೇವರು ಈಗಾಗಲೇ ಸಾಕಷ್ಟು ಅವತಾರಗಳನ್ನು ಪಡೆದಿದ್ದಾನೆ. ಅಂದರೆ, ಜಗತ್ತಿನಲ್ಲಿ ಅಧರ್ಮವೇ ಹೆಚ್ಚಿದೆ ಎಂದರ್ಥ. ದೇಶಕ್ಕೆ ಗ್ಲಾನಿ ಬಂದಾಗ ದೇವರು ಅವತರಿಸುವ ಬದಲು, ಗ್ಲಾನಿಗೆ ಗಿರಾಕಿಗಳು ಹೆಚ್ಚುತ್ತಿದ್ದಂತೆ, ಅದರದೇ ವ್ಯಾಪಾರ-ವ್ಯವಹಾರಗಳು ಬೆಳೆಯಲು ಆತ ಅವತರಿಸುತ್ತಾನೆ ಎಂದು ತಿಳಿಯಬೇಕು. ಇಂತಹ ಕ್ರಾಂತಿಕಾರಿ ಚಿಂತನೆಯ ಮೂಸೆಯಿಂದ ಕಾದಂಬರಿಯ ವಿಷಯ ವಸ್ತು ರೂಪುಗೊಂಡಿದೆ.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MORE